ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ಸಹಾಯಧನ

0
25

ಪಾವಗಡ:

      ಕಾರ್ಮಿಕರಿಗೆ ಮನೆ ಕಟ್ಟಿಕೊಳ್ಳಲು 5 ಲಕ್ಷ ಸಹಾಯಧನ ಮತ್ತು ಪಾನ್ ಕಾರ್ಡ್ ನೀಡುವ ಯೋಜನೆ ಜಾರಿಗೊಳಿಸಲಾಗಿದೆ ಎಂದು ಕಾರ್ಮಿಕ ಸಚಿವ ವೆಂಕಟರವಣಪ್ಪ ತಿಳಿಸಿದರು.

      ಶನಿವಾರ ವಿಧಾನಪರಿಷತ್ ಸದಸ್ಯ ವೈ.ಎ. ನಾರಯಣಸ್ವಾಮಿ ಅಭಿಮಾನಿ ಬಳಗದಿಂದ ಪಟ್ಟಣದ ಎಸ್.ಎಸ್.ಕೆ. ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ, ರಾಜ್ಯದಲ್ಲಿರುವ ಕಾರ್ಮಿಕರ ನೆರವಿಗಾಗಿ ಮನೆ ಕಟ್ಟಿಕೊಳ್ಳಲು 5 ಲಕ್ಷ ನೀಡುವ ಯೋಜನೆಯನ್ನು ಜಾರಿಗೊಳಿಸಲಾಗಿದೆ, ಕಾರ್ಮಿಕರನ್ನು ಗುರ್ತಿಸಿ ನೊಂದಣಿ ಮಾಡಲು ರಾಜ್ಯದ ಪ್ರತಿ ಗ್ರಾ.ಪಂ.ವ್ಯಾಪ್ತಿಗೆ ಒಬ್ಬ ನೌಕರನನ್ನುನೇಮಿಸಿಕೊಳ್ಳಲಾಗುವುದು,ಬೆಂಗಳೂರಿನ ಪೀಣ್ಯ ಕೈಗಾರಿಕಾ ವಲಯದಲ್ಲಿ ಕಾರ್ಮಿಕರಿಗಾಗಿ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗುವುದು, ಮತ್ತು ಕಾರ್ಮಿಕ ಮಕ್ಕಳಿಗೆ ಕೌಶಲ್ಯ ತರಬೇತಿ ನೀಡಿ ಅವರಿಗೆ ಉದ್ಯೋಗ ಕಲ್ಪಿಸಿಕೊಡಲಾಗುವುದು ಎಂದರು.

      ನೌಕರರ ಮಕ್ಕಳು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಸೇರಿಸುತ್ತಿರುವುದರಿಂದಲೇ ಗ್ರಾಮೀಣ ಭಾಗದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವಂತೆ ತಲುಪಿದ್ದು, ಮೊದಲು ಶಿಕ್ಷಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಿ ಎಂದು ತಾಕೀತು ಮಾಡಿದರು.

      2352 ಕೋಟಿ ವೆಚ್ಚದ ಪಾವಗಡಕ್ಕೆ ಶುದ್ದ ಕುಡಿಯುವ ನೀರು ಹರಿಸುವ ತುಂಗಭದ್ರಾ ಯೋಜನೆಯ ಟೆಂಡರ್ ಪ್ರಕ್ರಿಯೆ ಮುಗಿದಿದ್ದು ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು, ಶಿಕ್ಷಕರು ವೃತ್ತಿಯನ್ನು ಪ್ರಾಮಾಣಿಕವಾಗಿ ಮಾಡಿ ಉತ್ತಮ ಹೆಸರನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

      ಬಿ.ಜೆ.ಪಿ. ಪಕ್ಷದ ವಿಧಾನಪರಿಷತ್ ಸದಸ್ಯ ವೈ.ಎ.ನಾರಾಯಣಸ್ವಾಮಿ ಮಾತನಾಡಿ, ಸರ್ಕಾರ ಇಂಗ್ಲೀಷ್ ಮಾದ್ಯಮ ಶಾಲೆಗಳನ್ನು ತೆರಯುವ ನಿರ್ಣಯ ಕೈಗೊಂಡಿರುವುದು ಸ್ವಾಗತರ್ಹ,ನಾನು ಶಾಸಕನಾಗಿ ಸೋತ ನಂತರ ಕೇವಲ 15 ದಿನಗಳ ಅಂತರದಲ್ಲಿ ವಿಧಾನಪರಿಷತ್ ಚುನಾವಣೆಯಲ್ಲಿ ನನ್ನನ್ನು ಅಯ್ಕೆಗೊಳಿಸಿದ್ದಾರಾ, ಶಿಕ್ಷಕರಿಗೆ 6 ನೇ ವೇತನ, ಮತ್ತು 30 ದಿನಗಳೊಳಗಾಗಿ ಸಂಬಳ ಮತ್ತಿತರ ಸಮಸ್ಯೆಗಳನ್ನು ಬಗೆಹರಿಸಿದ್ದು, ನನ್ನನು 3 ಬಾರಿ ಬಿ.ಜೆ.ಪಿ. ಪಕ್ಷದಿಂದ ವಿಧಾನಪರಿಷತ್ ಗೆ ಆಯ್ಕೆ ಮಾಡಿರುವುದರಿಂದ ನಿಮ್ಮ ಋಣವನ್ನು ತೀರಿಸಕೊಳ್ಳುತ್ತೇನೆ ಎಂದರು.

      ವೈ.ಎ.ನಾರಾಯಣಸ್ವಾಮಿ ಅಭಿಮಾನಿ ಬಳಗದ ಮುಖಂಡ ವಕೀಲ ಕೃಷ್ಣಾನಾಯ್ಕ,ಮಧುಗಿರಿ ಡಿ.ಡಿ.ಪಿ.ಐ. ರವಿಶಂಕರರೆಡ್ಡಿ,ಬಿಇ.ಒ. ಕುಮಾರಸ್ವಾಮಿ,ಉಪನ್ಯಾಸಕರಾದ ಶ್ರೀನಿವಾಸರೆಡ್ಡಿ, ಧನಂಜಯ, ವಿಷಯಪರೀವೀಕ್ಷಕ ಪಾಪಯ್ಯ,ಮಾಜಿ ಜಿ.ಪ. ಸದಸ್ಯ ಮಹಮದ್‍ಫಜುಲುಲ್ಲಾ,ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಟಿ.ಎನ್.ನರಸಿಂಹಯ್ಯ, ಶಿಕ್ಷಕರ ಸಂಘದ ನರಸಪ್ಪ, ಶಿಕ್ಷಕರಾದ ನಾರಾಯಣಪ್ಪ, ಕೃಷ್ಣಪ್ಪ, ಆಶೋಕ್, ಮಲ್ಲಿಕಾರ್ಜುನ್, ಜಿ.ವೆಂಕಟೇಶ್, ದೈಹಿಕ ಶಿಕ್ಷಣ ನಿರ್ದೆಶಕ ಬಸವರಾಜು, ಶಂಕರ್‍ನಾಯ್ಕ, ಮತ್ತಿತರಿದ್ದರು.

 

LEAVE A REPLY

Please enter your comment!
Please enter your name here