ಕೃಷಿ ನಿರ್ದೇಶಕ ಹಾಗೂ ಸಹಾಯಕ ನಿರ್ದೇಶಕರಿಂದ ಹೊಲಗಳ ವೀಕ್ಷಣೆ

0
39

ಹರಪನಹಳ್ಳಿ:

      ಮಳೆ ಕೊರತೆಯಿಂದ ತಾಲ್ಲೂಕಿನ ಮುಂಗಾರು ಬೆಳೆಗಳು ಸಂಕಷ್ಟವನ್ನು ಎದುರಿಸುತ್ತಿವೆ ಜು.31ರೊಳಗೆ ರೈತರು ಬೆಳೆ ವಿಮೆ ತುಂಬಲು ಅಂತಿಮ ದಿನವಾಗಿದ್ದು ಕೂಡಲೇ ವಿಮೆ ಹಣವನ್ನು ದಾಖಲಾತಿಯೊಂದಿಗೆ ಪಾವತಿಸಿದರೆ ಮುಂಬರುವ ಹಾನಿಯಿಂದ ಪಾರಗಲು ಸಹಕಾರಿಯಾಗಲಿದೆ ಕೃಷಿ ಸಹಾಯಕ ನಿರ್ದೇಶಕ ಆರ್.ತಿಪ್ಪೇಸ್ವಾಮಿ ಹೇಳಿದರು.

      ಸುದ್ದಿಗಾರರೊಂದಿಗೆ ಮಾತನಾಡಿ, ತಾಲ್ಲೂಕಿನಲ್ಲಿ ಜೂನ್ ಹಾಗೂ ಜುಲೈ ತಿಂಗಳಲ್ಲಿ ವಾಡಿಕೆ ಮಳೆ ಬೀಳದ ಪರಿಣಾಮ ಬಿತ್ತನೆಯಾದ 72028 ಎಕರೆ ಪ್ರದೇಶದ ಮೆಕ್ಕೇಜೋಳ, ಊಟದ ಜೋಳ, ಸಜ್ಜೆ, ಸೇಂಗಾ, ಹತ್ತಿ, ತೊಗರಿ, ಹೆಸರು ಹಾಗೂ ಇನ್ನೂ ಮುಂತಾದ ಬೆಳೆಗಳು ಬಾಡುತ್ತಿವೆ. ಮೆಕ್ಕೇಜೋಳಕ್ಕೆ ಒಂದೆರೆಡು ದಿನಗಳಲ್ಲಿ ಮಳೆ ಬಾರದೇ ಇದ್ದÀ\ಲ್ಲಿ ಉತ್ಪಾದೆನ ಕುಂಠಿತಗೊಳಲ್ಲಿದೆ. ಮಳೆ ಕೊರತೆಯಿಂದ ಬೆಳೆಗಳು ಬಾಡುತ್ತಿರುವ ಕುರಿತು ಮಾಹಿತಿ ಸಂಗ್ರಹಿಸಲು ಜಂಟಿ ನಿರ್ದೇಶಕರಾದ ಶರಣಪ್ಪ ಹಾಗೂ ತಾವು ಹಳ್ಳಿಕೇರಿ ಹಾಗೂ ಸುತ್ತುಮುತ್ತಲಿನ ಗ್ರಾಮಕ್ಕೆ ತೆರಳಿ ಪರೀಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಲಾಗಿದೆ ಎಂದರು.

      ಊಟದ ಜೋಳ ತೊಗರಿ ಹಾಗೂ ಉಳಿದ ಬೆಳೆಗಳಿಗೂ ಒಂದು ವಾರದಲ್ಲಿ ಮಳೆಯು ಅವಶ್ಯವಾಗಿದೆ. ಜೂನ್ ತಿಂಗಳಲ್ಲಿ ವಾಡಿಕೆ ಮಳೆ 81 ಮಿ.ಮೀ. ಮಳೆಯಾಗಬೇಕಿತ್ತು. ಆದರೆ 65 ಮಿಮೀ. ಮಳೆಯಾಗಿ ಶೇ.20ರಷ್ಟು ಕೊರತೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆ ಮಳೆ 70 ಆದರೆ 48ರಷ್ಟು ಬಿದಿದೆ. ಶೇ.32ರಷ್ಟು ಕೊರತೆ. ಒಟ್ಟು ಬಿತ್ತನೆ ಪ್ರದೇಶ 80230 ಎಕರೆ ಗುರಿಯಾಗಿದೆ. ಇದರಲ್ಲಿ 59500 ಎಕರೆ ಪ್ರದೇಶದಲ್ಲಿ ಮೆಕ್ಕೆ ಜೋಳವನ್ನು ಬಿತ್ತಲಾಗಿದೆ. ಉಳಿದ ಪ್ರದೇಶಗಳಲ್ಲಿ ರಾಗಿ, ಹಲಸಂದಿ, ಸೂರ್ಯಕಾಂತಿ ಹಾಗೂ ನಿರಾವರಿಯಲ್ಲಿ ಭತ್ತ ಬೆಳೆಯಲು ಸಿದ್ದತೆ ಮಾಡಿಕೊಳ್ಳಲಾಗಿದೆ. ಇನ್ನೂ ಮುಂದಿನ ದಿನಗಳಲ್ಲಿ ಮೆಕ್ಕೇ ಜೋಳವನ್ನು ಬಿತ್ತಬಾರದು ಎಂದರು.

      ರೈತರು ಬಿತ್ತಿದ ಬೆಳೆಗಳಿಗೆ ತೇವಾಂಶ ಕಾಪಾಡಿಕೊಳ್ಳು ಎಡೆ ಹೊಡೆದು ಕೊಂಡು ಬೇರುಗಳಿಗೆ ಮಣ್ಣು ಏರಿಸಿದರೆ ಬೆಳೆಗಳು ಸ್ವಲ್ಪ ಕಾಲ ಸುರಕ್ಷಿತವಾಗಿರುತ್ತವೆ. ಸೇಂಗಾ ಹೂವಾಡುತ್ತಿವೆ, ಮೆಕ್ಕೇಜೋಳ ಸೋಲಂಗಿ ಮೂಡುತ್ತಿವೆ ಮಳೆ ಅವಶ್ಯವಾಗಿದ್ದು ಬೇಗನೆ ಮಳೆ ಬಿದ್ದರೆ ಉತ್ತಮ ಇಳುವರಿ ಪಡೆಯಲು ಸಹಕಾರಿಯಗುತ್ತದೆ. ಜಾನುವಾರಿಗಳಿಗೆ ಮೇವು ಸಂಗ್ರಹಕ್ಕೂ ಮಳೆ ಬೇಕಾಗಿದೆ ಎಂದರು

LEAVE A REPLY

Please enter your comment!
Please enter your name here