ಕುಂಚಿಟಿಗ ಜಾತಿ ಅಸ್ಮಿತೆ ಕುರಿತ ಸಂವಾದಸಂಕಷ್ಟದ ಸ್ಥಿತಿಯಲ್ಲಿ ಕುಂಚಟಿಗ ಸಮಾಜ;ಚಂದ್ರಪ್ಪ

0
112

 

ಚಿತ್ರದುರ್ಗ:

   ಕುಂಚಿಟಿಗ ಸಮಾಜಕ್ಕೆ ನೆಲೆಗಟ್ಟು ಕಾಣಿಸುವ ದೊಡ್ಡ ಹೊಣೆಗಾರಿಕೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಮೇಲಿದೆ ಎಂದು ಸಂಸದ ಬಿ.ಎನ್.ಚಂದ್ರಪ್ಪ ಹೇಳಿದರು.
ಜಿಲ್ಲಾ ಕುಂಚಿಟಿಗರ ಸಂಘದಿಂದ ಕ್ರೀಡಾಭವನದಲ್ಲಿ ಭಾನುವಾರ ನಡೆದ ಪ್ರತಿಭಾ ಪುರಸ್ಕಾರ, ಧರ್ಮಪ್ರಕಾಶ ರಾವ್‍ಬಹದ್ದೂರ್ ಡಿ.ಬನುಮಯ್ಯ ಜಯಂತಿ ಹಾಗೂ ಕುಂಚಿಟಿಗ ಜಾತಿ ಅಸ್ಮಿತೆ ಕುರಿತ ಸಂವಾದ ಕಾಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಕುಂಚಿಟಿಗ ಸಮಾಜ ಈಗಲೂ ಅಸಂಘಟಿತವಾಗಿದೆ. ಅತ್ತ ವೀರಶೈವರು ಅಲ್ಲ. ಇತ್ತ ವಕ್ಕಲಿಗರು ಅಲ್ಲ ಎನ್ನುವ ಸಂಕಷ್ಟ ಪರಿಸ್ಥಿತಿಯಲ್ಲಿದೆ.ಕಷ್ಟ ಕಾರ್ಪಣ್ಯಗಳು ಬಂದಾಗ ತನ್ನದೆ ಆದ ಜಾತಿ ಬೇಕಾಗಿದೆ. ಹೋರಾಟದಿಂದ ಮಾತ್ರ ಸರ್ಕಾರದಿಂದ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಾಧ್ಯ. ಅದಕ್ಕಾಗಿ ಕುಂಚಿಟಿಗ ಸಮಾಜದ ಆಗು ಹೋಗುಗಳಿಗೆ ನಾನು ಸದಾ ನಿಮ್ಮೊಂದಿಗಿರುತ್ತೇನೆ ಎಂದು ಭರವಸೆ ನೀಡಿದರು.

   ಬಡವ, ಶ್ರೀಮಂತ, ಮಧ್ಯಮ ಎಂಬುದು ಎಲ್ಲಾ ಜಾತಿಗಿಂತಲೂ ಮಿಗಿಲಾದುದು. ಅದೇ ರೀತಿ ಒಳ್ಳೆಯವರು ಒಂದು ಜಾತಿ. ಕೆಟ್ಟವರು ಮತ್ತೊಂದು ಜಾತಿ. ಹಾಗಾಗಿ ಆಯಾ ಜನಸಂಖ್ಯೆಗನುಗುಣವಾಗಿ ದೇಶದ ಸಂಪತ್ತು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು ಎಂಬುದು ಸಂವಿಧಾನಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹಾಗೂ ಗಾಂಧಿಜಿರವರ ಕನಸಾಗಿತ್ತು. ಅದು ಈಗ ಈಡೇರಬೇಕಾಗಿದೆ ಎಂದರು.

