ಖಾಲಿ ಹೊಡೆದ ತರಬೇತಿ ಸಭೆ

0
19

ಹರಪ್ಪನಹಳ್ಳಿ:

      ಗ್ರಾ.ಪಂ ಅಭಿವೃದ್ದಿ ಅಧಿಕಾರಿಗಳು, ಗ್ರೇಡ್ 1 ಕಾರ್ಯದರ್ಶಿ ಗಳಿಗೆ ಆಯೋಜಿಸಿದ್ದ ವೃತ್ತಿ ಭುನಾದಿ ಉಪಗ್ರಹ ಆಧಾರಿತ ತರಬೇತಿ ಸಭೆ ಕೇವಲ ಖಾಲಿ ಕುರ್ಚಿಗಳಿಗೆ ಸೀಮಿತವಾದ ಘಟನೆ ಪಟ್ಟಣದ ತಾ.ಪಂ ಆವರಣದಲ್ಲಿರುವ ಸಾಮರ್ಥ್ಯ ಸೌಧದಲ್ಲಿ ಶನಿವಾರ ಕಂಡು ಸಾಮರ್ಥ್ಯ ಸೌಧದಲ್ಲಿ ಬೆಳಿಗ್ಗೆ 10.30ಕ್ಕೆ ಆರಂಭವಾದ ತರಬೇತಿ ಸಭೆಗೆ ತಾಲೂಕಿನಲ್ಲಿ 37 ಗ್ರಾಮ ಪಂಚಾಯ್ತಿಗಳಿಂದ ಅಂದಾಜು 70 ಜನರಿರುವ ಗ್ರಾಮ ಪಂಚಾಯ್ತಿ ಪಿಡಿಓ ಹಾಗೂ ಕಾರ್ಯದರ್ಶಿಗಳಲ್ಲಿ ಕೇವಲ 30 ರಿಂದ 36 ಜನರು ಆಗಮಿಸಿದ್ದರು.

      ಕಾರ್ಯನಿರ್ವಾಹಕ ಅಧಿಕಾರಿ ಆರ್ .ತಿಪ್ಪೇಸ್ವಾಮಿ ಅವರು ಹಾಜರಿದ್ದರು.ಕಾರ್ಯನಿರ್ವಾಹಕ ಅಧಿಕಾರಿ ತಿಪ್ಪೇಸ್ವಾಮಿಯವರು ಮದ್ಯಾಹ್ನದ ನಂತರ ಮಿನಿ ವಿಧಾನಸೌಧದಲ್ಲಿ ಆಯೋಜಿಸಿದ್ದ ಸ್ವಾತಂತ್ರೋತ್ಸವ ಪೂರ್ವ ಭಾವಿ ಸಭೆಯಲ್ಲಿ ಪಾಲ್ಗೊಳ್ಳಲು ತೆರಳಿದ್ದಾರೆ.

      ಇವರು ತೆರಳಿದ ನಂತರ ಒಬ್ಬೊಬ್ಬರಾಗಿ ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಹಾಗೂ ಕಾರ್ಯದರ್ಶಿಗಳು ತರಬೇತಿ ಸಭೆಯಿಂದ ಕಾಲ್ಕಿತ್ತರು.3 ಗಂಟೆ ನಂತರ ಸಭೆಯಲ್ಲಿ ಒಬ್ಬರು ಇದ್ದಿಲ್ಲ. ಕೇವಲ ಟಿ.ವಿಯಲ್ಲಿ ಮಾತ್ರ ಒಬ್ಬೊಬ್ಬ ಉತ್ತನ ಅಧಿಕಾರಿಗಳು ವಿವಿಧ ವಿಷಯಗಳ ಕುರಿತು ಮಾಹಿತಿ ನೀಡುತ್ತಿದ್ದುದು ಪ್ರಸಾರವಾಗುತ್ತಿತ್ತು.

      ಸಂಜೆ 5.30 ರವರೆಗೆ ತರಬೇತಿ ಕಾರ್ಯಕ್ರಮ ಇದ್ದು, ಸಾಮರ್ಥ್ಯ ಸೌಧದ ಎದುರು ಮನೆಯ ಅಜ್ಜಿಯೊಂದು ಬಂದು ಟಿ.ವಿ. ನೋಡುತ್ತಾ ಕುಳಿತು ಕೊಂಡಿತ್ತು, ವಿಷಯ ನಿರ್ವಾಹಕ ರೊಬ್ಬರು ಮಾತ್ರ ಹಾಜರಿದ್ದರು. ಅಜ್ಜಿ ನೋಡಿ ನೋಡಿ ಸಾಕಾಗಿ ಬರ್ರಿ ಟಿ.ವಿ. ಬಂದ್ ಮಾಡಿ ಎಂದು ವಿಷಯ ನಿರ್ವಾಹಕರಿಗೆ ಕರೆದಳು. 

      ಪಿಡಿಓ ಗಳಿಗೆ ಮಹತ್ವದ್ದಾದ ಇ ಸ್ವತ್ತು, ಬಸವ ವಸತಿ ಯೋಜನೆ ಸೇರಿದಂತೆ ಅನೇಕ ಮಾಹಿತಿಗಳು ಪ್ರಸಾರ ವಾಗುತ್ತಿದ್ದವು. ಆದರೆ ಅವುಗಳನ್ನು ಟಿಪ್ಪಣೆ ಮಾಡಿಕೊಂಡು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡು ಸಾರ್ವಜನಿಕರಿಗೆ ಉಪಯೋಗ ಕಲ್ಪಿಸಿಕೊಡುವ ಅಧಿಕಾರಿಗಳೇ ಇಲ್ಲದಿರುವುದು ಇಂದಿನ ಸರ್ಕಾರಿ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿತ್ತು.

LEAVE A REPLY

Please enter your comment!
Please enter your name here