ಕೊಟ್ಟಿಗೆಗೆ ಬೆಂಕಿ : 2 ಹಸು, 2 ಪಡ್ಡೆಗಳ ಜೀವಂತ ಸಾವು

0
24

ದೊಡ್ಡೇರಿ

   ಆವಿನಮಡುಗು ಗ್ರಾಮದಲ್ಲಿ ಜುಲೈ 28 ರ ರಾತ್ರಿ ದನದ ಕೊಟ್ಟಿಗೆಗೆ ಬೆಂಕಿ ಬಿದ್ದು ಸುಮಾರು 70,000 ಸಾವಿರ ರೂ. ಬೆಲೆಬಾಳುವ ಹಸುಗಳು ಸಜೀವ ದಹನವಾಗಿವೆ.

   ಮಧುಗಿರಿ ತಾಲ್ಲೂಕು ದೊಡ್ಡೇರಿ ಹೋಬಳಿ ಆವಿನಮಡುಗು ಗ್ರಾಮದ ಮಲ್ಲಣ್ಣ ಎಂಬುವವರ ಮನೆಯ ಸಮೀಪದಲ್ಲಿರುವ ದನದ ಕೊಟ್ಟಿಗೆಯಲ್ಲಿ ಬೆಲೆಬಾಳುವ 2 ಹಸು ಮತ್ತು 2 ಪಡ್ಡೆಯ ಕರುಗಳನ್ನು ಕಟ್ಟಿ ತನ್ನ ವಾಸದ ಮನೆಯಲ್ಲಿ ಮಲಗಿ ಬೆಳಗ್ಗೆ ಎದ್ದು ನೋಡಿದಾಗ ಕೊಟ್ಟಿಗೆಯಲ್ಲಿ ಇದ್ದ ಹಸುಗಳು ಮತ್ತು ಅಟ್ಟದಲ್ಲಿದ್ದ ಬೆಲೆಬಾಳುವ ಮರದ ಸಾಮಗ್ರಿಗಳು ಮತ್ತು ಪೊರಕೆಕಡ್ಡಿಗಳು ಸುಟ್ಟು ಭಸ್ಮವಾಗಿರುವುದನ್ನು ಕಂಡಮಾಲೀಕರು ಕಿರುಚಿಕೊಂಡು ಪ್ರಜ್ಞೆ ತಪ್ಪಿ ಬಿದ್ದಾಗ, ಅಕ್ಕ ಪಕ್ಕದ ಮನೆಯವರು ಬಂದು ಇವರಿಗೆ ನೀರು ಕುಡಿಸಿ ಸಮಾಧಾನ ಪಡಿಸಿರುತ್ತಾರೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

LEAVE A REPLY

Please enter your comment!
Please enter your name here