ಕಿರಾಣಿ ವರ್ತಕ ಪತ್ನಿಯೊಂದಿಗೆ ನೇಣಿಗೆ ಶರಣು

0
42

ಚಳ್ಳಕೆರೆ-

  ನಗರದ ವಾಸವಿ ಕಾಲೋನಿಯಲ್ಲಿ ಕಿರಾಣಿ ಯುವ ವರ್ತಕನೊಬ್ಬ ಬುಧವಾರ ಸಂಜೆ ತನ್ನ ಹೆಂಡತಿಯೊಡನೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ. ಆತ್ಮಹತ್ಯೆಗೆ ನಾವೇ ಕಾರಣವಾಗಿದ್ದು, ನಮ್ಮ ಸಾವಿಗೆ ಯಾರನ್ನೂ ದೂರಬೇಡಿ ಎಂದು ಡೆತ್‍ನೋಟ್ ಬರೆದಿರುತ್ತಾರೆ.

   ನಗರ ಬೆಂಗಳೂರು ರಸ್ತೆಯ ದತ್ತಾ ಸ್ಟೋರ್ಸ್‍ನ ರವಿ ಆಲಿಯಾಸ್ ರಾಘವೇಂದ್ರ(45) ಆತನ ಪತ್ನಿ ಆರತಿ(35) ನೇಣುಹಾಕಿಕೊಂಡು ಮೃತಪಟ್ಟ ದಂಪತಿಗಳಾಗಿರುತ್ತಾರೆ. ಇವರ ಪುತ್ರಿ ಶಾಲೆಗೆ ಹೋಗಿ ನಂತರ ಪಾಠ ಮುಗಿಸಿ 7.30ರ ಸಮಯದಲ್ಲಿ ಮನೆಗೆ ಬಂದಾಗ ಮನೆಯ ಬಾಗಿಲು ತೆಗೆಯದೇ ಇದ್ಧಾಗ ಪಕ್ಕದ ಮನೆಗೆ ಹೋಗಿ ವಿಷಯ ತಿಳಿಸಿದ್ದಾಳೆ. ಪಕ್ಕದ ಮನೆಯವರು ರವಿಯ ಸಹೋದರ ದತ್ತಾನಿಗೆ ವಿಷಯ ತಿಳಿಸಿದ್ದು, ಕೂಡಲೇ ಅಂಗಡಿ ಕೆಲಸಗಾರರೊಂದಿಗೆ ಬಾಗಿಲು ಹೊಡೆದು ನೋಡಿದಾಗ ಮೇಲುಗಡೆ ರೂಂನಲ್ಲಿ ರವಿ ಆರ್‍ಸಿಸಿ ಕಬ್ಬಿಣದ ಕೊಂಡಿಗೆ ಸೀರೆಯಿಂದ, ಆರತಿ ಫ್ಯಾನ್‍ಗೆ ತನ್ನ ವೇಲ್‍ನಿಂದ ನೇಣು ಹಾಕಿಕೊಂಡು ಮೃತಪಟ್ಟಿರುತ್ತಾರೆ. ಮೃತ ರವಿ ಹಾಗೂ ದತ್ತಾ ಇಬ್ಬರು ಸಹೋದರರಾಗಿದ್ದು, ಒಂದೇ ಅಂಗಡಿಯಲ್ಲಿ ವ್ಯವಹಾರ ನಡೆಸುತ್ತಿದ್ದರು.
ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‍ಐ ಕೆ.ಸತೀಶ್‍ನಾಯ್ಕ, ದಂಪತಿಗಳ ಡೆತ್‍ನೋಟನ್ನು ವಶಪಡಿಸಿಕೊಂಡು ಆತ್ಮಹತ್ಯೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here