ಕುಖ್ಯಾತ ಮನೆಗಳ್ಳ ಬಾಂಬೆ ಸಲೀಂ ಅಂದರ್

0
31

ಬೆಂಗಳೂರು,

   ಸುಮಾರು 40 ಕ್ಕೂ ಹೆಚ್ಚು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಕುಖ್ಯಾತ ಮನೆಗಳ್ಳ ಬಾಂಬೆ ಸಲೀಂನನ್ನು ಬಂಧಿಸಿರುವ ಇಂದಿರಾನಗರ ಪೋಲೀಸರು ಆತನ ಇಬ್ಬರು ಸಹಚರರನ್ನು ಬಲೆಗೆ ಕೆಡವಿದ್ದಾರೆ.
ಇಂದಿರಾನಗರದ ಸಲೀಂ ಅಲಿಯಾಸ್ ಬಾಂಬೆ ಸಲೀಂ ಆತನ ಸಹಚರರಾದ ದನಂಜಯ್ ಮತ್ತು ರಾಜೇಶ್ ಬಂಧಿತ ಅರೋಪಿಗಳಾಗಿದ್ದಾರೆ. 37 ಕ್ಕೂ ಹೆಚ್ಚು ಮನೆಗಳ್ಳತನ, ಮೂರು ಕೊಲೆ ಪ್ರಕರಣಗಳಲ್ಲಿ ಆರೋಪಿ ಸಲೀಂ ಅಲಿಭಾಗಿಯಾಗಿದ್ದಾನೆ.

   ತನ್ನದೇ ಆದ ಗ್ಯಾಂಗ್ ಕಟ್ಟಿಕೊಂಡು ಮನೆಳ್ಳತನ ನಡೆಸುತ್ತಿದ್ದ ಬಾಂಬೆ ಸಲೀಂ ಈ ಹಿಂದೆ ಜೈಲಿನಲ್ಲಿದ್ದಾಗಲೂ ತನ್ನ ಸಹಚರರಿಂದ ಕಳ್ಳತನ ಮುಂದುವರಿಸಿದ್ದ. ರಾಜಾಜಿನಗರ, ಶ್ರೀರಾಮಪುರ, ಪೀಣ್ಯಾ, ರಾಜಾಗೋಪಾಲನಗರ ಸೇರಿದಂತೆ ಹಲವು ಠಾಣೆಗಳಲ್ಲಿ ಬಾಂಬೆ ಸಲೀಂ ವಿರುದ್ಧ ಪ್ರಕರಣಗಳಿವೆ.

  ಸಲೀಂ ಜತೆ ಬಂಧಿತರಾಗಿರುವ ಇಬ್ಬರು ಸಹಚರರು ಆತ ಹೇಳಿದಂತೆ ಬೀಗ ಹಾಕಿದ ಮನೆ ನೋಡಿ ಬಾಗಿಲು ಮುರಿದು ಕಳ್ಳತನ ಮಾಡುತಿದ್ದರು ಎಂದು ಪೋಲೀಸರು ತಿಳಿಸಿದ್ದಾರೆ. ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಬಾಂಬೆ ಸಲೀಂ ನಂತರ ತನ್ನ ಸಹಚರರನ್ನೂ ಜಾಮೀನು ಕೊಡಿಸಿ ಬಿಡುಗಡೆ ಮಾಡಿಸಿಕೊಂಡಿದ್ದ. ಆ ನಂತರ ಮತ್ತೆ ಕಳ್ಳತನದ ಪ್ರಕರಣಗಳಲ್ಲಿ ಭಾಗಿಯಾಗಿದ್ದರು. ಸಲೀಂ ಗ್ಯಾಂಗ್‍ನಲ್ಲಿದ್ದ ಇತರ ಆರೋಪಿಗಳಿಗಾಗಿ ಪೋಲೀಸರು ಹುಡುಕಾಟ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here