    ಬುದ್ದಿವಂತಿಕೆ ಕೇವಲ ಮೇಲ್ಜಾತಿಯವರಿಗೆ ಮಾತ್ರ ಸೀಮಿತ ಎನ್ನುವ ತಪ್ಪು ಕಲ್ಪನೆ ಬೇಡ. ಮೇಲ್ಜಾತಿಯವರಲ್ಲಿಯೂ ಕಡು ಬಡವರಿದ್ದಾರೆ. ಅತ್ಯಂತ ಸಿರಿವಂತರು ಇದ್ದಾರೆ. ಬುದ್ದಿವಂತಿಕೆ ಎನ್ನುವುದು ಎಲ್ಲಾ ಜಾತಿಯವರಲ್ಲಿಯೂ ಇರುತ್ತದೆ. ಅಂತಹ ಮಕ್ಕಳನ್ನು ಹೆಕ್ಕಿ ತೆಗೆಯುವ ಕೆಲಸವನ್ನು ಶಿಕ್ಷಕರುಗಳು ಹಾಗೂ ಪೋಷಕರುಗಳು ಮಾಡಬೇಕಿದೆ. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುವುದರಿಂದ ಇನ್ನು ಹೆಚ್ಚಿನ ಸಾಧನೆ ಮಾಡಲು ಪ್ರೇರೇಪಿಸಿದಂತಾಗುತ್ತದೆ ಎಂದು ತಿಳಿಸಿದರು.
ಸಾಹಿತಿ, ಚಿಂತಕ ಡಾ.ವಡ್ಡಗೆರೆ ನಾಗರಾಜಯ್ಯ ಕುಂಚಿಟಿಗ ಜಾತಿ ಅಸ್ಮಿತೆ ಸಂವಾದ ಹಾಗೂ ಡಿ.ಬನುಮಯ್ಯ ಜಯಂತಿ ಕುರಿತು ಉಪನ್ಯಾಸ ನೀಡಿ ಕುಂಚಿಟಿಗ ಜನಾಂಗವನ್ನು ಹಿಂದುಳಿದ ವರ್ಗ ಪ್ರವರ್ಗ-1 ಕ್ಕೆ ಸೇರಿಸಬೇಕಾಗಿರುವುದರಿಂದ ಜನಾಂಗದ ಆಚಿನ ನಾಯಕರನ್ನು ಜಂಗಿಸಿ ಕೇಳುವ ಸಾಮಥ್ರ್ಯ ನಿಮಗೆ ಬರಬೇಕು. ಪಶುಪಾಲನೆ, ಬುಡಕಟ್ಟು ಸಮುದಾಯವೆಂದು ಗುರುತಿಸಿಕೊಂಡಿರುವ ನೀವುಗಳು ಬೇರೆಯವರಿಗೆ ರಾಜಕೀಯ ಶಕ್ತಿ ಕೊಡಬೇಡಿ ಎಂದು ಜಾಗೃತಿಗೊಳಿಸಿದರು.

   ಮುತ್ತು, ರತ್ನ, ಚಿನ್ನ, ದವನ, ಸೇವಂತಿ ಬೆಳೆದು ಸಮಾಜವನ್ನು ಶೃಂಗಾರ ಮಾಡುತ್ತಿದ್ದ ಕುಂಚಿಟಿಗ ಜನಾಂಗ ಹಿಂದಕ್ಕೆ ಸರಿದಿದ್ದಾರೆ. ದುಡಿಯುವ ಬೇರುಗಳು ಕುಂಚಿಟಿಗ ಜನಾಂಗ ಕಾಣದಾಗಿದ್ದಾರೆ. ಸೋಂಬೇರಿತನದ ಜನ ಕುಂಚಿಟಿಗರಲ್ಲ. ಮಾನಸಿಕ ಮೌಢ್ಯವನ್ನು ಮತ್ತೊಬ್ಬರಿಗೆ ಬಿತ್ತಿ ಅನ್ನ ಹುಟ್ಟಿಸಿಕೊಳ್ಳುವವರಲ್ಲ ನೀವುಗಳು. ಅದಕ್ಕಾಗಿ ಶಾಸನಸಭೆಯಲ್ಲಿ ನಿಮ್ಮ ಪರ ಧ್ವನಿಯೆತ್ತುವಂತವರನ್ನು ಚುನಾವಣೆಯಲ್ಲಿ ಗೆಲ್ಲಿಸಿ ನಿಮಗೆ ದೊರಕಬೇಕಾದ ನ್ಯಾಯಯುತವಾದ ಸೌಲಭ್ಯಗಳನ್ನು ಪಡೆದುಕೊಳ್ಳಿ ಎಂದು ಕರೆ ನೀಡಿದರು.

