ಗೌರಿ ಹತ್ಯೆ : ಆರೋಪಿಗಳ ಬೈಕ್ ಪತ್ತೆ

0
45

ಬೆಂಗಳೂರು:

Related image

      ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಬಳಸಿದ್ದ ಬೈಕ್ ಮತ್ತು ಪಿಸ್ತೂಲಿಗೆ ಶೋಧ ಕಾರ್ಯ ನಡೆಯುತ್ತಿದ್ದು, ಈ ಕುರಿತು ಬೈಕ್ ಒಂದನ್ನು  ಎಸ್ ಐಟಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

      ಗೌರಿ ಹತ್ಯೆ ಪ್ರಕರಣದಲ್ಲಿ ಕುಣಿಗಲ್‌ನಲ್ಲಿ ಬಂಧಿತನಾದ ಸುರೇಶ್ ಎಂಬಾತನಿಗೆ ಸೇರಿದ್ದ ಬೈಕ್ ಇದಾಗಿದ್ದು, ಗೌರಿಲಂಕೇಶ್ ಹತ್ಯೆ ಆರೋಪಿಗಳು ಇದೇ ಹಿರೋ ಹೊಂಡಾ ಬೈಕಿನಲ್ಲಿ ಗೌರಿ ಅವರ ಮನೆ ಬಳಿ ಸುತ್ತಾಡಿ ಯೋಜನೆಗಳನ್ನು ರೂಪಿಸಿದ್ದರು. ಬೈಕ್‌ನ ನಂಬರ್ ಪ್ಲೇಟ್‌ ಅನ್ನು ಸುರೇಶ್ ಸುಟ್ಟು ಹಾಕಿದ್ದಾನೆ ಎಂದು ಎಸ್‌ಐಟಿ ಆರೋಪಿಸಿದೆ. 

       ಈಗ ಪತ್ತೆಯಾಗಿರುವ ಬೈಕ್ ಕೊಲೆಯ ದಿನ ಬಳಸಿದ್ದಲ್ಲ ಬದಲಿಗೆ, ಕೊಲೆಗೆ ಮುಂಚೆ ಗೌರಿ ಅವರ ಮನೆ ನೋಡಲು, ಹಾಗೂ ಅಲ್ಲಿಂದ ತಪ್ಪಿಸಿಕೊಳ್ಳಲು ದಾರಿಗಳನ್ನು ಹುಡುಕಿದ್ದು. ಕೊಲೆಯ ದಿನ ಬಳಸಿದ್ದ ಬೈಕ್ ಅನ್ನು ಪತ್ತೆ ಮಾಡಬೇಕಿದೆ. 

      ಇನ್ನು ಪಿಸ್ತೂಲಿನ ಕುರಿತು ತನಿಖೆ ಜಾರಿಯಲ್ಲಿದ್ದು, ಆದಷ್ಟು ಶೀಘ್ರವಾಗಿ ಅದನ್ನೂ ಪತ್ತೆ ಹಚ್ಚಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.

LEAVE A REPLY

Please enter your comment!
Please enter your name here