ಕೂಲಿ ಕಾರ್ಮಿಕ ವಿಷ ಸೇವಿಸಿ ಆತ್ಮಹತ್ಯೆ

0
3

ಬೆಂಗಳೂರು:

    ಬಾಗಲೂರಿನಲ್ಲಿ ಬುಧವಾರ ರಾತ್ರಿ ಮನೆಯವರ ಕಿರುಕುಳದಿಂದ ಬೇಸತ್ತ ಕೂಲಿ ಕಾರ್ಮಿಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ನಡೆದಿದೆ. ಬಾಗಲೂರಿನ ಮುನೇಗೌಡ (55)ಎಂದು ಆತ್ಮಹತ್ಯೆ ಮಾಡಿಕೊಂಡವರನ್ನು ಗುರುತಿಸಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ನಂಜಪ್ಪ, ಶ್ರೀನಿವಾಸ, ನರಸಿಂಹಮೂರ್ತಿಯನ್ನು ಬಾಗಲೂರು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.

      ಬಾಗಲೂರು ಬಳಿ ಮುನೇಗೌಡ ಜಲ್ಲಿ ಕ್ರಷರ್‍ವೊಂದರಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ಅಲ್ಲಿನ ಮಾಲೀಕರು ಲಾರಿ ಕಳುಹಿಸುವುದಾಗಿ ಹೇಳಿ ನಂತರ ಸುಮ್ಮನಾಗಿದ್ದರು.

      ಮನೆಯವರು ಕೂಡ ಜಗಳ ಮಾಡುತ್ತಿದ್ದರಿಂದ ಬೇಸತ್ತಿದ್ದ ಮುನೇಗೌಡ, ಬುಧವಾರ ರಾತ್ರಿ 9.30ರ ವೇಳೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಪ್ರಕರಣ ದಾಖಲಿಸಿರುವ ಬಾಗಲೂರು ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

LEAVE A REPLY

Please enter your comment!
Please enter your name here