ಕಾಂಗ್ರೇಸ್‍ಗೆ ತೀವ್ರ ಮುಖಭಂಗ-ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರಗೆ ಬಾರಿ ಗೆಲುವು

0
26

ಜಗಳೂರು:

ಜಗಳೂರು ವಿಧಾನ ಸಭಾಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ ಪ್ರತಿಸ್ಪರ್ಧಿ ಕಾಂಗ್ರೇಸ್ ಅಭ್ಯರ್ಥಿ ಹೆಚ್.ಪಿ.ರಾಜೇಶ್ ವಿರುದ್ಧ 29221 ಭಾರಿ ಅಂತರದಿಂದ ಗೆಲವು ಸಾಧಿಸಿದ್ದು ಕಾಂಗ್ರೇಸ್‍ಗೆ ತೀವ್ರ ಮುಖಭಂಗವಾಗಿದೆ. ಕಳೆದ ಬಾರಿ ಸೋತ ಸೇಡನ್ನು ಈ ಬಾರಿಯ ವಿಧಾನ ಸಭಾ ಚುನಾವಣೆಯಲ್ಲಿ ತೀರಿಸಿಕೊಂಡಿದ್ದಾರೆ.

ಕ್ಷೇತ್ರದ ಮತದಾರರು ನನ್ನ ಮೇಲೆ ನಂಬಿಕೆ ಇಟ್ಟು 78948 ಮತಗಳನ್ನು ನೀಡಿ 29221 ಮತಗಳ ಅಂತರದಿಂದ ಗೆಲವು ಸಾಧಿಸಲು ಕಾರಣಕಾರ್ತರಾಗಿರುವ ನಿಮಗೆ ನಾನು ಋಣಿಯಾಗಿದ್ದು ,ನಿಮ್ಮ ನಂಬಿಕೆಗೆ ತಕ್ಕಂತೆ ನಿಮ್ಮ ಸಲಹೆಯಂತೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಇದು ನನ್ನ ಗೆಲುವಲ್ಲ ಮತದಾರರ ಗೆಲವು ನಾನು ನಿಮ್ಮ ಸೇವಕ. ನನ್ನ ಗೆಲವುಗೆ ಸಹಕರಿಸಿದ ಕ್ಷೇತ್ರದ ಎಲ್ಲಾ ಮತದರರಿಗೂ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಶ್ರೀರಾಮಲು, ಜಿ.ಎಂ.ಸಿದ್ದೇಶ್ವರ್,ಮಾಜಿ ಶಾಸಕರಾದ ಗುರುಸಿದ್ದನಗೌಡ್ರು ಸೇರಿದಂತೆ ಗೆಲವುಗೆ ಶ್ರಮಿಸಿದ ಬಿಜೆಪಿಯ ಕಾರ್ಯಕರ್ತರಿಗೂ ,ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

ಕ್ಷೇತ್ರವು ಈ ಭಾರಿ ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ಗಮನ ಸೆಳೆದಿದ್ದು, ಜಿದ್ದಾ ಜಿದ್ದಿಯ ಅಖಾಡವಾಗಿ ಪರಿಣಮಿಸಿತ್ತು. ಶಾಸಕ ಹೆಚ್.ಪಿ.ರಾಜೇಶ್ ಮತ್ತು ಎಸ್.ವಿ.ರಾಮಚಂದ್ರ ನಡುವೆ ಮೇಲ್ನೋಟಕ್ಕೆ ಸಮಬಲದ ಹೋರಾಟ ನಡೆಯಲಿದೆ ಎಂದು ರಾಜಕೀಯ ವಿಶ್ಲೇಷಕರು ಅಂದಾಜು ಮಾಡಿದ್ದರೂ ಸಹ ಎಸ್.ವಿ.ರಾಮಚಂದ್ರ ಕ್ಷೇತ್ರದ ಮತದಾರರ ಮನಸ್ಸು ಗೆದ್ದಿದ್ದರು.
ಬಿಜೆಪಿ ಅಭ್ಯರ್ಥಿ ಎಸ್.ವಿ.ರಾಮಚಂದ್ರ 78948 ಮತಗಳನ್ನು ಪಡೆದು ಗೆಲವು ಸಾಧಿಸಿದ್ದಾರೆ. ಕಾಂಗ್ರೇಸ್‍ನ ರಾಜೇಶ್ 49727 ಮತಗಳನ್ನು ಪಡೆಯುವ ಮೂಲಕ 29221 ಮತಗಳಿಂದ ಪರಾಭವಗೊಂಡಿದ್ದಾರೆ.

