ಕಾಗೋಡು ತಿಮ್ಮಪ್ಪರಿಂದ ರಾಜಕೀಯ ನಿವೃತ್ತಿ ಘೋಷಣೆ

0
26

ಬೆಂಗಳೂರು:

Related image

 

      ಹಿರಿಯ ರಾಜಕಾರಣಿ,  ಕಾಂಗ್ರೆಸ್ ನಾಯಕ, ಸಮಾಜವಾದಿ ಚಿಂತಕ, ಮುತ್ಸದ್ದಿ ರಾಜಕಾರಣಿ, ಮಾಜಿ ಸಚಿವ ಸಾಗರದ ಕಾಗೋಡು ತಿಮ್ಮಪ್ಪ ಅವರು ಮಂಗಳವಾರ ಸಕ್ರಿಯ ರಾಜಕಾರಣಕ್ಕೆ ವಿದಾಯ ಹೇಳಿದ್ದಾರೆ.

      ಇಂದು ವಿಧಾನಸೌಧದ ಕಾರಿಡಾರ್ ನಲ್ಲಿ ಏಕಾಂಗಿಯಾಗಿ ಮಾಜಿ ಹೊರಟಿದ್ದ ಕಾಗೋಡು ತಿಮ್ಮಪ್ಪ ರವರು ಅತ್ಯಂತ ಭಾರವಾದ ಮನಸಿನಿಂದ ಮುಂಚೂಣಿ ರಾಜಕಾರದಿಂದ ಹಿಂದೆ ಸರಿಯುವ ತಮ್ಮ ನಿರ್ಧಾರವನ್ನು ಪ್ರಕಟಿಸಿದ್ದಾರೆ.
‘ಚುನಾವಣಾ ರಾಜಕೀಯ ಸಾಕಾಗಿದೆ ಇಷ್ಟು ವರ್ಷ ಹೋರಾಟ ಮಾಡಿದ್ದು ಸಾಕು, ಈಗ ನನಗೆ ವಯಸ್ಸಾಗಿದೆ, ಇನ್ನು ಮುಂದೆ ಹೋರಾಟ ಸಾಧ್ಯವಿಲ್ಲ’ ಎಂದು ತಿಳಿಸಿದ್ದಾರೆ.

      ಈ ಮೂಲಕ ಹೋರಾಟದ ಹಿನ್ನೆಲೆ, ಜನಪರ ಕಾಳಜಿ ಹಾಗೂ ಮೌಲ್ಯಧಾರಿತ ರಾಜಕಾರಣದ ಹಿರಿಯ ತಲೆಮಾರಿನ ಪ್ರಮುಖ ನಾಯಕ ಮುಖ್ಯವಾಹಿನಿಯಿಂದ ದೂರ ಉಳಿದಂತಾಗಿದೆ.

LEAVE A REPLY

Please enter your comment!
Please enter your name here