   ಕ್ರಯ-ವಿಕ್ರಯ ಮಾಡಿದ ಕುಂಚಿಟಿಗ ಜನಾಂಗ ಸ್ಥಿರ ಸಂಪತ್ತು ಚಲಿಸುವ ಸಂಪತ್ತಿನ ಒಡೆಯರಾಗಿದ್ದವರು. ಈಗ ಸಾಮಾಜಿಕ ಮತ್ತು ರಾಜಕೀಯ ಅಧಿಕಾರದಿಂದ ವಂಚಿತರಾಗುತ್ತಿದ್ದಾರೆ. ಪ್ರಬೇಧಗಳಲ್ಲಿ ಹಂಚಿ ಹೋಗಬೇಕಾಗಿದ್ದ ನೀವುಗಳು ಜಾತಿಯಲ್ಲಿ ಹರಿದು ಹಂಚಿ ಹೋಗಿದ್ದೀರಿ.1908 ರಲ್ಲಿ ಮೈಸೂರಲ್ಲಿ ಮೊದಲ ಕುಂಚಿಟಿಗ ಜನಾಂಗದ ಸಭೆ ನಡೆಯಿತು.ನಂತರ 1916 ರಲ್ಲಿ ಎರಡನೆ ಸಭೆ ನಡೆಸಿ ಜಾತಿ ವಿಶ್ಲೇಷಣೆ ನಡೆಸಲಾಯಿತು. ಬಲಿಷ್ಟ ಜನಾಂಗ ಈಗ ಕುಗ್ಗಿ ಹೋಗುತ್ತಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕುಂಚಿಟಿಗ ಜನಾಂಗಕ್ಕೂ ಮೀಸಲಾತಿ ಕೊಟ್ಟವರು. ಡಿ.ಬನುಮಯ್ಯ ಶಾಲೆ ತೆರೆದು ಮಕ್ಕಳಿಗೆ ಉಚಿತ ಶಿಕ್ಷಣ ಊಟದ ವ್ಯವಸ್ಥೆ ಮಾಡಿದರು. ಆದರೆ ಕುಂಚಿಟಿಗ ಮಕ್ಕಳು ಇಂದು ಶಿಕ್ಷಣದಿಂದ ದೂರ ಉಳಿದಿದ್ದಾರೆ. ಇದು ನೋವಿನ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

