ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬೋರ್‍ವೆಲ್ ಲಾರಿಗಳನ್ನು ತಡೆದು ಪ್ರತಿಭಟನೆ

0
40

ಜಗಳೂರು :

      ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿ ಬೋರ್‍ವೆಲ್ ಲಾರಿಗಳನ್ನು ತಡೆದು ಪ್ರತಿಭಟನೆ ನಡೆಸಿದ ಘಟನೆ ತಾಲೂಕಿನ ಉದ್ದಗಟ್ಟ ಗ್ರಾಮದಲ್ಲಿ ನಡೆದಿದೆ.

      ಗ್ರಾಮದಲ್ಲಿ ಜನ ಮತ್ತು ಜನುವಾರುಗಳಿಗೆ ಕುಡಿಯಲು ನೀರಿಲ್ಲದೇ ಬೆಳಗ್ಗೆಯಿಂದ ಕುಟುಂಬದ ಸದಸ್ಯರು ಕೈಗಾಡಿ, ಎತ್ತಿನಗಾಡಿ, ಬೈಕ್‍ಗಳಲ್ಲಿ ರೈತರ ಪಂಪ್‍ಸೆಟ್‍ಗಳಿಗೆ ಹೋಗಿ ನೀರು ತರಬೇಕಾಗಿದೆ ಇಷ್ಟೆಲ್ಲಾ ಸಮಸ್ಯೆಗಳಿದ್ದರು ಅಧಿಕಾರಿಗಳು ಮತ್ತು ಜನಪ್ರತಿನಿದಿಗಳು ನಿರ್ಲಕ್ಷೆ ತೋರಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

      ಚುನಾವಣೆ ವೇಳೆ ಮತಪಡೆಯಲು ಬಣ್ಣದ ಮಾತುಗಳಿಂದ ನಮ್ಮನ್ನು ಮರುಳು ಮಾಡುವ ಜನ ಪ್ರತಿನಿಧಿಗಳು ಕುಡಿಯುವ ನೀರಿಗಾಗಿ ಬೊಬ್ಬೆ ಹೊಡೆದರೂ ಅವರ ಕಿವಿಗೆ ಕೇಳಿಸುತ್ತಿಲ್ಲ. ನಾವೂ ಮನುಷ್ಯರೇ, ಪ್ರಾಣಿಗಳಲ್ಲ, ನಮಗೆ ಅಗತ್ಯ ಮೂಲಭೂತ ಸೌಲಭ್ಯ ನೀಡುತ್ತಿಲ್ಲವೆಂದು ಗ್ರಾಮಸ್ಥರಾದ ಜಯನಾಗರಾಜ್, ಮಂಜುನಾಥ್, ಮಹಾಂತೇಶ್, ನಾಗರಾಜ್, ಚಂದ್ರಪ್ಪ, ಬಸವರಾಜ್ ಆಕ್ರೋಶವ್ಯಕ್ತಪಡಿಸಿದರು.
ಗ್ರಾಮಕ್ಕೆ ಟ್ಯಾಂಕರ್ ಬಳಿಸಿ ಮೈ, ಕೈಕಾಲುಗಳಲ್ಲಿ ಸಣ್ಣ ಗುಳ್ಳೆಗಳೆದ್ದು ಅಲರ್ಜಿಯಾಗಿ ಮಕ್ಕಳು ತೊಂದರೆ ಪಡುತ್ತಿದ್ದಾರೆ. ಇದರಿಂದ ಸ್ನಾನ ಕೂಡ ಮಾಡಿಸಲು ಸಾದ್ಯವಾಗುತ್ತಿಲ್ಲ. ನಮ್ಮ ಸಮಸ್ಯೆಗಳನ್ನು ಕೇಳೋರು ಇಲ್ಲದಂತಾಗಿದೆ. ನಮಗೆ ನೀರು ಕೊಡುವವರೆಗೂ ಹೋರಾಟ ಬಿಡುವುದಿಲ್ಲವೆಂದು ಮಹಿಳೆಯರು ಅಧಿಕಾರಿಗಳ ವಿರುದ್ದ ಅಸಮಾಧಾನ ವ್ಯಕ್ತಪಡಿಸಿದರು.

      ಉದ್ಗಟ್ಟ ಗ್ರಾಮದಲ್ಲಿ ಹಾಲಿ ಬೋರ್‍ವೆಲ್‍ಗಳಲ್ಲಿ ನೀರು ಬತ್ತಿದ್ದು, ನೀರಿನ ಸಮಸ್ಯೆ ಉಲ್ಬಣಿಸಿದ ಕಾರಣ ಮತ್ತೆ 2 ಬೋರವೆಲ್ ಕೊರೆಸಿದರೂ ನೀರು ಬೀಳಲಿಲ್ಲ. ಶಾಸಕರಾದ ಎಸ್.ವಿ.ರಾಮಚಂದ್ರ ಸೂಚನೆಯ ಮೇರೆಗೆ ಇನ್ನೊಂದು ಬೋರ್‍ವೆಲ್ ಕೊರೆಸಲಾಗಿದ್ದು , 2 ಇಂಚು ನೀರು ಬಿದ್ದಿದೆ. ಗ್ರಾಮಕ್ಕೆ ಹಾಲಿ ಇರುವ ಬೋರ್‍ವೆಲ್‍ಗಳಲ್ಲಿರುವ ಮೋಟರ್ ಪಂಪ್ ಬಿಟ್ಟು ಗ್ರಾಮಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರು ಚಂದ್ರಶೇಖರ್

      ತಾಲ್ಲೂಕಿನ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರು ಸಮಸ್ಯೆಯಾದರೇ ತಕ್ಷಣವೇ ಬೋರ್‍ವೆಲ್ ಕೊರೆಯಿಸಿ ನೀರು ಸರಬರಾಜು ಮಾಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಶಾಸಕ ಎಸ್.ವಿ.ರಾಮಚಂದ್ರ

LEAVE A REPLY

Please enter your comment!
Please enter your name here