ಕಾವೇರಿ ಸ್ಕೀಂ ಕರಡು ತಡೆ ಮನವಿ :ಸುಪ್ರೀಂ ತಿರಸ್ಕಾರ

0
8

ನವದೆಹಲಿ:

ರಾಜ್ಯದಲ್ಲಿ ನಡೆಯುತ್ತಿರುವ ತರತರಹದ ರಾಜಕಾರಣದ ಬೆಳವಣಿಗೆಗಳ ಮಧ್ಯೆಯಲ್ಲಿ ಜವಾಬ್ದಾರಿಯುತವಾಗಿ ನಡೆಯಬೇಕಿದ್ದ  ಕಾವೇರಿ ನಿರ್ವಹಣಾ ಸ್ಕೀಂ ಕರಡನ್ನು ಅಂತಿಮಗೊಳಿಸುವ ಕಾರ್ಯವನ್ನು ತಡೆಹಿಡಿಯಬೇಕೆಂದು ಸಲ್ಲಿಸಿದ್ದ  ರಾಜ್ಯದ  ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರ ಮನವಿಯನ್ನು  ಸುಪ್ರೀಂಕೋರ್ಟ್   ಇಂದು ತಿರಸ್ಕರಿಸಿದೆ.

ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಪುದುಚೆರಿಗಳ ನಡುವೆ ಕಾಲಕಾಲಕ್ಕೆ ನೀರು ಹಂಚಿಕೆ ಸಂಬಂಧ ಸೂಚನೆಗಳನ್ನು ನೀಡಲು ಕೇಂದ್ರ ಸರ್ಕಾರವೇ ಅಧಿಕಾರ ಹೊಂದುವಂತೆ ಕಾವೇರಿ ನಿರ್ವಹಣಾ ಸ್ಕೀಂನ ಕರಡಿನ ನಿಯಮದಲ್ಲಿ ಬದಲಾವಣೆ ಮಾಡಬೇಕು ಎಂದು ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.

ಕಾವೇರಿ ನೀರು ಹಂಚಿಕೆ: ಸ್ಕೀಂ ಕರಡು ಸಲ್ಲಿಸಿದ ಕೇಂದ್ರ ಸರ್ಕಾರ ಸ್ಕೀಂನಲ್ಲಿ ಬದಲಾವಣೆ ಮಾಡಿ ಅದನ್ನು ಗುರುವಾರ ಸಲ್ಲಿಕೆ ಮಾಡುವಂತೆ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರಿಗೆ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯಪೀಠ ನಿರ್ದೇಶಿಸಿದೆ.

LEAVE A REPLY

Please enter your comment!
Please enter your name here