ಗೊಲ್ಲರಹಟ್ಟಿಯಲ್ಲಿ ಮತಯಾಚಿಸಿದ ಎಸ್ ಆರ್ ಶ್ರೀನಿವಾಸ್

0
2

ಎಂ ಎನ್ ಕೋಟೆ :

       ಕಳೆದ ಭಾರಿ ನಾನು ವಿಧಾನ ಸಭಾ ಚುನಾವಣೆಗೆ ನಿಂತಗಲು ಈ ಗೊಲ್ಲ ಜನಾಂಗ ನನ್ನಗೆ ಸಂಪೂರ್ಣ ಬೆಂಬಲ ನೀಡಿ ನನ್ನನ್ನು ಸಚಿವನಾಗಿ ಮಾಡಿದೆ ಎಂದು ಸಚಿವ ಎಸ್ ಆರ್ ಶ್ರೀನಿವಾಸ್ ತಿಳಿಸಿದರು.

      ಗುಬ್ಬಿ ತಾಲ್ಲೂಕಿನ ಹರದಗೆರೆ ಗೊಲ್ಲರಹಟ್ಟಿ,ಬೀಳೆಕಲ್ಲನಹಟ್ಟಿ,ಮುದ್ದಪುರ ಗೊಲ್ಲರಹಟ್ಟಿಗಳಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ಪರ ಮತಯಾಚಿಸಿ ಮಾತನಾಡಿದ ಅವರು ಈ ಜನಾಂಗದ ಋಣ ನನ್ನ ಮೇಲೆ ಇದೆ ನಾನು ಪಕ್ಷೇತರವಾಗಿ ಅಭ್ಯರ್ಥಿಯಾಗಿ ಹಾಗೂ ಕಳೆದ ಭಾರಿ ಜೆಡಿಎಸ್ ಪಕ್ಷದಿಂದ ನಿಂತಗಲೂ ಈ ಜನಾಂಗ ನನ್ನಗೆ ಸಂಪೂರ್ಣ ಬೆಂಬಲ ನೀಡಿತ್ತು.ಅದೇ ರೀತಿ ಲೋಕಸಭಾ ಚುನಾವಣೆಯಲ್ಲಿ ದೇವೇಗೌಡರ ಪರ ಸಂಪೂರ್ಣ ಬೆಂಬಲ ನೀಡಲಿದ್ದಾರೆ.

      ಗೊಲ್ಲರಹಟ್ಟಿಗಳನ್ನು ಅಭಿವೃದ್ಧಿ.ಮಾಡಲು ಕುಡಿಯುವ ನೀರು,ರಸ್ತೆ,ಹಾಗೂ ಗ್ರಾಮ ನೈರ್ಲಗಳ ಮುಖಾಂತರ ಈ ಜನಾಂಗವನ್ನು ಮುಂದೆ ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ ಮುಖಂಡರಾದ ಸಿದ್ದರಾಜು, ಜುಂಜೇಗೌಡ , ಗುರುಲಿಂಗಯ್ಯ,ನಾಗರಾಜು ,ತಿಮ್ಮೇಗೌಡ ,ಲಿಂಗರಾಜು ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

LEAVE A REPLY

Please enter your comment!
Please enter your name here