ಖ್ಯಾತ  ಚಲನಚಿತ್ರ ನಿರ್ಮಾಪಕ, ಸಂಘಟಕ ಎಂ.ಭಕ್ತವತ್ಸಲ ಅವರ ನಿಧನಕ್ಕೆ : ಮುಖ್ಯಮಂತ್ರಿ ತೀವ್ರ ಸಂತಾಪ

0
104

ಬೆಂಗಳೂರು,

ಖ್ಯಾತ  ಚಲನಚಿತ್ರ ನಿರ್ಮಾಪಕ, ಸಂಘಟಕ ಎಂ.ಭಕ್ತವತ್ಸಲ ಅವರ ನಿಧನಕ್ಕೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಇವರ ನಿಧನದಿಂದ ಕನ್ನಡ ಚಲನಚಿತ್ರರಂಗ ಸಂಘಟನಾ ಚತುರ ನಾಯಕನೊಬ್ಬನನ್ನು ಕಳೆದುಕೊಂಡಂತಾಗಿದೆ ಎಂದು ಅವರು ಹೇಳಿದ್ದಾರೆ.

ಎಂ.ಭಕ್ತವತ್ಸಲ ಅವರ ನಿಧನಕ್ಕೆ ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವೆ ಡಾ.ಜಯಮಾಲಾ ಸಂತಾಪ ವ್ಯಕ್ತಪಡಿಸಿದ್ದು, ಭಕ್ತವತ್ಸಲ ಅವರು ಚಲನಚಿತ್ರರಂಗದ ಹಲವಾರು ಕ್ಷೇತ್ರಗಳಲ್ಲಿ ಅನುಭವವುಳ್ಳವರಾಗಿದ್ದರು, ಪ್ರದರ್ಶಕರಾಗಿ, ನಿರ್ಮಾಪಕರಾಗಿ, ವಿತರಕರಾಗಿ ಹಾಗೂ ನಟರಾಗಿಯೂ ಅವರು ಚಿತ್ರರಂಗದ ಆಲ್‍ರೌಂಡರ್ ಆಗಿದ್ದರು ಎಂದಿದ್ದಾರೆ.

ಎಂ.ಭಕ್ತವತ್ಸಲ ಅವರು ಕನ್ನೇಶ್ವರರಾಮ, ಸಂಧ್ಯಾರಾಗ, ಚಂಡಮಾರುತ, ಸಂಸ್ಕಾರದಂತಹ ಹಲವಾರು ಪ್ರಯೋಗಾತ್ಮಕ ಚಿತ್ರಗಳ ನಿರ್ಮಾಪಕರಾಗಿ ಭಕ್ತವತ್ಸಲ ಗಮನ ಸೆಳೆದಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದ ಅವರು, ಸಾಹಿತ್ಯ, ಪರ್ವತಾರೋಹಣ ಕ್ಷೇತ್ರಗಳಲ್ಲೂ ಅವರು ಆಸಕ್ತಿ ಹೊಂದಿದ್ದರು. 2012ರ ಸಾಲಿನ ಪ್ರತಿಷ್ಠಿತ ಡಾ.ರಾಜ್‍ಕುಮಾರ್ ಪ್ರಶಸ್ತಿಗೆ ಅವರು ಭಾಜನರಾಗಿದ್ದರು.

LEAVE A REPLY

Please enter your comment!
Please enter your name here