ಕಾರು ಅಡ್ಡಗಟ್ಟಿ ಹಲ್ಲೆ

0
34

ತುರುವೇಕೆರೆ

ತಾಲ್ಲೂಕಿನ ಮಾಯಸಂದ್ರ ಸಮೀಪದ ಟಿ.ಬಿ.ಕ್ರಾಸ್ ನಿವಾಸಿ ಸಚಿನ್ ಎನ್ನುವವರ ಮೇಲೆ ಅಪರಿಚಿತರು ಕಾರು ಅಡ್ಡಗಟ್ಟಿ ಹಲ್ಲೆಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ತಾಲ್ಲೂಕಿನ ಟಿ.ಬಿ.ಕ್ರಾಸ್ ನಿವಾಸಿ ಸಚಿನ್ ಎಂಬುವರು ಯಡಿಯೂರಿನಿಂದ ಮಾಯಸಂದ್ರ ಮಾರ್ಗವಾಗಿ ಕಾರಿನಲ್ಲಿ ಒಬ್ಬರೆ ಮನೆಗೆ ಹಿಂತಿರುಗುತ್ತಿದ್ದ ಸಂದರ್ಭದಲ್ಲಿ ಸುಮಾರು ರಾತ್ರಿ 11 ಗಂಟೆ ವೇಳೆಯಲ್ಲಿ ಮಾರ್ಗಮಧ್ಯೆ ದಾಸಿಹಳ್ಳಿ ಸಮೀಪದ ರಸ್ತೆಯಲ್ಲಿ ಎರಡು ಬೈಕ್‍ನಲ್ಲಿ ನಾಲ್ವರು ಅಪರಿಚಿತರು ವಿಳಾಸ ಕೇಳುವ ನೆಪದಲ್ಲಿ ಕಾರು ಅಡ್ಡಗಟ್ಟಿ ಥಳಿಸಿದ್ದಾರೆ. ಇದೇ ಮಾರ್ಗದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್ ಬಂದಿದ್ದರಿಂದ ಸ್ಥಳದಿಂದ ಅಪರಿಚಿತರು ಕಾಲ್ಕಿತ್ತಿದ್ದಾರೆ. ನಂತರ ಗಾಯಾಳು ಸಚಿನ್ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ತಡರಾತ್ರಿಯೇ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಹಲ್ಲೆಗೊಳಗಾದ ಸಚಿನ್ ಮಾತನಾಡಿ ಮಾಯಸಂದ್ರ ಹಾಗೂ ಟಿ.ಬಿ.ಕ್ರಾಸ್‍ನಲ್ಲಿನ ಪರಿಚಿತರೆ ನನ್ನ ಏಳಿಗೆಯನ್ನು ಸಹಿಸದೆ ವೈಷಮ್ಯದಿಂದ ನನ್ನ ಮೇಲೆ ಅಪರಿಚಿತರಿಂದ ಹಲ್ಲೆ ಮಾಡಿಸಿದ್ದಾರೆ. ನನ್ನ ಬೆಳವಣಿಗೆ ಸಹಿಸದೆ ಇಂತಹ ಕೃತ್ಯಕ್ಕೆ ಕೈ ಹಾಕಿದ್ದು, ಆರೋಪಿಗಳು ಹಾಗೂ ಆರೋಪಕ್ಕೆ ಕುಮ್ಮಕ್ಕು ನೀಡಿದವರನ್ನು ಬಂಧಿಸಬೇಕೆಂದು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here