ಗ್ರಾಹಕರ ಸಂವಾದ ಸಭೆ

0
31

ಹರಪನಹಳ್ಳಿ                 ವಿವಿಧ ಯೋಜನೆಗಳಡಿ ಸಆಲವನ್ನು ಪಡೆದು, ಸಕಾಲಕ್ಕೆ ಮರುಪಾವತಿಸಬೇಕು ಎಂದು ಬ್ಯಾಂಕ್ ವ್ಯವಸ್ಥಾಪಕ ರಾಜೇಶ್ ಜೈಸ್ವಾಲ್ ತಿಳಿಸಿದರು.
                 ಪಟ್ಟಣದ ಕೆನರಾ ಬ್ಯಾಂಕ್‍ನಲ್ಲಿ ನಡೆದ ಗ್ರಾಹಕರ ಸಂವಾದ ಸಭೆಯಲ್ಲಿ ಮಾತನಾಡಿದರು. ಶಾಖೆ ಆರಂಭವಾದಾಗಿನಿಂದ ಸಾವಿರಾರು ಗ್ರಾಹಕರು ಬ್ಯಾಂಕ್‍ನೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.
                 ಶಾಖೆಯ ವ್ಯಾಪ್ತಿಯಲ್ಲಿ ಬರುವ ಗ್ರಾಹಕರ ಅನುಕೂಲಕ್ಕಾಗಿ ಸಬ್ಸಿಡಿ ಸಾಲ, ನೇರ ಸಾಲಗಳನ್ನು ಪರಿಶೀಲಿಸಿ ಮುಂಜೂರು ಮಾಡಲಾಗುತ್ತಿದೆ. ಬ್ಯಾಂಕ್‍ನ ಶಾಖೆಯಿಂದ 2500 ಜನ ಗ್ರಾಹಕರು ಸಾಲ ಸೌಲಭ್ಯ ಪಡೆದಿದ್ದಾರೆ. ಪ್ರಧಾನಮಂತ್ರಿ ಆವಾಸ್ ಯೋಜನೆಯಲ್ಲೂ ನಿಯಮಾನುಸಾರ ಸಾಲ ಕೊಡಲಾಗುವುದು ಎಂದರು.
                 ಇದೇ ಸಂದರ್ಭದಲ್ಲಿ ಶಿಕ್ಷಕರು, ಬೆಸ್ಕಾಂ, ಕೆಎಸ್‍ಆರ್‍ಟಿಸಿ, ರೈತರು ಹಾಗೂ ವರ್ತಕರ ಕ್ಷೇತ್ರದಿಂದ ಉತ್ತಮ ಮರುಪಾವತಿ ಗ್ರಾಹಕರು, ಉತ್ತಮ ಸಾಲಗಾರ ಗ್ರಾಹಕರಿಗೆ ಸನ್ಮಾನ ಮಾಡಲಾಯಿತು. ಬ್ಯಾಂಕ್‍ನ ವಿಮಾ ಅಧಿಕಾರ ವಿಕಾರ್ ಅಹ್ಮದ್ ಹಾಗು ಸಹಾಯಕ ವ್ಯವಸ್ಥಾಪಕ ರಾಜಕುಮಾರ ಮಾತನಾಡಿದರು. ತಾ.ಪಂ.ಸದಸ್ಯ ಹುಲಿಕಟ್ಟೆ ಚಂದ್ರಪ್ಪ ಇತರರಿದ್ದರು.

LEAVE A REPLY

Please enter your comment!
Please enter your name here