ಕಾಂಗ್ರೆಸ್ ಮುಕ್ತ ದೇಶ : ಅಸಾಧ್ಯದ ಮಾತು

0
5

 ಬೆಂಗಳೂರು:

      ಕಾಂಗ್ರೆಸ್ ಮುಕ್ತ ದೇಶ ಮಾಡುವುದಾಗಿ ಬಿಜೆಪಿಯು ಹೇಳುತ್ತಿದೆ. ಆದರೆ, ಅದು ಅಸಾಧ್ಯದ ಮಾತು ಎಂದು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಅವರು ಹೇಳಿದ್ದಾರೆ.

      ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಎ.ಐ.ಸಿ.ಸಿ.ಯು ಜಾರಿಗೊಳಿಸಿರುವ ಶಕ್ತಿ ಯೋಜನೆಗೆ ಚಾಲನೆ ನೀಡಿ ಮಾತನಾಡುತ್ತಿದ್ದ ಅವರು, ಬಿಜೆಪಿ ಮುಕ್ತ ದೇಶವನ್ನಾಗಿ ಮಾಡಬಹುದು. ಆದರೆ. ಕಾಂಗ್ರೆಸ್ ಮುಕ್ತ ದೇಶವನ್ನಾಗಿ ಮಾಡಲು ಸಾಧ್ಯವಿಲ್ಲ.ಎಂದ ಅವರು, ಕರ್ನಾಟಕದಲ್ಲಿ ಬಿಜೆಪಿಗೆ ಶೇ.36 ರಷ್ಟು, ಇನ್ನೂ ಕರಾವಳಿ ಭಾಗದಲ್ಲಿ ಶೇ.30 ರಷ್ಟು ಮತಗಳು ಬಿಟ್ಟರೆ, ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಶಕ್ತಿ ಕುಸಿದಿದೆ. ರಾಜ್ಯದಲ್ಲಿ ಹೆಚ್ಚಿನ ಮತಗಳನ್ನು ಪಡೆದಿಲ್ಲ. ಕಾಂಗ್ರೆಸ್ ಪಕ್ಷಕ್ಕೆ ಶೇ.38 ರಷ್ಟು ಮತಗಳು ಬಂದಿದೆ.ಕೆಲವು ಕಡೆ ನಮ್ಮ ಸಂಘಟನೆಗಳು ದುರ್ಬಲವಾಗಿವೆ ಎಂದು ತಿಳಿಸಿದರು.

      ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಮಾತನಾಡಿ, ಈ ಶಕ್ತಿ ಯೋಜನೆ ಅತ್ಯಂತ ಪ್ರಮುಖವಾದ ಯೋಜನೆ ಇದು ದೊರಕಿರುವುದು ನಮ್ಮ ಪುಣ್ಯ. ಈ ಯೋಜನೆಯಿಂದ ಕಾರ್ಯಕರ್ತರ ಧ್ವನಿಯನ್ನು ನಾಯಕರಿಗೆ ಮುಟ್ಟಿಸುವ ಒಂದು ಕಾರ್ಯವಾಗಿದೆ.ಈ ಯೋಜನೆಯನ್ನು ಸಮಾರೋಪಾದಿಯಾಗಿ ಜಾರಿಗೆ ತರಲಾಗುವುದು. ಇದನ್ನು ನಾವು ನಿರಂತರವಾಗಿ ಕಾಪಾಡಿಕೊಳ್ಳಬೇಕಿದೆ.ಎಂದರು.

      ಜಲಸಂಪನ್ಮೂಲ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಅಖಂಡ ಕರ್ನಾಟಕಕ್ಕೆ ನಾವು ಮುಂದಾಗಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜ್ಯದ ಯಾವುದೇ ಭಾಗಕ್ಕೆ ತಾರತಮ್ಯವೆಸಗಿಲ್ಲ, ಅಭಿವೃದ್ದಿಗೆ ಮುಂದಾಗಿದೆ.ಇದನ್ನು ಬಿಜೆಪಿಯು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತದೆ ಎಂದು ದೂರಿದರು.ಬಿಜೆಪಿ ಪಾದ ಯಾತ್ರೆಯಲ್ಲಿ ರೈತರು, ಸ್ಥಳೀಯುರು ಭಾಗವಹಿಸಿದ್ದಾರೆ ಎಂದು ಹೇಳುತ್ತಾರೆ. ಆದರೆ,ಹಸಿರು ಶಾಲು ಹಾಕಿದವರೆಲ್ಲಾ ರೈತರಲ್ಲ, ಬಿಜೆಪಿಯು ಸರ್ಕಾರವನ್ನು ಕಾಮಾಲೆ ಕಣ್ಣಿನಿಂದ ನೋಡುತ್ತಿದೆ, ಅಭಿವೃದ್ದಿಯನ್ನು ನೋಡಿ ಸಹಿಸಿ ಕೊಳ್ಳಲಾಗುತ್ತಿಲ್ಲ, ಕೇಂದ್ರ ಸರ್ಕಾರವು ಕೇವಲ ಹತ್ತು ರೂಪಾಯಿಯನ್ನು ಸಹಾಯಧನವಾಗಿ ನೀಡಿಲ್ಲ, ನಾವು, ರೈತರ 40 ಸಾವಿರ ಕೋಟಿ ರೂ.ಗಳ ಸಾಲವನ್ನು ಮನ್ನಾ ಮಾಡಿರುವುದಾಗಿ ತಿಳಿಸಿದರು.

LEAVE A REPLY

Please enter your comment!
Please enter your name here