ಕಲಾವಿದರನ್ನು ಪ್ರೋತ್ಸಾಹಿಸಿದರೆ, ಕಲೆ ಉಳಿಯಲು ಸಾಧ್ಯ

0
22

ದಾವಣಗೆರೆ:

ಕಲಾವಿದರನ್ನು ಗುರುತಿಸಿ ಬೆಳೆಸಿದಾಗ ಕಲೆಯು ಸಹ ಉಳಿಯಲು ಸಾಧ್ಯ ಎಂದು ವಿರಕ್ತ ಮಠದ ಬಸವಪ್ರಭುಶ್ರೀಗಳು ತಿಳಿಸಿದರು.

      ನಗರದ ರೋಟರಿ ಬಾಲಭವನದಲ್ಲಿ ಭಾನುವಾರ ನವಬೆಂಗಳೂರು ಕ್ಲಬ್ ಹಾಗೂ ರೋಟ್ರ್ಯಾಕ್ಟ್ ಕ್ಲಬ್ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕಲಾಸಂಭ್ರಮ 2ಕೆ 18ರ ಡ್ಯಾನ್ಸರ್ ಆಫ್ ಕರ್ನಾಟಕ ಹಾಗೂ ವಾಯ್ಸ್ ಆಫ್ ಕರ್ನಾಟಕ ಕಾರ್ಯಕ್ರಮದಲ್ಲಿ ಸಾನಿಧ್ಯ ವಹಿಸಿ ಅವರು ಮಾತನಾಡಿದರು.

      ಕಲಾ ಸಂಪತ್ತು ಎಲ್ಲಿ ಬೆಳೆಯುವುದೋ ಅಲ್ಲಿ ದೇಶದ ಸಂಪತ್ತು ಸಹ ಬೆಳೆಯಲಿದೆ. ಜಾನಪದ ನೃತ್ಯ, ಸಂಗೀತ, ಸೇರಿದಂತೆ ಕಲೆಗಳು ಹಾಗೂ ಕಲಾವಿದರನ್ನು ಬೆಳೆಸುವಂತ ಕಾಯಕ ಮಾಡಬೇಕಿದೆ. ಹಿಂದೆ ರಾಜಮಹಾರಾಜರು, ಶಿಲ್ಪಕಲೆ, ಸಂಗೀತ, ನೃತ್ಯ ಸೇರದಂತೆ ವಿವಿಧ ದೇಶದ ಕಲೆಗಳನ್ನು ಕಲಾವಿದರನ್ನು ಬೆಳೆಸಿದರು. ಇಂದು ಸಹ ಈ ಕೆಲಸ ಆಗಬೇಕಿದೆ ಎಂದು ಆಶಿಸಿದರು.

      ಇತ್ತೀಚಿಗೆ ಪೋಷಕರು ತಮ್ಮ ಮಕ್ಕಳು ವೈದ್ಯರು ಇಂಜಿನಿಯರ್ ಆಗಬೇಕೆನ್ನುತ್ತಾ ಹಣ ಗಳಿಕೆಯ ಯಂತ್ರಗಳನಾಗಿಸುತ್ತಿದ್ದಾರೆ. ಹಣ ನಮ್ಮ ಹಿಂದೆ ಬರುವುದಿಲ್ಲ. ನಮ್ಮ ಆದರ್ಶಗಳು ನಮ್ಮ ಜೊತೆಗಿರುತ್ತದೆ. ಆದ್ದರಿಂದ ಮಕ್ಕಳಿಗೆ ಆದರ್ಶದ ಗುಣಗಳ ಜೊತೆಗೆ ಅವರ ಆಸಕ್ತಿಗೆ ತಕ್ಕಂತೆ ಬೆಳೆಸಲು ಪೋಷಕರು ಮುಂದಾಗಬೇಕು. ತಬಲಾ, ಶಹನಾಯಿ ಹೊಸವಾದ್ಯ ಬರುತ್ತಿದ್ದು ಮಕ್ಕಳು ಇವುಗಳನ್ನು ಕಲಿಯಲು ಅವಕಾಶ ಕಲ್ಪಿಸಿಕೊಡಬೇಕು. ಸಂಗೀತ, ಭರತನಾಟ್ಯ ಸೇರಿದಂತೆ ಸಾಂಸ್ಕೃತಿಕ ಪ್ರಜೆ ಮತ್ತು ಕಲಾವಿದರನ್ನಾಗಿ ಮಕ್ಕಳನ್ನು ಬೆಳೆಸಬೇಕೆಂದು ಹೇಳಿದರು.

     ಕಲಾವಿದರಿಗೆ ಊಟಕೆ ತೊಂದರೆ ಹಾಗೂ ಪಿಂಚಣಿ ಸಿಗದೆ ಜೀವನ ಬಹಳ ಕಷ್ಟಕರವಾಗಿದ್ದು, ಇಂತಹ ಸಂದರ್ಭದಲ್ಲೂ ಸಹ ಈ ಸಂಸ್ಥೆ ಕಲಾವಿದರ ಸೇವೆ ಮಾಡುತ್ತಿರುವುದು ಪ್ರಶಂಸನೀಯ ಎಂದ ಅವರು, ಕಲಾವಿದರನ್ನು ಗುರುತಿಸಿ ಅವರ ಜೀವನವನ್ನು ಉತ್ತಮಗೊಳಿಸಲು ಸಂಘಟನೆಗಳು ಕೆಲಸ ಮಾಡಬೇಕೆಂದರು. 

      ಕಾರ್ಯಕ್ರಮದಲ್ಲಿ ನವ ಬೆಂಗಳೂರು ಕ್ಲಬ್ ಅಧ್ಯಕ್ಷ ಶಿವಕುಮಾರ್, ಕಾರ್ಯದರ್ಶಿ ಗಿರಿಧರ್, ಶ್ರೀಕಾಂತ್ ಬಗಾರೆ, ಉಮಾ ರಾಜಶೇಖರ್, ಪ್ರವೀಣ್ ಕುಮಾರ್, ಆನಂದಗೌಡ ಪಾಟೀಲ್, ದ್ವಾರಕೀಶ್, ಸುಮಂತ್, ಗೀತಾ, ಹರಿರೆಡ್ಡಿ, ವನಿತಾ, ಅಜ್ಗರ್, ಸಾಗರ್, ಮನು, ಮುಜಾಹುದ್ದೀನ್ ಸೇರಿದಂತೆ ಇತರರು ಇದ್ದರು.

LEAVE A REPLY

Please enter your comment!
Please enter your name here