ಕೇಂದ್ರದ ನೀತಿ ಖಂಡಿಸಿ ಖಾಸಗಿ ವೈದ್ಯರ ಮುಷ್ಕರ

0
15

ದಾವಣಗೆರೆ:

     ಮೆಡಿಕಲ್ ಕೌನ್ಸಿಲ್ ಅಸೋಸಿಯೇಷನ್ ಭ್ರಷ್ಟಗೊಂಡಿದೆ ಎಂಬ ನೆಪವೊಡ್ಡಿ, ಇದನ್ನು ರದ್ದುಗೊಳಿಸಿ ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಖಾಸಗಿ ಆಸ್ಪತ್ರೆಗಳು ತುರ್ತು ಸೇವೆಯನ್ನು ಹೊರತು ಪಡಿಸಿ, ಹೊರ ರೋಗಿಗಳ ವಿಭಾಗದಲ್ಲಿ ಸೇವೆಯನ್ನು ಸ್ಥಗಿತಗೊಳಿಸಿ ಶನಿವಾರ ಭಾರತೀಯ ವೈದ್ಯಕೀಯ ಸಂಸ್ಥೆಯ ಜಿಲ್ಲಾ ಘಟಕದ ನೇತೃತ್ವದಲ್ಲಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದರು.

     ಕೇಂದ್ರ ಸರ್ಕಾರ ವೈದ್ಯರ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಖಾಸಗಿ ವೈದ್ಯಕೀಯ ಕಾಲೇಜು ಲಾಭಿಗೆ ಒಳಗಾಗಿ ಎಂಸಿಎಯನ್ನು ರದ್ದು ಪಡಿಸಿ, ರಾಷ್ಟ್ರೀಯ ವೈದ್ಯಕೀಯ ಆಯೋಗ ರಚಿಸಲು ಹೊರಟಿರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಸ್ಥೆ ಶನಿವಾರ ಧಿಕ್ಕಾರ್ ದಿವಸ್ ಘೋಷಣೆಯಡಿ ಕರೆ ನೀಡಿದ ಮುಷ್ಕರದಲ್ಲಿ ಜಿಲ್ಲೆಯ 85ಕ್ಕೂ ಹೆಚ್ಚು ನರ್ಸೀಂಗ್ ಹೋಮ್‍ಗಳ ಹಾಗೂ 120 ಕ್ಲಿನಿಕ್‍ಗಳ ಸುಮಾರು 600ಕ್ಕೂ ಅಧಿಕ ವೈದ್ಯರು, ಒಳ ರೋಗಿಗಳ ಹಾಗೂ ತುರ್ತು ಸೇವೆಯನ್ನು ಹೊರತುಪಡಿಸಿ, ಹೊರ ರೋಗಿ ವಿಭಾಗ(ಒಪಿಡಿ)ದ ಸೇವೆಯನ್ನು ಸ್ಥಗಿತಗೊಳಿಸಿ, ಡಿಸಿ ಕಚೇರಿಗೆ ನಿಯೋಗದ ಮೂಲಕ ತೆರಳಿ ಅಪರ ಜಿಲ್ಲಾಧಿಕಾರಿ ಪದ್ಮ ಬಸವಂತಪ್ಪ ಅವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

    ನಗರದ ಸಿಟಿ ಸೆಂಟ್ರಲ್, ಯುನಿಟಿ, ಬಾಪೂಜಿ, ಸೌಖ್ಯದ, ಆಶ್ರಯ, ಸುಕ್ಷೇಮಾ, ಆರೈಕ್ಯ, ಸಿಟಿ ಹೆಲ್ತ್ ಸೆಂಟರ್, ನವೋದಯ, ಸನ್‍ಶೈನ್, ಪುರವಂತರ ಸೇರಿದಂತೆ ಬಹುತೇಕ ಖಾಸಗಿ ಆಸ್ಪತ್ರೆಗಳು ಹೊರ ರೋಗಿಗಳ ವಿಭಾಗದ ಸೇವೆಯನ್ನು ಸ್ಥಗಿತ ಗೊಳಿಸಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಮುಷ್ಕರ ನಡೆಸಿ ಕಾರಣ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಬಂದಿದ್ದ ರೋಗಿಗಳು, ರೋಗಿಗಳ ಸಂಬಂಧಿಕರು ಪರದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ, ಖಾಸಗಿ ಆಸ್ಪತ್ರೆಗಳಿಗೆ ಬಂದಿದ್ದ ಸಾರ್ವಜನಿಕರು ಬಂದ ದಾರಿಗೆ ಸೂಂಕವಿಲ್ಲ ಎಂಬಂತೆ, ಕೆಲವರು ನಾಳೆ ಬಂದು ತೋರಿಸಿದರಾಯ್ತು ಅಂತಾ ತಮ್ಮ ಮನೆಗಳ ಕಡೆಗಡೆ ಹಾಗೂ ಊರುಗಳ ಕಡೆಗೆ ಹೆಜ್ಜೆ ಹಾಕಿದರು.

