ಕೂಲಿಗಾಗಿ ಗುಳೇ ಹೋಗುವವರನ್ನು ತಡೆಗಟ್ಟಿ

0
27

ಬಳ್ಳಾರಿ:

   ಕೂಲಿ ಕೆಲಸ ಅರೆಸಿ ಗ್ರಾಮೀಣ ಭಾಗದ ಕೂಲಿಕಾರರು ನಗರ, ಪಟ್ಟಣಗಳಿಗೆ ಗುಳೆ ಹೋಗುವದನ್ನು ತಡೆಗಟ್ಟಬೇಕು, ನಿರ್ಲಕ್ಷ್ಯವಹಿಸಿದರೇ ಸುಮ್ಮನಿರೋಲ್ಲ ಎಂದು ಕೊಪ್ಪಳ ಸಾಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳು ಸೂಚಿಸಿದರು.

    ನಗರದ ಜಿಲ್ಲಾ ಪಂಚಾಯಿತಿ ನಜೀರ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ದಿಶಾ ಸಮೀತಿ ತ್ರೈಮಾಸಿಕ ಸಭೆಯ ಅಧ್ಯಕ್ಷ ವಹಿಸಿ ಶನಿವಾರ ಮಾತನಾಡಿದರು. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಲು ಅವಕಾಶವಿದೆ, ಆದರೂ ಜಿಲ್ಲೆಯ ನಾನಾ ಕಡೆ ಕೂಲಿಕಾರರು ನಗರ ಸೇರಿದಂತೆ ಪಟ್ಟಣ ಪ್ರದೇಶಗಳಿಗೆ ಗುಳೆ ಹೋಗುವುದು ಸಾಮಾನ್ಯವಾಗಿದೆ. ಸಂಬಂಧಿಸಿದ ಇಲಾಖೆ ಮೇಲಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಗುಳೆ ಹೋಗುವದನ್ನು ತಪ್ಪಿಸಿ, ಸ್ಥಳೀಯವಾಗಿಯೇ ನರೇಗಾ ಯೋಜನೆಯಡಿ ಎಲ್ಲರಿಗೂ ಕೂಲಿ ಕೆಲಸ ಕಲ್ಪಿಸಬೇಕು. ನಿಗಧಿ ಅವಧಿಯಲ್ಲಿ ಕೂಲಿಕಾರರಿಗೆ ಹಣ ಪಾವತಿಸಬೇಕು, ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸಕೂಡದು ಎಂದು ಎಚ್ಚರಿಸಿದರು.
ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಪ್ರತಿಕ್ರೀಯಿಸಿ, ಜಿಲ್ಲೆಯ ಯಾವ ಕಡೆಗಳಲ್ಲೂ ಕೂಲಿಕಾರರು ಗುಳೆ ಹೋದ ಉದಾಹರಣೆಗಳಿಲ್ಲ. ಮಳೆಯಾಶ್ರಿತ ಪ್ರದೇಶವಾದ ಕೂಡ್ಲಗಿ ತಾಲೂಕುಗಳಲ್ಲಿ ಬೆರಣಿಕೆಯಷ್ಟು ಕೂಲಿಕಾರರು ಗುಳೆ ಹೋಗಿರಬಹುದು. ಅದಕ್ಕೂ ಕೂಡಾ ಕೂಡಲೇ ಕಡಿವಾಣ ಹಾಕಿ, ಗ್ರಾಮೀಣ ಬಾಗದ ಎಲ್ಲ ಕೂಲಿಕಾರರಿಗೆ ಉದ್ಯೋಗ ಕಲ್ಪಿಸುವೆ ಎಂದು ಭರವಸೆ ನೀಡಿದರು.