   ನಾಲ್ವಡಿ ಕೃಷ್ಣರಾಜ ಒಡೆಯರ್ 1923 ರಲ್ಲಿ ಸಭೆ ನಡೆಸಿದರು. 1928 ರಲ್ಲಿ ವಿಶಾಲ ಮೈಸೂರು ರಾಜ್ಯದಲ್ಲಿ ಮಹಾಸಮ್ಮೇಳನವಾಯಿತು.1929 ರಲ್ಲಿ ಕಳ್ಳಂಬೆಳ್ಳ ಕುಂಚಿಟಿಗರ ಪಾಲಿನ ಮೈಸೂರಾಗಿತ್ತು.1933 ರಲ್ಲಿ ಕುಂಚಿಟಿಗರ ರಾಜಕೀಯ ರಾಜಧಾನಿ ವಡ್ಡಗೆರೆಯಾಗಿತ್ತು ಎಂದು ನೆನಪಿಸಿದರು.
ಕುಂಚಿಟಿಗರಿಗೆ ನಾಥಸಿದ್ದರು. ಕಾಪಾಲಿಕರ ಪರಂಪರೆಯಿದೆ. ಧರ್ಮಸಂಕರ, ಜಾತಿ ಸಂಕರ ಪ್ರಕ್ರಿಯೆಗಳಿಗೆ ತೆರೆದುಕೊಂಡವರು. ಯಾವುದೇ ಧರ್ಮ ಜಾತಿಗೆ ಒಳಪಡದೆ ಎಲ್ಲಾ ಜಾತಿಯವರನ್ನು ಒಳಗೊಂಡು ಜಾತ್ಯಾತೀತವಾಗಿ ಬದುಕಿ ಜಾತ್ಯಾತೀತ ದೇಶದ ಸೌಂದರ್ಯವನ್ನು ಕಾಪಾಡಿದವರು ಕುಂಚಿಟಿಗರು. ಕುವೆಂಪು ಚಿಂತನೆಯನ್ನು ಬದುಕಿನಲ್ಲಿ ರೂಢಿಸಿಕೊಂಡವರು ಈ ಜನಾಂಗ ಎಂದು ಗುಣಗಾನ ಮಾಡಿದರು.

   ಸಾಂಸ್ಕೃತಿಕ , ವಲಸಿಗರು, ಬುಡಕಟ್ಟು ಸಮುದಾಯಕ್ಕೆ ಸೇರಿದ ಕುಂಚಿಟಿಗರು ನಿಮ್ಮ ನಾಯಕಿ,
ನಾಯಕರ ದೇವಸ್ಥಾನಗಳು, ವೀರಗಲ್ಲುಗಳು ಏನಾಗಿದೆ ಎಂಬುದನ್ನು ಒಮ್ಮೆಯಾದರೂ ನೋಡಿದ್ದೀರ. ಸಾಂಸ್ಕøತಿಕ ಬಳಲಿಕೆ ಒಳ್ಳೆಯದಲ್ಲ.ಸಾಂಸ್ಕøತಿಕವಾಗಿ ಪುರ್ನಜೀವನವಾಗಬೇಕು.ಆಳಿದವರು ದಾಸ್ಯಕ್ಕೊಳಗಾಗುವುದು ಸಂಕಟ. ಮತ್ತೊಬ್ಬರಿಗೆ ಏಕೆ ಆಧಿಕಾರ ಪರಭಾರೆ ಮಾಡುತ್ತೀರ. ಈಗಲಾದರೂ ಎಚ್ಚೆತ್ತುಕೊಂಡು ರಾಜ್ಯ ಮತ್ತು ಕೇಂದ್ರಗಳಿಂದ ಸಿಗುವ ಸವಲತ್ತುಗಳನ್ನು ಹೋರಾಟದ ಮೂಲಕ ಪಡೆದುಕೊಳ್ಳಿ ಎಂದು ಹೇಳಿದರು.
ಜಿಲ್ಲಾ ಕುಂಚಿಟಿಗರ ಸಂಘದ ಅಧ್ಯಕ್ಷ ಗಾಳಿಚಂದ್ರಯ್ಯ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಕುಂಚಿಟಿಗ ಮಹಾಮಂಡಲದ ರಾಜ್ಯಾಧ್ಯಕ್ಷ ಕೆ.ಬಸವಾನಂದ, ಡಾ.ಎಂ.ಜಿ.ಗೋವಿಂದಯ್ಯ, ಛಾಯ ಮೋಹನ್, ತಿಮ್ಮಯ್ಯ, ನಾಗರಾಜ್, ಪತ್ರಕರ್ತ ಹೆಂಜಾರಪ್ಪ ವೇದಿಕೆಯಲ್ಲಿದ್ದರು.
ಎಸ್.ಎಸ್.ಎಲ್.ಸಿ.ಮತ್ತು ಪಿ.ಯು.ಸಿ.ಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಿರುವ ಕುಂಚಿಟಗ ಜನಾಂಗದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

LEAVE A REPLY

Please enter your comment!
Please enter your name here