ಗ್ರಾಹಕರಿಗೆ ವಾಹನ ಸವಾರರ ಕಿರಿಕಿರಿ ತಪ್ಪಿಸಿ

0
30

ತಿಪಟೂರು :

      ನಗರದಲ್ಲಿರುವ ಎ.ಪಿ.ಎಂ.ಸಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯಲ್ಲಿ ವಾಹನ ಸವಾರರಿಂದ ಹಣ್ಣು ಮತ್ತು ತರಕಾರಿ ಕೊಳ್ಳಲು ಬರುವ ಗ್ರಾಹಕರು ವಾಹನ ಸವಾರರಿಂದ ಹೈರಣರಾಗಿದ್ದು ಮಾರುಕಟ್ಟೆಯ ಸಹವಾಸವೇ ಬೇಡವೆಂಬ ಸ್ಥಿತಿಗೆ ಬಂದಿದ್ದಾರೆ.

      ನಗರದಲ್ಲಿ ಕಳೆದ 2 ವರ್ಷಗಳ ಹಿಂದೆ ನಿರ್ಮಿಸಿದ್ದ ಎ.ಪಿ.ಎಂ.ಸಿ ಹಣ್ಣು ಮತ್ತು ತರಕಾರಿ ಮಾರುಕಟ್ಟೆಯ ಮುಂದೆ ವಾಹನ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿದ್ದರು ಕೆಲವು ಗ್ರಾಹಕರು ತಮ್ಮ ದ್ವಿಚಕ್ರ ವಾಹನಗಳನ್ನು ಮಾರುಕಟ್ಟೆಯ ಒಳಗೆ ತರುತ್ತಿರುವುದು, ಮತ್ತು ವರ್ತಕರುಗಳು ತರಕಾರಿ ಸಾಗಾಣೆಗೆ ವಾಹನಗಳನ್ನು ಒಳಗೆ ತರುತ್ತಿದ್ದಾರೆ. ಇದರಿಂದ ಮಾರುಕಟ್ಟೆಯ ಒಳಗೆ ಹಿಂದೆ ಮುಂದೆ ಓಡಾಡಲು ಜಾಗವಿಲ್ಲದಷ್ಟು ಸಂಚಾರದಟ್ಟನೆ ಉಂಟಾಗುತ್ತದೆ.

      ಇದಕ್ಕೆ ಎ.ಪಿ.ಎಂ.ಸಿ.ಯ ವತಿಯಿಂದ ಮಾರುಕಟ್ಟೆಗೆ ಭದ್ರತಾ ಸಿಬ್ಬಂದಿಯನ್ನು ನೇಮಿಸಿದ್ದು ಅವರು ಯಾರಾದರು ಅಧಿಕಾರಿಗಳು ಬರುತ್ತಾರೆಂದರೆ ಮಾತ್ರ ಬಂದು ಯಾವುದೇ ವಾಹನಗಳನ್ನು ಒಳಗೆ ಹೋಗದಂತೆ ತಡೆಯುತ್ತಾರೆ. ಅದೊಂದು ದಿನ ಎಲ್ಲರೂ ಸಮಾದಾನದಿಂದ ತಮಗೆ ಬೇಕಾಗದ ವಸ್ತುಗಳನ್ನು ತೆಗೆದುಕೊಳ್ಳುತ್ತೇವೆಂದು ಗ್ರಾಹಕರಾದ ವಿಜಯ್‍ಕುಮಾರ್ ತಿಳಿಸಿದರು.

      ಗ್ರಾಹಕರು ಹೇಳುವಂತೆ ಹೆಚ್ಚಿನವರು ಹಿರಿಯರು ಕೆರೆಯದಂಡೆಯಲ್ಲಿ ವಾಯುವಿಹಾರ ಮಾಡಿಕೊಂಡು ತರಕಾರಿಗಳನ್ನು ತೆಗೆದುಕೊಳ್ಳಲು ಬರುತ್ತಾರೆ. ಆದರೆ ಈ ವಾಹನಗಳ ದಟ್ಟಣೆಯಿಂದ ನಮಗೆ ಸಾಕಾಗಿ ಹೋಗಿದೆ. ಭದ್ರತಾ ಸಿಬ್ಬಂದಿಗಳು ತಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸಿದರೆ ನಾವು ನೆಮ್ಮದಿಯಾಗಿ ಮಾರುಕಟ್ಟೆಯಲ್ಲಿ ಬೇಕಾದ ವಸ್ತುಗಳನ್ನು ಕೊಳ್ಳಬಹುದೆನ್ನುತ್ತಾರೆ.

      ಆದ್ದರಿಂದ ಎ.ಪಿ.ಎಂ.ಸಿ.ಯ ಅಧಿಕಾರಿಗಳು ಈ ಅವ್ಯವಸ್ಥೆಯನ್ನು ಸರಿಪಡಿಸಿ ಯಾವುದೇ ದ್ವಿಚಕ್ರವಾಹನಗಳನ್ನು ಮಾರುಕಟ್ಟೆಯ ಆವರಣದೊಳಗೆ ಪ್ರವೇಶಿಸಿದಂತೆ ತಡೆದು ಗ್ರಾಹಕರುಗಳಿಗೆ ಅನುಕೂಲಮಾಡಿಕೊಡಬೇಕೆಂದು ಗ್ರಾಕರುಗಳು ಆಗ್ರಹಿಸಿದ್ದಾರೆ.

LEAVE A REPLY

Please enter your comment!
Please enter your name here