ಕೆಂಕೆರೆಯ 2 ದೇವಾಲಯಗಳಲ್ಲಿ ಕಳವು

0
60

 ಹುಳಿಯಾರು:

      ಹುಳಿಯಾರು ಸಮೀಪದ ಕೆಂಕೆರೆಯ ಶ್ರೀ ರಂಗನಾಥಸ್ವಾಮಿ ಹಾಗೂ ಶ್ರೀ ಆಂಜನೇಯಸ್ವಾಮಿ ದೇವಾಲಯಗಳಲ್ಲಿ ಮಂಗಳವಾರ ರಾತ್ರಿ ಕಳ್ಳತನವಾಗಿದ್ದು ಲಕ್ಷಾಂತರ ರೂ. ಮೌಲ್ಯದ ದೇವರ ಒಡವೆಗಳನ್ನು ಕಳ್ಳರು ಕದ್ದೊಯ್ದಿದ್ದಾರೆ.

      ಶ್ರೀ ರಂಗನಾಥಸ್ವಾಮಿ ದೇವಾಲಯದ ಬೀಗ ಹೊಡೆದು ಒಳ ನುಗ್ಗಿರುವ ಕಳ್ಳರು ದೇವರ ಮೂರ್ತಿಯ ಮೇಲಿರುವ ಬೆಳ್ಳಿ ಕಿರೀಟ, ಬೆಳ್ಳಿ ಮುಖಪದ್ಮ ಹಾಗೂ ಬೆಳ್ಳಿಯ 4 ಛತ್ರಿಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಅಲ್ಲದೆ ಇದೇ ದೇವಸ್ಥಾನದ ಹುಂಡಿ ಡಬ್ಬಿ ಹೊಡೆದು ಹಣ ದೋಚಿದ್ದಾರೆ.

      ಇಲ್ಲಿನ ಶ್ರೀ ತಿಮ್ಮಪ್ಪ ದೇವರ ದೇವಸ್ಥಾನದ ದುರಸ್ಥಿಯ ಸಲುವಾಗಿ ಶ್ರೀ ತಿಮ್ಮಪ್ಪ ದೇವರನ್ನು ಇಲ್ಲಿನ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿಟ್ಟು ನಿತ್ಯ ಪೂಜೆ ಮಾಡಲಾಗಿತ್ತು. ಇದನ್ನರಿತಿದ್ದ ಕಳ್ಳರು ದೇವಸ್ಥಾನದ ಒಳನುಗ್ಗಿ ತಿಮ್ಮಪ್ಪ ದೇವರ ಮೇಲಿದ್ದ 4 ಬೆಳ್ಳಿಯ ಛತ್ರಿ, ಪ್ರಭಾವಳಿ, ಒಂದು ಬೆಳ್ಳಿ ವಿಗ್ರಹ, 2 ಚಿನ್ನದ ಅರಳಿ ಎಲೆ ಕದ್ದಿದ್ದಾರೆ.

      ಸ್ಥಳಕ್ಕೆ ಪಿಎಸ್‍ಐ ರವೀಂದ್ರ ಅವರು ಭೇಟಿ ನೀಡಿ ಘಟನೆಯ ವಿವರ ಪಡೆದರು. ಶ್ವಾನದಳ, ಬೆರಳಚ್ಚು ತಜ್ಞರು ಸಹ ಆಗಮಿಸಿದ್ದರು. ಹುಳಿಯಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here