ಕಾಲೇಜಿನ ಒಂದೇ ತರಗತಿಯಲ್ಲಿ 4 ಅವಳಿ ವಿದ್ಯಾರ್ಥಿಗಳು!!

0
31

ಕುಣಿಗಲ್ :

ಮಕ್ಕಳಿರುವುದು ಸಹಜ ಆದರೆ ಒಂದೇ ತೆರನಾಗಿ ಒಂದೇ ಶಾಲೆಯಲ್ಲಿ ಕಾಣಿಸಿಕೊಂಡಿರುವುದು ಅಚ್ಚರಿ ಹಾಗೂ ಕುತುಹಲ ಮೂಡಿಸಿದೆ. ಪಟ್ಟಣದ ಜ್ಞಾನಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ 4 ಜೋಡಿ ಅವಳಿ ಮಕ್ಕಳು ಓದುತಿರುವುದು ವಿಶೇಷವಾಗಿದೆ. ಜೊತೆಯಲ್ಲಿ ಓದುತ್ತಿರುವ ಸಹಪಾಠಿಗಳು ಮತ್ತು ಉಪನ್ಯಾಸಕರು ಸುಲಭವಾಗಿ ಕಂಡು ಗುರುತಿಸುವುದು ಕಷ್ಟವಾಗಿದ್ದು ಹಲವು ಬಾರಿ ಪಾಠ ಪ್ರವಚನಗಳ ವೇಳೆ ಪ್ರಶ್ನೆ ಕೇಳುವ ಸಂದರ್ಭದಲ್ಲೂ ಉಪನ್ಯಾಸಕರು ತಡಬಡಾಯಿಸುವ ಪ್ರಸಂಗಗಳು ನಡೆದು ನಗೆಪಾಠಲಿಗೆ ಗುರಿಯಾಗುತ್ತಿರುವುದು ಉಂಟಾಗುತ್ತಿದೆ.

ಚಿಕ್ಕೋನಹಳ್ಳಿ ಗ್ರಾಮದ ಸಿದ್ದಲಿಂಗಯ್ಯ ಮತ್ತು ಶಿವಲಿಂಗಮ್ಮ ದಂಪತಿಯ ಮಕ್ಕಳಾದ ಕವನ-ಕಾವ್ಯ , ಆಡಿಲಿಂಗನಪಾಳ್ಯ ಗ್ರಾಮದ ಮಂಜುನಾಥ ಮತ್ತು ರಾಜಮ್ಮ ದಂಪತಿಯ ಮಕ್ಕಳಾದ ಲತಾ-ಲಾವಣ್ಯ ಹಾಗೂ ಕೊತ್ತಗೆರೆಯ ಜಗದೀಶ್ ಮತ್ತು ಗೌರಮ್ಮ ದಂಪತಿಯ ಮಕ್ಕಳು ಅರುಣ-ವರುಣ ಈ ಮೂರು ಜೋಡಿಗಳು ಕಳೆದ ಸಾಲಿನಲ್ಲಿ ಪ್ರಥಮ ಪಿಯುಸಿಯನ್ನು ಉತ್ತಮ ಅಂಕಗಳಿಸಿ ಇದೀಗ ದ್ವಿತೀಯ ಪಿಯುಸಿಯಲ್ಲಿ ಓದುತಿದ್ದಾರೆ. ಈ ಸಾಲಿನಲ್ಲೂ ಪ್ರಥಮ ಪಿಯುಸಿಗೆ ಮತ್ತೊಂದು ಜೋಡಿ ಹೇರೂರು ಗ್ರಾಮದ ವಜೀರ್‍ಖಾನ್ ಮತ್ತು ದಿಲ್‍ಶಾದ್ ದಂಪತಿಯ ಸಾದಿಯಾ-ಸಾನಿಯಾ ಎಂಬ ಮಕ್ಕಳು ದಾಖಲಾಗಿದ್ದು ಈ ಇಬ್ಬರೂ ಸಹ ಒಂದೇ ಹೋಲಿಕೆಯಲ್ಲಿದ್ದು ಶಿಕ್ಷಕರು ಮತ್ತು ಮಕ್ಕಳಿಗೆ ಗುರುತು ಹಿಡಿಯಲು ತಲೆನೋವಾಗಿದೆ. ಎಲ್ಲಾ ಅವಳಿಮಕ್ಕಳ ಜೋಡಿ ಒಂದೇ ತೆರನಾದ ಮುಖ ಮತ್ತು ಭಾವನೆಗಳುಳ್ಳ ಹಾಗೂ ಒಂದೇ ತರ ಧ್ವನಿಯೂ ಸಹ ಇರುವುದರಿಂದ ಜೊತೆಗೆ ಒಂದೇ ತರಗತಿಯಲ್ಲಿ ಓದುತ್ತಿರುವುದು ಸಹ ಗೊಂದಲವಾಗಿದೆ. ಯಾರ ಹೆಸರನ್ನು ಮತ್ತೊಬ್ಬರಿಗೆ ಕರೆಯುವುದರಿಂದ ನಾನು ಅವಳಲ್ಲ ಸರ್ ಎಂದಾಗ ಶಿಕ್ಷಕರು ಗೊಂದಲವಾಗಿರುವುದುಂಟು ಎಂದು ಪ್ರಾಂಶುಪಾಲರಾದ ರಮೇಶ್ ಪತ್ರಿಕೆಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

LEAVE A REPLY

Please enter your comment!
Please enter your name here