ಕ್ರಿಕೆಟ್ ದೇವರ ಮೇಲೆ ಶ್ರೀರೆಡ್ಡಿ ಆರೋಪ

0
62

ಮುಂಬೈ:               

                ಎಲುಬು ಇಲ್ಲದ ನಾಲಿಗೆ ಎಂದು  ಟಾಲಿವುಡ್ ನಟ ನಾನಿ ಹಾಗೂ ಪವನ್ ಕಲ್ಯಾಣ್​ರ ವಿರುದ್ಧ ಆಧಾರರಹಿತ ಆರೋಪ ಮಾಡಿ ಸುದ್ದಿಯಾಗಿದ್ದ ಶ್ರೀರೆಡ್ಡಿ ಈಗ ಕ್ರಿಕೆಟ್ ದೇವರು ಎಂದೇ ಖ್ಯಾತರಾದ ಸಚಿನ್ ತೆಂಡುಲ್ಕರ್ ವಿರುದ್ಧ  ಆರೋಪ ಮಾಡಿದ್ದಾರೆ. ಕ್ರಿಕೆಟ್ ಜೆಂಟಲ್​ವ್ಯಾನ್ ಸಚಿನ್​ಗೆ ನಟಿಯೊಬ್ಬರ ಜತೆ ಸಂಬಂಧವಿತ್ತು ಎನ್ನುವ ಅರ್ಥದಲ್ಲಿ ಫೇಸ್​ಬುಕ್​ನಲ್ಲಿ ಬರೆದುಕೊಂಡಿರುವ ಶ್ರೀರೆಡ್ಡಿ ಕ್ರಿಕೆಟ್ ಅಭಿಮಾನಿಗಳಿಂದ ದೊಡ್ಡ ಮಟ್ಟದ ಟೀಕೆ ಮತ್ತು ಕೆಂಗಣ್ಣಿಗೆ ಗುರಿಯಾಗಿದ್ದಾರೆ.

                ಪೋಸ್ಟ್​ನಲ್ಲಿ ನೇರವಾಗಿ ಯಾರ ಮೇಲೂ ಆರೋಪ ಮಾಡದ ಶ್ರೀರೆಡ್ಡಿ, ‘ಸಚಿನ್ ತೆಂಡುಲ್ಕರನ್ ಎನ್ನುವ ರೊಮಾಂಟಿಕ್ ವ್ಯಕ್ತಿ, ಹೈದರಾಬಾದ್​ಗೆ ಬಂದಾಗಲೆಲ್ಲ, ‘ಚಾರ್ವಿುಂಗ್ ಗರ್ಲ್ ಜತೆ ರೊಮಾನ್ಸ್ ಮಾಡುತ್ತಿದ್ದರು.ಇದಕ್ಕೆ ಗಣ್ಯ ವ್ಯಕ್ತಿ ಚಾಮುಂಡೇಶ್ವರ ಸ್ವಾಮಿ  ಮಧ್ಯವರ್ತಿಯಾಗಿದ್ದ. ಶ್ರೇಷ್ಠ ವ್ಯಕ್ತಿಗಳು ಅತ್ಯುತ್ತಮವಾಗಿ ಆಡುತ್ತಾರೆ, ಅದರರ್ಥ ಅತ್ಯುತ್ತಮವಾಗಿ ರೊಮಾನ್ಸ್ ಕೂಡ ಮಾಡುತ್ತಾರೆ???’ ಎಂದು ತನ್ನ ಫೇಸ್​ಬುಕ್ ಪೇಜ್ ನಲ್ಲಿ ಬರೆದುಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ಆಗಲಿ, ನಟಿ ಚಾರ್ವಿು ಆಗಲಿ ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ಹಿಂದೆ ನಟ ಪವನ್ ಕಲ್ಯಾಣ್ ವಿರುದ್ಧ ಶ್ರೀರೆಡ್ಡಿ ಅವಾಚ್ಯ ಶಬ್ದಗಳನ್ನು ಬಳಸಿದ್ದರು ಬೈದು ಸುದ್ದಿಯಲ್ಲಿದ್ದರು .

LEAVE A REPLY

Please enter your comment!
Please enter your name here