ಕಸ ಸಂಗ್ರಹಣಾ ಆಟೋಗಳ ಟೆಂಡರ್ ನಲ್ಲಿ ಬಿಬಿಎಂಪಿ ಅಕ್ರಮ : ಟೆಂಡರ್ ರದ್ದುಪಡಿಸಿದ ಹೈಕೋರ್ಟ್

0
38

ಬೆಂಗಳೂರು:

Related image

      ಬಿಬಿಎಂಪಿಯ 565 ಆಟೋಗಳ ಖರೀದಿಗಾಗಿ ಬಿಬಿಎಂಪಿ ಕರೆದಿದ್ದ ತುರ್ತು ಟೆಂಡರ್‌ ಪ್ರಕ್ರಿಯೆಯನ್ನು ಹೈಕೋರ್ಟ್‌ ರದ್ದುಪಡಿಸಿದೆ.

      2018ರ ಜನವರಿ 4ರಂದು ಬಿಬಿಎಂಪಿ ಟೆಂಡರ್‌ ಕರೆದಿತ್ತು, ಒಣತ್ಯಾಜ್ಯ ಸಂಗ್ರಹ ಆಟೋಗಳ ಖರೀದಿಗಾಗಿ ಕರೆದಿದ್ದ  ಟೆಂಡರ್‌ನಲ್ಲಿ 28.40 ಕೋಟಿ ವೆಚ್ಚದ ಟೆಂಡರ್‌ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿತ್ತು. ಅಗತ್ಯವಿದ್ದರೆ ನಿಯಮಗಳ ಪ್ರಕಾರ ಹೊಸದಾಗಿ ಟೆಂಡರ್‌ ಕರೆಯಲಿ ಎಂದು ಹೈಕೋರ್ಟ್‌ ಸೂಚನೆ ನೀಡಿದೆ.

       ಬೆಂಗಳೂರು ನಗರದಲ್ಲಿ ಒಣಕಸ ಸಂಗ್ರಹಿಸಲಿರುವ ಆಟೋಗಳಿಗೆ ಬಿಬಿಎಂಪಿ ಅಲ್ಪಾವಧಿ ಟೆಂಡರ್‌ ಕರೆದಿತ್ತು. 565 ಆಟೋಗಳಿಗೆ ಕರೆದಿದ್ದ ಟೆಂಡರ್‌ನ್ನು ಹೈಕೋರ್ಟ್‌ ರದ್ದುಪಡಿಸಿದೆ. ಟೆಂಡರ್‌ ಕರೆಯುವಾಗ ಕರ್ನಾಟಕ ಪಾರದರ್ಶಕ ಕಾಯ್ದೆಯ ನಿಯಮ ಉಲ್ಲಂಘನೆಯಾಗಿದೆ ಎಂದು ಅರ್ಜಿ ವಿಚಾರಣೆ ವೇಳೆ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

      

LEAVE A REPLY

Please enter your comment!
Please enter your name here