ಕಾಗಿನೆಲೆ ಶ್ರೀಗಳ ಹೇಳಿಕೆಗೆ ವಿಶ್ವನಾಥ್ ಕೆಂಡಾಮಂಡಲ

0
30

 ಬೆಂಗಳೂರು:

  ಒಬ್ಬರ ಪರ ವಕಾಲತ್ತು ವಹಿಸುವುದು ಸರಿಯಲ್ಲ ಎಂದು ಜೆಡಿಎಸ್ ಶಾಸಕ ಹೆಚ್.ವಿಶ್ವನಾಥ್ ಅವರು ಕಾಗಿನೆಲೆಶ್ರೀಗಳಿಗೆ ತಿರುಗೇಟು ನೀಡಿದ್ದಾರೆ.

      ಬೆಂಗಳೂರಿನಲ್ಲಿ ಮಾತನಾಡುತ್ತಿದ್ದ ಅವರು, ಕಾಗಿನೆಲೆ ಶ್ರೀಗಳಾದ ಶ್ರೀ.ನಿರಂಜನಾನಂದಪುರಿ ಸ್ವಾಮಿಗಳು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಮಾತನಾಡುವುದು ಸರಿಯಲ್ಲ. ಏಕೆಂದರೆ, ಮಠಗಳಿಂದ ಜಾತ್ಯಾತೀತವಾಗಿ ಸಮಾಜಕ್ಕೆ ಒಳ್ಳೆಯದಾಗ ಬೇಕು. ಸಿದ್ದರಾಮಯ್ಯ ಅವರ ನಡವಳಿಕೆಯಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸೋಲನ್ನನುಭವಿಸಲು ಕಾರಣವಾಗಿದೆ. ಸಿದ್ದರಾಮಯ್ಯ ನನ್ನ ನಡುವೆ ಯಾವುದೇ ರೀತಿಯ ವೈರತ್ವವಿಲ್ಲ. ಮುನಿಸು ಮಾತ್ರ. ಎಂದು ಹೇಳಿದರು.

LEAVE A REPLY

Please enter your comment!
Please enter your name here