ಕಾಂಗ್ರೆಸ್ ತೊರೆದು ಬನ್ನಿ – ಎಂ.ಬಿ.ಪಾಟೀಲ್ ಗೆ ಮಾತೆ ಮಹಾದೇವಿ ಸೂಚನೆ

0
25

ಬೆಂಗಳೂರು:

“ಮಾಜಿ ಸಚಿವ, ಬಬಲೇಶ್ವರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಂ ಬಿ ಪಾಟೀಲರು ಕಾಂಗ್ರೆಸ್ ತೊರೆಯಲಿ” ಎಂದು ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾದೇವಿ ಹೇಳಿದ್ದಾರೆ.

     

      ಬೆಂಗಳೂರಿನ ನ ಪ್ರೆಸ್ ಕ್ಲಬ್ ನಲ್ಲಿ ಸುದ್ದಿ ಗೋಷ್ಠಿ ನಡೆಸಿದ ಅವರು, ಲಿಂಗಾಯತ ಪ್ರತ್ಯೇಕ ಧರ್ಮಕ್ಕಾಗಿ ಹೋರಾಡಿದ ಎಂ ಬಿ ಪಾಟೀಲರಿಗೆ ಮಂತ್ರಿಸ್ಥಾನ ಸಿಗದಿರುವುದು ಬೇಸರ ತಂದಿದೆ. ಪಕ್ಷ ಅವರಿಗೆ ಮೋಸ ಮಾಡಿದೆ. ಅವರು ಕಾಂಗ್ರೆಸ್ ತೊರೆಯಬೇಕು’ ಎಂದು ಮಾತೆ ಮಹಾದೇವಿ ಬೇಸರ ವ್ಯಕ್ತಪಡಿಸಿದ್ದಾರೆ. 

      ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಂಪುಟದಲ್ಲಿ ಸಚಿವ ಸ್ಥಾನ ನೀಡದೆ ಇರುವ ಕಾರಣ ಬಂಡಾಯ ಎದ್ದಿರುವ ಎಂ.ಬಿ.ಪಾಟೀಲರು ಈಗಾಗಲೇ ದೆಹಲಿಗೂ ಎಡತಾಕಿಬಂದಿದ್ದಾರೆ. ಉಪಮುಖ್ಯಮಂತ್ರಿ ಸ್ಥಾನದ ಮೇಲೂ ಕಣ್ಣಿಟ್ಟಿದ್ದ ಎಂ.ಬಿ.ಪಾಟೀಲರಿಗೆ ಸಂಪುಟದಲ್ಲಿ ಯಾವುದೇ ಸ್ಥಾನ ನೀಡದಿರುವುದು ಅವರಿಗೆ ಮಾಡಿದ ಅನುಮಾನ ಎಮದು ಮಾತೆ ಮಹಾದೇವಿ ಅಭಿಪ್ರಾಯಪಟ್ಟಿದ್ದಾರೆ. 

LEAVE A REPLY

Please enter your comment!
Please enter your name here