   ಇನ್ನೂ ಭಾರೀ ಸುಸ್ತಾಗಿದ್ದ ರೋಗಿಗಳು ಹಾಗೂ ರೋಗಿಗಳ ಸಂಬಂಧಿಕರು ನಗರದ ಜಿಲ್ಲಾ ಸಾರ್ವಜನಿಕರ ಆಸ್ಪತ್ರೆ, ಹಳೇ ಮಹಿಳಾ ಆಸ್ಪತ್ರೆ ಸೇರಿದಂತೆ ಆಯಾ ತಾಲೂಕು ಕೇಂದ್ರಗಳಲ್ಲಿರುವ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದರು. ಹೀಗಾಗಿ ಸರ್ಕಾರಿ ಆಸ್ಪತ್ರೆಗಳು ಶನಿವಾರ ಸಾರ್ವಜನಿಕರಿಂದ ಗಿಜುಗೂಡುತ್ತಿದ್ದವು. ಅಲ್ಲದೆ, ಖಾಸಗಿ ಆಸ್ಪತ್ರೆಗಳ ಮುಷ್ಕರದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ತ್ರಿಪುಲಾಂಭ ಹಾಗೂ ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ, ಯಾವುದೇ ಕಾರಣಕ್ಕೂ ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳು ಯಾವುದೇ ಕಾರಣಕ್ಕೂ ರಜೆ ಹಾಕಬಾರದು ಎಂಬುದಾಗಿ ನಿರ್ದೇಶನ ನೀಡಿದ್ದರ ಹಿನ್ನೆಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ಅಂಥಾ ಹೇಳುವ ಮಟ್ಟಕ್ಕೆ ವೈದ್ಯರ ಹಾಗೂ ವೈದ್ಯಕೀಯ ಸಿಬ್ಬಂದಿಗಳ ಕೊರತೆ ಏನೂ ಕಾಣ ಬರಲಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ಸುಮಾರು 2000 ಸಾವಿರಕ್ಕೂ ಹೆಚ್ಚು ರೋಗಿಗಳು ಚಿಕಿತ್ಸೆ ಪಡೆದರು.

    ಒಟ್ಟಿನಲ್ಲಿ ಖಾಸಗಿ ಆಸ್ಪತ್ರೆಗಳು ಒಪಿಡಿ ಸೇವೆ ಸ್ಥಗಿತಗೊಳಿಸಿದ್ದ ಪರಿಣಾಮ ಖಾಸಗಿ ವೈದ್ಯರನ್ನೇ ನೆಚ್ಚಿ, ನರ್ಸೀಂಗ್ ಹೋಂ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಬಂದಿದ್ದ ಸುಮಾರು ಮೂರು ಸಾವಿರಕ್ಕೂ ರೋಗಿಗಳು ಪರದಾಡುತ್ತಿದ್ದ ದೃಶ್ಯ ಖಾಸಗಿ ಆಸ್ಪತ್ರೆಗಳ ಎದುರು ಕಂಡು ಬಂತು.
ಮುಷ್ಕರದಲ್ಲಿ ಭಾರತೀಯ ವೈದ್ಯಕೀಯ ಒಕ್ಕೂಟದ ಡಾ.ಪ್ರವೀಣ್ ಅಣ್ವೇಕರ್, ಡಾ.ದಿನೇಶ್, ಡಾ.ಎ.ಎನ್.ಶಿವಕುಮಾರ್, ಡಾ.ನಾಗಪ್ರಕಾಶ್, ಡಾ.ಸುಬ್ಬರಾವ್, ಡಾ.ಪ್ರಿಯಾಂಕ, ಡಾ.ನಾಗರತ್ನಮ್ಮ, ಡಾ.ಚಂದನ್ ಮತ್ತಿತರರು ಹಾಜರಿದ್ದರು.

LEAVE A REPLY

Please enter your comment!
Please enter your name here