ಗಣೇಶ ಮೆರವಣಿಗೆ ಶಾಂತಿ ಸುವ್ಯವಸ್ಥೆಗೆ ನಿಷೇಧಾಜ್ಞೆ ಜಾರಿ :ಚಂದನ್ ಗೊಪಾಲ್

0
61

ಸಿರುಗುಪ್ಪ :-

             ನಗರದಲ್ಲಿ ಗಣೇಶೋತ್ಸವ ಮೆರವಣಿಗೆಯನ್ನು ಶಾಂತಿ ಸುವ್ಯವಸ್ಥಿತವಾಗಿ ನಡೆಸುವ ಉದ್ದೇಶದಿಂದ ನಗರದ ಹಲವೆಡೆ ಸಿಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ 144ನಿಷೇಧಾಜ್ಞೆಯನ್ನು ಜಾರಿಗೊಳಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಚಂದನ್ಗೋಪಾಲ್ ಶನಿವಾರ ಪತ್ರಕರ್ತರಿಗೆ ತಿಳಿಸಿದರು.

               ಇದೇ ಮೊದಲ ಬಾರಿಗೆ ಹಲವು ದಶಕಗಳಿಂದ ನಡೆಯುತ್ತಿದ್ದ ಗಣೇಶ ಮೆರವಣಿಗೆ ಸಾಂಪ್ರದಾಯಿಕ ಮಾರ್ಗದಲ್ಲಿನ ಬದಲಾವಣೆಯ ಹಿನ್ನೆಲೆಯಲ್ಲಿ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ನಿಷೇಧಿತ ಪ್ರದೇಶಗಳಲ್ಲಿ ತಹಶೀಲ್ದಾರ್ ಎಂ.ಸುನಿತಾ ಅವರು ಈಗಾಗಲೇ ಸಿ.ಆರ್.ಪಿ.ಸಿ.ಕಲಂ ಅನ್ವಯ 144ಸೆಕ್ಷನ್ ಜಾರಿಗೊಳಿಸಿ ಆದೇಶ ಹೊರಡಿಸಿದ್ದಾರೆ.

               ದೇಶನೂರ ರಸ್ತೆ ಬುಡ್ಡೆಕಲ್ಲೇಶ್ವರ ಡಾ, ಮೊಹಮ್ಮದ್ ಅಲಿ ಮನೆ ಎಡತಿರುವಿನಿಂದ ಸೌದಾಗರ್ ಮಸೀದಿ ಮತ್ತು ಕಾಳಿಕಾದೆವಿ ರಸ್ತೆ ಯಂಜನವರೆಗೆ ಸೆಕ್ಷನ್ ಸೋಮವಾರ ಬೆಳಿಗ್ಗೆ 10 ಗಂಟೆಯಿಂದ ಮಂಗಳವಾರ ಬೆಳಿಗ್ಗೆ 8 ಗಂಟೆಯವರೆಗೆ ಆದೇಶ ಪಾಲನೆಯಲ್ಲಿದೆ. ಕಾರಣ ನಿಷೇಧಿತ ದೇಶನು?ರು ರಸ್ತೆಯ ಸ್ಥಳಕ್ಕೆ ಸಾರ್ವಜನಿಕರು ಗುಂಪು ಗುಂಪಾಗಿ ಪ್ರದೇಶ ಮಾಡುವುದು ಮತ್ತು ಅತಿಕ್ರಮವಾಗಿ ಪ್ರವೇಶ ಮಾಡಿದರೆ ಪೆÇಲೀಸ್ ಇಲಾಖೆ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದರು. ಈ ಬಾರಿ ಗಣೇಶ ಮೆರವಣಿಗೆಯಲ್ಲಿ ಮೇಲೆ ನಿಗಾ ವಹಿಸುವ ಹಿನ್ನೆಲೆ ಹಾಗೂ ಭದ್ರತಾ ವ್ಯವಸ್ಥೆಗಾಗಿ ನಗರದ ಪ್ರಮುಖ ಆಯಕಟ್ಟಿನ ಸ್ಥಳಗಳಲ್ಲಿ ಸ್ಥಳಗಳಲ್ಲಿ ಕಿಡಿಗೇಡಿಗಳ ಮೇಲೆ ನಿಗಾ ವಹಿಸಲು 10ಕಡೆ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ ಎಂದು ತಿಳಿಸಿದರು.

                   ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಇಬ್ಬರು ಡಿವೈಎಸ್ಪಿ, 6ಸಿಪಿಐ, 8ಪಿಎಸ್‍ಐ,15ಎಎಸ್‍ಐ, 150 ಕಾನ್ಸ್ ಸ್ಟೆಬಲ್, ಐಆರ್ ಬಿ, ಕೆಎಸ್‍ಆರ್ ಪಿ, ಹಾಗೂ ಡಿಆರ್ ಆರ್ ನ, ತಲಾ ಒಂದು ತುಕಡಿ 40ಸ್ಥಳೀಯ ಸಿಬ್ಬಂದಿ ಭದ್ರತೆಗೆ ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು. ನಗರದಲ್ಲಿ ಒಟ್ಟು48 ಗಣೇಶಗಳ ಪ್ರತಿಷ್ಠಾಪನೆಗೊಂಡಿದ್ದು ಈ ಪೈಕಿ ಮೊದಲದಿನ2, ಮೂರನೇ ದಿನ31, ಐದನೇ ದಿನಕ್ಕೆ12, ಏಳನೇ ದಿನಕ್ಕೆ1, ಒಂಬತ್ತನೇ ದಿನಕ್ಕೆ2, ಗಣೇಶ ಮೂರ್ತಿಗಳ ವಿಸರ್ಜನೆ ನಡೆಯಲಿದೆ ಎಂದರು.

LEAVE A REPLY

Please enter your comment!
Please enter your name here