ಒಟ್ಟಾರೆ ಕ್ಷೇತ್ರದಲ್ಲಿ ಶಾಸಕ ಹೆಚ್.ಪಿ.ರಾಜೇಶ್ ಮುಖಬಂಗವಾಗಿದ್ದು, 2 ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗಿದೆ. ಆದರೇ ಸ್ವಲ್ಪ ಮಟ್ಟಿಗೆ ಜೆಡಿಎಸ್ ಅಭ್ಯರ್ಥಿ ಚಿಕ್ಕಮ್ಮನಹಟ್ಟಿ ದೇವೇಂದ್ರಪ್ಪ 13.401 ಮತಗಳನ್ನು ಪಡೆಯುವ ಮೂಲಕ ತನ್ನ ಪ್ರಾಬಲ್ಯ ಮೆರೆದಿದ್ದು, 3 ಸ್ಥಾನ ಗಳಿಸಿ ತಮ್ಮ ಸ್ಥಾನವನ್ನು ವಿಸ್ತಾರಗೊಳಿಸಿದೆ.

ಇನ್ನು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎ.ಎಲ್.ಪುಷ್ಪಾ 1.856 ಮತಗಳನ್ನು ಪಡೆಯುವ ಮೂಲಕ ಠೇವಣಿ ಕಳೆದುಕೊಂಡಿದ್ದು, ಒಟ್ಟು 12 ಅಭ್ಯರ್ಥಿಗಳಲ್ಲಿ ಬಿಎಸ್‍ಪಿ ಸೇರಿದಂತೆ 9 ಅಭ್ಯರ್ಥಿಗಳು ತಮ್ಮ ಠೇವಣಿಗಳನ್ನು ಕಳೆದುಕೊಂಡಿದ್ದಾರೆ.

ಎಸ್.ವಿ.ರಾಮಚಂದ್ರ ಗೆಲವು ಸಾಧಿಸಿ ದಾವಣಗೆರೆಗೆ ಮನೆಗೆ ಆಗಮಿಸುತ್ತಿದ್ದಂತೆ ಅಲ್ಲಿ ಬಿಜೆಪಿ ಕಾರ್ಯಕರ್ತರು ಜೈಕಾರ ಘೋಷಣೆ ಕೂಗುತ್ತಾ ಸ್ವಾಗತಿಸುತ್ತಿದ್ದರೆ , ತಮ್ಮ ಮನೆಯೊಡತಿಇಂದಿರಮ್ಮ ಆರತಿ ಬೆಳಗಿಸಿ ಮನೆಯೊಳಗೆ ಬರ ಮಾಡಿಕೊಂಡರು.

ನಂತರ ನೇರವಾಗಿ ಜಗಳೂರುಗೆ ಆಗಮಿಸಿ ಅಲ್ಲಿಂದ ಗಾಣಗಟ್ಟೆ ಮಾಯಮ್ಮ ದೇವಿಯ ದರ್ಶನ ಪಡೆದು ಕ್ಷೇತ್ರಕ್ಕೆ ಆಗಮಿಸಿದರು. ನಂತರ ಗೆಲವುಗೆ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ವಿಜಿಯೋತ್ಸವ ಆಚರಿಸಿದರು.
ನೂತನವಾಗಿ ಗೆಲವು ಸಾಧಿಸಿ ಜಗಳೂರು ವಿಧಾನ ಸಭಾಕ್ಷೇತ್ರದ ಅಭ್ಯರ್ಥಿ ಎಸ್.ವಿ.ರಾಮಚಂದ್ರರವರಿಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಸಿಹಿ ತಿನ್ನಿಸುವ ಮೂಲಕ ದಾವಣಗೆರೆಯಲ್ಲಿ ಅಭಿನಂದಿಸಿದರು.

ಕ್ಷೇತ್ರದ ಮತದಾರರು ನನ್ನ ಮೇಲೆ ನಂಬಿಕೆ ಇಟ್ಟು 78948 ಮತಗಳನ್ನು ನೀಡಿ 29221 ಮತಗಳ ಅಂತರದಿಂದ ಗೆಲವು ಸಾಧಿಸಲು ಕಾರಣಕಾರ್ತರಾಗಿರುವ ನಿಮಗೆ ನಾನು ಋಣಿಯಾಗಿದ್ದು ,ನಿಮ್ಮ ನಂಬಿಕೆಗೆ ತಕ್ಕಂತೆ ನಿಮ್ಮ ಸಲಹೆಯಂತೆ ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ. ಇದು ನನ್ನ ಗೆಲುವಲ್ಲ ಮತದಾರರ ಗೆಲವು ನಾನು ನಿಮ್ಮ ಸೇವಕ. ನನ್ನ ಗೆಲವುಗೆ ಸಹಕರಿಸಿದ ಕ್ಷೇತ್ರದ ಎಲ್ಲಾ ಮತದರರಿಗೂ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಸಂಸದ ಶ್ರೀರಾಮಲು, ಜಿ.ಎಂ.ಸಿದ್ದೇಶ್ವರ್,ಮಾಜಿ ಶಾಸಕರಾದ ಗುರುಸಿದ್ದನಗೌಡ್ರು ಸೇರಿದಂತೆ ಗೆಲವುಗೆ ಶ್ರಮಿಸಿದ ಬಿಜೆಪಿಯ ಕಾರ್ಯಕರ್ತರಿಗೂ ,ಅಭಿಮಾನಿಗಳು ಸೇರಿದಂತೆ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ.

LEAVE A REPLY

Please enter your comment!
Please enter your name here