ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ¨ ಬಂದನ

0
21

ಬೆಂಗಳೂರು,

   ಕೊಕೇನ್ ಮಾರಾಟ ಮಾಡುತ್ತಿದ್ದ ನೈಜೀರಿಯನ್ ಬಂಧಿಸಿರುವ ಸಿಸಿಬಿ ಪೊಲೀಸರು 75 ಸಾವಿರ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ನೈಜೀರಿಯಾದ ಆಬಿಯಾದ ಜೆರಿ ಆಗಾ(29)ಬಂಧಿತ ಆರೋಪಿಯಾಗಿದ್ದಾನೆ, 5 ಗ್ರಾಂ ಕೊಕೇನ್,1 ಮೊಬೈಲ್, ಒಂದು ದ್ವಿ-ಚಕ್ರ ವಾಹನ ಹಾಗೂ ನಗದು ಸೇರಿ 75 ಸಾವಿರ ಮೌಲ್ಯದ ಮಾಲುಗಳನ್ನು ವಶಪಡಿಸಿಕೊಳ್ಳಲಾಗಿದೆ.


    ಭಾರತಿ ನಗರದ ಫ್ರೋಮ್ ನೇಡ್ ರಸ್ತೆಯಲ್ಲಿ  ಕೊಕೇನ್ ಮಾರಾಟ ಮಾಡಲು ಆರೋಪಿಯು ಯತ್ನ ನಡೆಸುತ್ತಿದ್ದಾಗ ಕಾರ್ಯಾಚರಣೆ ನಡೆಸಿದ ಪೊಲೀಸರು ಬಂಧಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.
ಆರೋಪಿಯು ಹವ್ಯಾಸಿ ಮಾದಕ ವಸ್ತು ದಂದೆಕೋರನಾಗಿದ್ದು, 2017 ರಲ್ಲಿ ಮಹದೇವಪುರದಲ್ಲಿ ಕೊಕೇನ್ ಮಾದಕ ವಸ್ತುವನ್ನು ಮಾಟಾಟ ಮಾರಾಟ ಮಾಡಲು ಯತ್ನಿಸುತ್ತಿದ್ದ ಸಮಯದಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದು ಜೈಲು ಸೇರಿದ್ದನು ನಂತರ ಕೂಡ ಇದೇ ದಂಧೆ ಮುಂದುವರೆಸಿಕೊಂಡು ಬಂದಿರುವುದು ತನಿಖೆಯಿಂದ ತಿಳಿದುಬಂದಿದೆ.ಆರೋಪಿಯ ವಿರುದ್ದ ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

LEAVE A REPLY

Please enter your comment!
Please enter your name here