ಕೇಂದ್ರ ಸರ್ಕಾರದ ನಿರ್ಲಕ್ಷ ದೋರಣೆಯಿಂದ ಪೆಟ್ರೋಲ್ ,ಡಿಜೆಲ್ ಬೆಲೆ ಏರಿಕೆ ಖಂಡಿಸಿ ಸೋಮವಾರ ಜಗಳೂರು ಬಂದ್

0
42

ಜಗಳೂರು:

  ಕೇಂದ್ರ ಸರ್ಕಾರದ ನಿರ್ಲಕ್ಷ ದೋರಣೆಯಿಂದ ಪೆಟ್ರೋಲ್ ,ಡಿಜೆಲ್ ಬೆಲೆ ಏರಿಕೆ ಖಂಡಿಸಿ ಸೋಮವಾರ ಜಗಳೂರು ಬಂದ್ ಮಾಡಲಾಗುತ್ತಿದ್ದು, ವಿವಿಧ ಪಕ್ಷದ ,ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತ ಪಡಿಸಿವೆ ಎಂದು ತಾಲ್ಲೂಕು ಬಾಕ್ ಕಾಂಗೈ ಅಧ್ಯಕ್ಷ ತಿಪ್ಪೇಸ್ವಾಮಿಗೌಡ ಹೇಳಿದರು.

  ಪಟ್ಟಣದಲ್ಲಿ ಶನಿವಾರ ಪತ್ರಕರ್ತರ ಭವನದಲ್ಲಿ ಸುದ್ದಿಘೋಷ್ಠಿಯನ್ನುದ್ದೇಶಿಸಿ ಮಾತನಾಡಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಚ್ಚೇದಿನ ಬರುತ್ತದೆ ಎಂದು ಹೇಳಿ ದೇಶ ಕಂಡರಿಯದಂತೆ ಪೆಟ್ರೋಲ್ ,ಡಿಜೆಲ್ ಬೆಲೆ,ನೂರರ ಗಡಿಯತ್ತ ಬಂದರೂ ನಿಯಂತ್ರಿಸದೇ ಜನ ಸಾಮಾನ್ಯರ ಮೇಲೆ ಬರೆ ಎಳೆಯುವ ಮೂಲಕ ಜೀವನದೊಂದಿಗೆ ಚೆಲ್ಲಾಟ ಆಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತ ಪಡಿಸಿದರು. ಸೋಮವಾರ ನಡೆಯುವ ಬಂದ್‍ಗೆ ರೈತಸಂಘ, ಎಸ್.ಎಫ್.ಐ,ಕರ್ನಾಟಕ ರಕ್ಷಣಾವೇಧಿಕೆ ಸೇರಿದಂತೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.ಸಾರ್ವಜನಿಕರು ಸಹಸಹಕಾರ ನೀಡಬೇಕೆಂದರು.

  ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಗುರುಸಿದ್ದಪ್ಪ ಮಾತನಾಡಿ ಸಾರಿಗೆ ವ್ಯವಸ್ಥೆಯ ಮೇಲೆ ಜೀವನ ನಿಂತಿದ್ದು, ಪೆಟ್ರೋಲ್ ,ಡಿಜೆಲ್ ಬೆಲೆ ಏರಿಕೆಯಿಂದ ಕೃಷಿಕರು, ಕೂಲಿಕಾರ್ಮಿಕರು ಸೇರಿದಂತೆ ಪ್ರತಿಯೊಬ್ಬ ಮನಷ್ಯನ ಮೇಲೆ ಆದಾಯ ಬೆಟ್ಟು ಬೀಳುವ ಮೂಲಕ ಆರ್ಥಿಕ ಅಭಿವೃದ್ಧಿಗೆ ಹಿನ್ನಡೆಯಾಗಲಿದೆ. ಜಗಳೂರು ಬಂದ್‍ಗೆ ನಮ್ಮ ಬೆಂಬಲವಿದೆ ಎಂದರು.

  ಎಪಿಎಂಸಿ ಅಧ್ಯಕ್ಷ ಎಸ್.ಎಸ್.ರಾಜು ಮಾತನಾಡಿ ಜಗಳೂರು ತಾಲ್ಲೂಕಿನ ಜನರು ಮಳೆ ಇಲ್ಲದೇ ಬೆಳೆಗಳು ಒಣಗುತ್ತಿವೆ.ಇತ್ತ ದಿನ ನಿತ್ತ ಪೆಟ್ರೋಲ್,ಡಿಜೆಲ್ ಬೆಲೆಗಳು ಗಗನಕ್ಕೆ ಏರುತ್ತಿರುವುದರಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ತಾಲ್ಲೂಕು ಬರಪೀಡಿತ ತಾಲ್ಲೂಕನ್ನಾಗಿ ಘೋಷಿಸಬೇಕು. ಶೀಘ್ರವೇಪೆಟ್ರೋಲ್,ಡಿಜೆಲ್ ಬೆಲೆಗಳು ನಿಯಂತ್ರಿಸಬೇಕು ಎಂದವರು ಆಗ್ರಹಿಸಿದರು.

  ಈ ಸಂದರ್ಭದಲ್ಲಿ ರೈತ ಸಂಘದ ಮುಖಂಡ ಬಸವರಾಜಪ್ಪ,ಕಾಂಗ್ರೇಸ್ ಜಿಲ್ಲಾ ಕಾರ್ಯದರ್ಶಿ ಪಲ್ಲಾಗಟ್ಟೆ ಶೇಖರಪ್ಪ, ಮಾಜಿ ಜಿ.ಪಂ.ಸದಸ್ಯ ಲಕ್ಷ್ಮಣ್, ಪಟ್ಟಣ ಪಂಚಾಯಿತಿ ಸದಸ್ಯ ಲುಕ್ಮಾನ್‍ಖಾನ್, ಎಪಿಎಂಸಿ ನಾಮನಿರ್ಧೇಶಿತ ಸದಸ್ಯ ಗೋಡೆ ಸಿದ್ದೇಶ್, ನಜೀರ್ ಅಹಮ್ಮದ್ ಮಹಾಲಿಂಗಪ್ಪ ಇತರರು ಹಾಜರಿದ್ದರು.

LEAVE A REPLY

Please enter your comment!
Please enter your name here