    ನರೇಗಾ ಯೋಜನೆಯಡಿ ದನದ ಕೊಟ್ಟಿಗೆ, ಅರಣ್ಯೀಕರಣ, ಶಾಲೆ ಕಾಂಪೌಂಡ್, ಆಟದಮೈದಾನ, ಅಂಗನವಾಡಿ ಕಟ್ಟಡ ದುರಸ್ಥಿ ಸೇರಿದಂತೆ ನಾನಾ ಅಭಿವೃಧ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅವಕಾಶವಿದೆ. ಅಧಿಕಾರಿಗಳು ಯಾವುದೇ ಕಾರಣಕ್ಕೂ ನಿರ್ಲಕ್ಷ್ಯವಹಿಸದೇ ಎಲ್ಲರಿಗೂ ಕೆಲಸ ನೀಡಿ ನಿಗಧಿತ ಅವಧಿಯಲ್ಲಿ ಹಣ ಪಾವತಿಸಬೇಕು ಎಂದು ಸೂಚಿಸಿದರು. ಬಳ್ಳಾರಿ ತಾ.ಪಂ.ಇಒ ಅವರು ಸಭೆಗೆ ಮಾಹಿತಿ ನೀಡುವ ವೇಳೆ, ಪ್ರಸಕ್ತ ಸಾಲಿನಲ್ಲಿ ನರೇಗಾ ಯೋಜನೆಯಡಿ ಎಲ್ಲಿ ಕಾಮಗಾರಿಗಳು ನಡೆದಿವೆ, ಎಷ್ಟು ಜನ ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದಾರೆ ಪೂರಕ ಮಾಹಿತಿ ನೀಡಿ ಸಂಸದ ಸಂಗಣ್ಣ ಕರಡಿ ಅವರು ಸೂಚಿಸಿದರು. ಗೋದಾಮು ನಿರ್ಮಾಣಕ್ಕೆ ಮುಂದಾಗಿದ್ದು, ಅದಕ್ಕೆ ಜಿಎಸ್‍ಸ್ಟಿ ಅಡ್ಡ ಬರುತ್ತಿದೆ, ಈ ಹಿನ್ನೆಲೆಯಲ್ಲಿ ಕಟ್ಟಡ ನಿರ್ಮಿಸಲು ಯಾರೂ ಮುಂದೆ ಬರುತ್ತಿಲ್ಲ ಎಂದು ತಿಳಿಸಿದರು. ಇದಕ್ಕೆ ಕೆಂಡಾಮಂಡಲರಾದ ಸಾಂಸದ ಸಂಗಣ್ಣ ಕರಡಿ ಅವರು ಮಾತನಾಡಿ, ಏನ್ರಿ ನಾನು ಕೇಳ್ತೀದಿನಿ, ನೀವೆ ಏನ್ ಹೇಳ್ತೀದಿರಿ, ಸಭೆಗೆ ಸರಿಯಾಗಿ ಮಾಹಿತಿ ನೀಡಿ ಎಂದು ಸೂಚಿಸಿದರು. ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಅವರು ಮಾತನಾಡಿ, ಜಿಎಸ್‍ಸ್ಟಿ ಕಾಯ್ದೆ ಅಡ್ಡ ಬರುತ್ತಿದೆ ಅಂದ್ರೇ ಹೇಗ್ರಿ, ಜಿಎಸ್‍ಸ್ಟಿ ಕಾಯ್ದೆಯಿಂದ ಅಕ್ರಮಗಳನ್ನು ತಡೆಗಟ್ಟಬಹುದು. ಈ ಹಿನ್ನೆಲೆಯಲ್ಲಿ ಸರ್ಕಾರ ಈ ಯೋಜನೆಯನ್ನು ಜಾರಿಗೊಳಿಸಿದೆ. ಇದನ್ನು ಪ್ರತಿಯೋಬ್ಬರೂ ಪಾಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ನಂತರ ಜಿಲ್ಲೆಯ ಎಲ್ಲ ತಾಲೂಕು ಅಧಿಕಾರಿಗಳಿಂದ ಪ್ರಗತಿ ವರದಿಗಳನ್ನು ಆಲಿಸಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್, ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ಜಿ.ಪಂ.ಸಿಇಒ ಡಾ.ರಾಜೇಂದ್ರ ಕೆ.ಆರ್. ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಇತರರು ಉಪಸ್ಥಿತರಿದ್ದರು. ನಂತರ ಸಂಸದ ಸಂಗಣ್ಣ ಕರಡಿ ಅವರು ಸ್ವಚ್ಛ ಸರ್ವೇಕ್ಷಣ ರಥಕ್ಕೆ ಚಾಲನೆ ನೀಡಿದರು.

LEAVE A REPLY

Please enter your comment!
Please enter your name here