ಕೊಳಚೆ ಪ್ರದೇಶವಾದ ಪಶು ವೈದ್ಯಕೀಯ ಆಸ್ಪತ್ರೆ

0
32

ಶಿಗ್ಗಾವಿ : 

             ಪಟ್ಟಣದ ಮಧ್ಯ ಭಾಗದಲ್ಲಿರುವ ಪಶು ವೈದ್ಯಕೀಯ ಆಸ್ಪತ್ರೆಯು ರೈತರಿಗೆ ಹಾಗೂ ಜಾನುವಾರುಗಳಿಗೆ ಮಾದರಿಯಾಗುವ ಬದಲು ಕೊಳಚೆ ಪ್ರದೇಶವಾಗಿ ನಿರ್ಮಾಣವಾಗಿದೆ
            ತಾಲೂಕಿನ ಜನಸಂಖೈಗೆ ಅನುಗುಣವಾಗಿ ತಾಲೂಕ ಹಾಗೂ ಹೋಬಳಿ ಮಟ್ಟದಲ್ಲಿ ಒಂದು ಪಶು ಆಸ್ಪತ್ರೆಯಿರಬೇಕು ಎಂಬ ಸರಕಾರದ ಆದೇಶದ ಮೇರೆಗೆ ರೈತರ ಬೆನ್ನಲುಬಾಗಿರುವ ಜಾನುವಾರಗಳ ಅಳಿಲು ಸೇವೆಯನ್ನ ಮಾಡಿ ರೈತರಿಗಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪಶು ಆಸ್ಪತ್ರೆಗಳು ನಿರ್ಮಾಣವಾಗಿದ್ದು ಈ ಪಶು ವೈದ್ಯಕೀಯ ಆಸ್ಪತ್ರೆಗೆ ಐತಿಹಾಸಿಕ ಇತಿಹಾಸವಿದೆ ದಿವಂಗತ ಮಾಜಿ ಮುಖ್ಯಮಂತ್ರಿ ಎಸ್ ನಿಜಲಿಂಗಪ್ಪನವರು ಅವಿರೋಧವಾಗಿ ಆಯ್ಕೆಯಾದಾಗ ತಾಲೂಕಿನ ರೈತ ಬಾಂಧವರು ಹಾಗೂ ಸಾರ್ವಜನಿಕರೆಲ್ಲರೂ ಸೇರಿ ಪಶು ಆಸ್ಪತ್ರೆಯ ಬೇಡಿಕೆಯನ್ನ ಇಟ್ಟು ಅವರ ಮೂಲಕ ಮಂಜೂರಾತಿ ಪಡೆದು ಶಿಗ್ಗಾವಿಗೆ ಹಳೆ ಬಸ ನಿಲ್ದಾಣದ ಎದುರಿಗೆ ಈಗಿನ ಜನತಾ ಬಜಾರ ಸ್ಟೋರದಲ್ಲಿ ಪಶು ಆಸ್ಪತ್ರೆಯು ಕಾರ್ಯ ನಿರ್ವಹಿಸುತ್ತಿತ್ತು.
            ಸದ್ಯ ಪಶು ಆಸ್ಪತ್ರೆಯು ಕೆನರಾ ಬ್ಯಾಂಕ ಹತ್ತಿರ ಅಂದರೆ ಜಯನಗರದಲ್ಲಿ ವಿಶೇಷ ಅನುದಾನದಲ್ಲಿ ಪಶು ಆಸ್ಪತ್ರೆಯು ಸ್ವಂತ ಕಟ್ಟಡವನ್ನ ಹೊಂದಿ ವಿಶಾಲವಾಗಿದ್ದು ಆದರೆ ಅದನ್ನ ವ್ಯವಸ್ಥಿತವಾಗಿ ನಿರ್ವಹಣೆ ಮಾಡದ ಸ್ಥಿತಿ ಕಂಡು ಬರುತ್ತಿದೆ.
ರೈತರ ಬೆನ್ನಲುಬ ಆದ ಜಾನುವಾರಗಳ ಆರೈಕೆಯನ್ನ ರೈತರು ಹೊರತು ಪಡಿಸಿದರೆ ನಂತರ ಪಶು ಆಸ್ಪತ್ರೆಯ ವೈಧ್ಯಾದಿಕಾರಿಗಳು ಚಿಕಿತ್ಸೆ ಮತ್ತು ಸೇವೆಯನ್ನ ಮಾಡುತ್ತಾ ಬಂದ ಇತಿಹಾಸವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜಾನುವಾರಗಳ ಬಗ್ಗೆ ನಿಷ್ಕಾಳಜಿ ವಹಿಸುತ್ತಾ ಬಂದಿದ್ದಾರೆ. ಇದಕ್ಕೆ ಸಾಕ್ಷಿ ಈ ನೈರ್ಮಲ್ಯದಿಂದ ಕೂಡಿದ ವಾತಾವರಣ ಮತ್ತು ಪರಿಸರ.
