ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ

0
29

ಬಳ್ಳಾರಿ:

      ಪ್ರತಿಯೊಂದು ಸಾಧನೆಗಳ ಹಿಂದೆ ಗುರುವಿನ ಆರ್ಶಿವಾದ ಹಾಗೂ ಮಾರ್ಗದರ್ಶನ ಇದ್ದೇ ಇರಲಿದೆ ಎಂದು ರಾಮೇಶ್ವರಿ ಟ್ರಸ್ಟ್ ಅಧ್ಯಕ್ಷ ಮಹೇಶ್ ಅಗೀವಾಲ್ ಅವರು ಹೇಳಿದರು.

      ನಗರದ ಹೊರವಲಯದ ಅಲ್ಲೀಪುರ, ರಾಮೇಶ್ವರಿ ನಗರದ ಶ್ರೀವೆಂಕಟೇಶ್ವರ ಮಂಗಲ ಭವನದಲ್ಲಿ ಪತಂಜಲಿ ಜಿಲ್ಲಾ ಯೋಗ ಸಮೀತಿ ಆಶ್ರಯದಲ್ಲಿ ಗುರುಪೂರ್ಣಿಮೆ ಹಾಗೂ ಸಾಂಸ್ಕತಿಕ ಸಮಾರಂಭದ ನಿಮಿತ್ತ ಆಯೋಜಿಸಿದ್ದ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದರು. ಗುರುಪೂರ್ಣಿಮೆಯನ್ನು ಹಾಗೂ ಕಾರ್ಯಕ್ರಮವನ್ನು ಈ ಹಿಂದೆ ಅರ್ಥಪೂರ್ಣವಾಗಿ ಆಚರಿಸಲಾಗುತ್ತಿತ್ತು. ಅರಿವೇ ಗುರು, ಗುರುವಿಗೆ ಗೌರವ ಕೊಡುವ ಪದ್ಧತಿ ಮುಂದುವರೆಯಬೇಕು. ಗುರುವಿಗೆ ಗೌರವ ಕೊಡುವದರಿಂದ ಯುವಕರು ನಾನಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿ ಎತ್ತರಕ್ಕೆ ಬೆಳೆಯಬಹುದು. ಪ್ರಸ್ತುತ ದಿನಗಳಲ್ಲಿ ಯುವಕರೂ ಸೇರಿದಂತೆ ಎಲ್ಲರೂ ಗುರುವಿಗೆ ಗೌರವ ಕೊಡುವುದು ಕಡಿಮೆಯಾಗುತ್ತಿದ್ದು, ಇದರಿಂದ ಅಭಿವೃಧ್ಧಿ ಕುಂಟಿತವಾಗಲಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಯುವಕರು ಮುಂದೆ ನಡೆದರೇ ಜೀವನವೇ ಬದಲಾಗಲಿದೆ ಎಂದರು.

      ಕಮ್ಮರಚೇಡು ಸಂಸ್ಥಾನ ಮಠದ ಕಲ್ಯಾಣ ಸ್ವಾಮೀಜಿ ಅವರು ಸಮಾರಂಭದ ಸಾನಿಧ್ಯ ವಹಿಸಿ ಮಾತನಾಡಿ, ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕ್ತಿ ಎನ್ನುವ ಹಾಗೇ ಪ್ರತಿಯೋಬ್ಬರೂ ಗುರುವಿಗೆ ಗೌರವ ನೀಡಲು ಮುಂದಾಗಬೇಕು. ಯಾವುದೇ ಗುರಿ ಸಾಧಿಸಬೇಕಾದರೇ ಗುರುವಿನ ಆರ್ಶಿವಾದ ಹಾಗೂ ಮಾರ್ಗದರ್ಶನ ಅತ್ಯಗತ್ಯ ಎಂದರು.
ಹರ ಮುನಿದರೇ ಗುರು ಕಾಯುವನು ಎನ್ನುವ ಹಾಗೇ ಹಿಂದೆ ಗುರು, ಮುಂದೆ ಗುರಿಯಿದ್ದರೇ ಜೀವನದಲ್ಲಿ ಎಂತಹ ಕ್ಷೇತ್ರವಿರಲಿ ಸಾಧನೆ ಮಾಡಬಹುದು. ಈ ಹಿನ್ನೆಲೆಯಲ್ಲಿ ಪ್ರತಿಯೋಬ್ಬರೂ ಇದನ್ನು ಅರ್ಥಮಾಡಿಕೊಂಡು ಜೀವನದಲ್ಲಿ ಮುಂದೆ ನಡೆದರೇ ಯಾವುದೇ ಕ್ಷೇತ್ರವಿರಲಿ ಸಾಧನೆ ಮಾಡಬಹುದು ಎಂದರು. ಪತಂಜಲಿ ಯೋಗ ಸಮೀತಿ ಅಧ್ಯಕ್ಷ ಅಶೋಕ್ ದಿನ್ನಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಮೀತಿ ಮುಖಂಡರಾದ ಚಂದ್ರೇಗೌಡ, ಲಕ್ಷ್ಮೀ ರೆಡ್ಡಿ, ಸಂತೋಷ್ ಮೆಹ್ತಾ, ಕೃಷ್ಣ, ಪುರಾಣಿಕ್ ಹಾಗೂ ದೊಡ್ಡ ಬಸಯ್ಯ, ಪ್ರಕಾಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು. ಲಕ್ಷ್ಮೀ ಪವನ್ ಕುಮಾರ್ ಪ್ರಾರ್ಥಿಸಿದರು. ಲಕ್ಷ್ಮೀ ರೆಡ್ಡಿ ಸ್ವಾಗತಿಸಿದರು. ಗೂಳೆಪ್ಪ ಬೆಳಗುರ್ಕಿ ವಂದಿಸಿದರು. ಉಪನ್ಯಾಸಕ ಜಗಧೀಶ್ ಬಸಾಪೂರ ಕಾರ್ಯಕ್ರಮ ನಿರ್ವಹಿಸಿದರು.

LEAVE A REPLY

Please enter your comment!
Please enter your name here