ಗಂಡ-ಹೆಂಡತಿ ಜಗಳ, ಗಂಡ ಸಾವು- ಹೆಂಡತಿ ಆಸ್ಪತ್ರೆಗೆ ದಾಖಲು

0
35

ಕೊರಟಗೆರೆ

   ಕ್ಷುಲ್ಲಕ ಕಾರಣಕ್ಕೆ ಗಂಡ-ಹೆಂಡತಿ ನಡುವೆ ಜಗಳ ಪ್ರಾರಂಭವಾಗಿ ಮದ್ಯವ್ಯಸನಿಯಾಗಿದ್ದ ಗಂಡ ತನ್ನ ಹೆಂಡತಿಯನ್ನು ಭಯಪಡಿಸಲು ಪ್ರಯತ್ನಿಸಿ ಸೀಮೆಎಣ್ಣೆಯಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಭಾನುವಾರ ಮುಂಜಾನೆ ನಡೆದಿದೆ.

   ತಾಲ್ಲೂಕಿನ ಕೋಳಾಲ ಹೋಬಳಿ ಎಲೆರಾಂಪುರ ಗ್ರಾ.ಪಂ. ವ್ಯಾಪ್ತಿಯ ಕರಿದೊಗ್ಗನಹಳ್ಳಿ ಗ್ರಾಮದ ಲೋಕೇಶ್(42) ಎಂಬುವನೇ ಆತ್ಮಹತ್ಯೆ ಮಾಡಿಕೊಂಡ ಮೃತ ದುರ್ದೈವಿ. ಬೆಂಕಿಯಿಂದ ತೀವ್ರವಾದ ಸುಟ್ಟಗಾಯಗಳಾದ ಮೃತ ವ್ಯಕ್ತಿಯನ್ನು ಸ್ಥಳೀಯರು ತುಮಕೂರಿನ ಸರಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿಯೇ ಮೃತ ಪಟ್ಟಿದ್ದಾನೆ ಎನ್ನಲಾಗಿದೆ.
ಸೀಮೆಎಣ್ಣೆ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಗಂಡನನ್ನು ರಕ್ಷಣೆ ಮಾಡಲು ಹೋದ ಹೆಂಡತಿ ಮರಿಬಸಮ್ಮನಿಗೂ ತೀವ್ರತರಹದ ಗಾಯಗಳಾಗಿ ತುಮಕೂರಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ. ಪಿಎಸೈ ಸಂತೋಷ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊರಟಗೆರೆ ತಾಲ್ಲೂಕಿನ ಕೋಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY

Please enter your comment!
Please enter your name here