ಕ್ವಾಂಟಿಕೋ ವಿವಾದ: ಕ್ಷಮೆಯಾಚಿಸಿದ ಪ್ರಿಯಾಂಕಾ ಚೋಪ್ರಾ

0
11

ನವದೆಹಲಿ:

  ಭಯೋತ್ಪಾದಕ ದಾಳಿಯಲ್ಲಿ ಪಾಕಿಸ್ತಾನಿಯರನ್ನು ಸಿಲುಕಿಸಲು ಭಾರತೀಯರು ಯತ್ನಿಸುತ್ತಿದ್ದಾರೆ ಎಂಬಂತೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅಭಿನಯದ ಕ್ವಾಂಟಿಕೋ ಸಂಚಿಕೆಯಲ್ಲಿ ತೋರಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಗುರಿಯಾಗುತ್ತಿದ್ದಂತೆ ನಟಿ ಪ್ರಿಯಾಂಕಾ ಚೋಪ್ರಾ ಕ್ಷಮೆ ಕೇಳಿದ್ದಾರೆ.

      ಈ ವಿಚಾರದ ಬಗ್ಗೆ ಪ್ರಿಯಾಂಕಾ ಕೊನೆಗೂ ಮೌನ ಮುರಿದಿದ್ದು ನನಗೆ ತುಂಬಾ ಬೇಸರವಾಗಿದೆ. ಕ್ವಾಂಟಿಕೋ ಎಪಿಸೋಡಿನಲ್ಲಿ ಆ ರೀತಿ ತೋರಿಸಿರುವುದು ಭಾರತೀಯರ ಮನಸ್ಸಿಗೆ ಘಾಸಿಯಾಗಿರುವುದಕ್ಕೆ ನಾನು ಕ್ಷಮೆ ಕೇಳುತ್ತೇನೆ. ನೋವು ಮಾಡುವ ಉದ್ದೇಶ ನನಗಿರಲಿಲ್ಲ. ನಾನು ಪ್ರಾಮಾಣಿಕವಾಗಿ ಕ್ಷಮೆ ಕೇಳುತ್ತಿದ್ದೇನೆ. ನಾನು ಭಾರತೀಯಳು ಎಂದು ಹೇಳಲು ಹೆಮ್ಮೆ ಪಡುತ್ತೇನೆ. ಆ ಭಾವನೆ ಎಂದಿಗೂ ಬದಲಾಗಲ್ಲ ಎಂದು ಟ್ವೀಟ್‌ ಮಾಡಿದ್ದಾರೆ.

      ಈ ವಿವಾದಿತ ಸಂಚಿಕೆ ಪ್ರಸಾರವಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟೀಕೆ ಕೇಳಿಬಂದಿತ್ತು. ಪ್ರಿಯಾಂಕಾ ಚೋಪ್ರಾ ಇಂಡಸ್ಟ್ರಿಗೆ ಹೊಸಬರಲ್ಲ. ಭಾರತೀಯಳಾಗಿ ಪ್ರಿಯಾಂಕಾ ಇದರಲ್ಲಿ ಒಪ್ಪಿದ್ದಾದರೂ ಹೇಗೆ? ಎಂದು ಪ್ರಶ್ನೆ ಕೇಳಿದ್ದರು. ಈ ವಿಚಾರ ವಿವಾದವಾಗುತ್ತಿದ್ದಂತೆ ಕ್ವಾಂಟಿಕೋ ನಿರ್ಮಾಣ ಸಂಸ್ಥೆ ಎಬಿಸಿ ಕೂಡ ಭಾರತೀಯರ ಕ್ಷಮೆಯಾಚಿಸಿತ್ತು. ಈ ಸಂಚಿಕೆಯನ್ನು ಪ್ರಿಯಾಂಕ ನಿರ್ಮಿಸಿಲ್ಲ, ಅವರು ಕಥೆ  ಅಥವಾ ನಿರ್ದೇಶನ ಮಾಡಿಲ್ಲ ಎಂದು ಸ್ಪಷ್ಟಪಡಿಸಿತ್ತು.

LEAVE A REPLY

Please enter your comment!
Please enter your name here