ಕೆಕೆಆರ್ ವಿರುದ್ಧ ಮುಂಬೈಗೆ 102 ರನ್‍ಗಳ ಜಯ

 -  -  1


ಕೊಲ್ಕತ್ತಾ:

ಐಪಿಎಲ್ ಕ್ರಿಕೆಟ್‍ನ 41ನೇ ಪಂದ್ಯದಲ್ಲಿ ಕೆಕೆಆರ್ ವಿರುದ್ಧ ಮುಂಬೈ ಇಂಡಿಯನ್ಸ್ ತಂಡವು 102 ರನ್‍ಗಳ ಭರ್ಜರಿ ಜಯ ಗಳಿಸಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್‍ಗೆ ಬಂದ ಮುಂಬೈ ತಂಡದ ಆಟಗಾರರು ಆರಂಭದಿಂದಲೂ ಉತ್ತಮ ರನ್ ಗಳಿಸುವ ಹಾದಿಯಲ್ಲಿ ಸಾಗಿ ನಿಗದಿತ 20 ಓವರ್‍ಗಳಲ್ಲಿ 6 ವಿಕೆಟ್‍ಗಳನ್ನು ಕಳೆದುಕೊಂಡು 210 ರನ್‍ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಕಿಶನ್ 62, ರೋಹಿತ್ ಶರ್ಮಾ 36, ಯಾದವ್ 36, ಬೆನ್ 24, ಪಾಂಡ್ಯ 19, ಲೆವಿಸ್ 18 ರನ್‍ಗಳನ್ನು ಗಳಿಸಿದರು.

ಕೆಕೆಆರ್ ಪರ ಚಾವ್ಲಾ 3, ಸುನಿಲ್ 1, ಟಾಮ್ 1, ಕೃಷ್ಣಾ 1 ವಿಕೆಟ್‍ಗಳನ್ನು ಗಳಿಸಿದರು.
ನಂತರ ಬ್ಯಾಟಿಂಗ್ ಆರಂಭಿಸಿದ ಕೆಕೆಆರ್ ಮುಂಬೈನ ಬೃಹತ್ ಮೊತ್ತವನ್ನು ಬೆನ್ನತ್ತಲು ಹೋಗಿ 18.1 ಓವರ್‍ಗಳಲ್ಲಿ ತನ್ನೆಲ್ಲಾ ವಿಕೆಟ್‍ಗಳನ್ನು ಕಳೆದುಕೊಂಡು 108 ರನ್‍ಗಳನ್ನಷ್ಟೇ ಗಳಿಸಲು ಸಾಧ್ಯವಾಗಿ 102 ರನ್‍ಗಳಿಂದ ಸೋಲೊಪ್ಪಿಕೊಂಡಿತು. ರಾಣಾ 21, ಕ್ರಿಸ್ 21, ಟಾಮ್ 18, ಉತ್ತಪ್ಪ 14, ಚಾವ್ಲಾ 11 ರನ್‍ಗಳನ್ನು ಗಳಿಸಿದರು.

ಮುಂಬೈ ಪರ ಕೃನಾಲ್ 2, ಹಾರ್ದಿಕ್ 2, ಮಿಚೆಲ್ 1, ಬೂಮ್ರಾ 1, ಮಯಾಂಕ್ 1, ಬೆನ್ 1 ವಿಕೆಟ್ ಗಳಿಸಿದರು.

ಸಂಕ್ಷಿಪ್ತ ಸ್ಕೋರ್:

ಮುಂಬೈ : 210/6 (20)
ಕೆಕೆಆರ್ : 108/10 (18.1)

comments icon 0 comments
0 notes
3 views
bookmark icon

Write a comment...

Your email address will not be published. Required fields are marked *