           ಪಶು ಆಸ್ಪತ್ರೆಯ ಸುತ್ತ ಮುತ್ತ ನೈರ್ಮಲ್ಯದಿಂದ ಕೂಡಿದ ವಾತಾವರಣ ಅದರ ಬಗ್ಗೆ ಕಿಂಚಿತ್ತು ಕಾಳಜಿ ಅಧಿಕಾರಿಗಳಿಗಿಲ್ಲ. ವಿರ್ಪಯಾಸವೆನೆಂದರೆ ಜಾನುವಾರುಗಳನ್ನು ಚಿಕಿತ್ಸೆಗೆ ತೆಗೆದುಕೊಂಡು ಬಂದ ರೈತನ ಪಾಡು ಅದೋಗತಿ ಅವನು ಸಹಿತ ಚಿಕಿತ್ಸೆ ಪಡೆಯ ಬೇಕಾದ ಅನಿವಾರ್ಯತೆ ಪಶು ಆಸ್ಪತ್ರೆಯ ಆವರಣದಲ್ಲಿ ಬಾಸವಾಗಿದೆ.
           ರೈತರು ಬಂದು ತಮ್ಮ ಸಮಸ್ಯೆಗಳನ್ನ ವ್ಯಕ್ತಪಡಿಸಿದಾಗ ಅದರ ಬಗ್ಗೆ ಅಸಮಾಧಾನದಿಂದ ವರ್ತಿಸುವುದು ಸರ್ವೇಸಾಮಾನ್ಯ ಮತ್ತು ದೂರವಾಣಿ ಮುಖಾಂತರ ಮಾತನಾಡಿದಾಗ ಅದಕ್ಕೆ ಸ್ಪಂದಿಸದೆ ಬೇಜವ್ದಾಬಾರಿಯಿಂದ ಮಾತನಾಡಿ ಯಾರಿಗಾದರೂ ಹೇಳಿ ನಿಮಗೆ ಏನು ಮಾಡಕ್ಕಾಗಲ್ಲ ಎಂದು ಹೇಳುವ ಅಧಿಕಾರಿಗಳ ವರ್ತನೆ ಎಷ್ಟು ಸಮಂಜಸ ಇತಂಹ ಅಧಿಕಾರಿಗಳು ನಮಗೆ ಬೇಕಾ ಎನ್ನುವ ಯಕ್ಷ ಪ್ರಶ್ನೆ ರೈತರಿಗೆ ಕಾಡುತ್ತಿದೆ.
           ಅಷ್ಟೇ ಅಲ್ಲದೇ ಪಶು ಆಸ್ಪತ್ರೆಯ ಪಕ್ಕದಲ್ಲಿರುವ ಉದ್ಯಾನವನಕ್ಕಾಗಿ ಮೀಸಲಿಟ್ಟ ಜಾಗವೂ ಸಹಿತ ಪುರಸಭೆಯ ನಿಷ್ಕಾಳಜಿಯಿಂದವೋ ಅಥವಾ ವಾರ್ಡಿನ ಸದಸ್ಯರ ನಿಷ್ಕಾಳಜಿಯಿಂದಲೋ ತಿಳಿಯದೇ ಈಗ ಹಂದಿಗಳ ವಾಸಸ್ಥಳವಾಗಿದೆ ಕೂಡಲೇ ಉದ್ಯಾನವನದ ಜಾಗವನ್ನು ಸ್ವಚ್ಚತೆಗೊಳಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕಿದೆ ಜೊತೆಗೆ ಇಲ್ಲಿಯ ಪಶು ಆಸ್ಪತ್ರೆಯ ಜಾಗವನ್ನೂ ಸಹಿತ ಸಾರ್ವಜನಿಕರು ಅತಿಕ್ರಮಣ ಮಾಡಿದ್ದಾರೆ ಎಂಬ ಆರೋಪವೂ ಸಹಿತ ಇದ್ದು ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶಿಸುತ್ತಿದ್ದಾರೆ ಮುಂದಾದರೂ ಈ ಎಲ್ಲ ಸಮಸ್ಯೆಗಳಿಗೆ ಸ್ಪಂದಿಸಿ ರೈತರು ಹಾಗೂ ಜಾನುವಾರಗಳ ಬಗ್ಗೆ ನಿಷ್ಕಾಳಜಿ ಮತ್ತು ಬೇಜವ್ದಾಬಾರಿಯಿಂದ ವರ್ತಿಸುವುದನ್ನು ಬಿಟ್ಟು ಕಾರ್ಯಪ್ರವೃತ್ತರಾಗುತ್ತಾರೋ ಕಾದು ನೋಡಬೇಕಿದೆ.

LEAVE A REPLY

Please enter your comment!
Please enter your name here