ಗ್ರಾ.ಪಂ. ಅಧ್ಯಕ್ಷ,ಉಪಾಧ್ಯಕ್ಷ, ಸದಸ್ಯರಿಂದ ಅಹೋ ರಾತ್ರಿ ಧರಣಿ

0
23

ತಿಪಟೂರು :

      ಮತ್ತಿಹಳ್ಳಿ ಗ್ರಾಮ ಪಂಚಾಯ್ತಿಯು ತಾಲ್ಲೂಕಿನಲ್ಲೇ ದೊಡ್ಡ ಗ್ರಾಮ ಪಂಚಾಯ್ತಿ. 24 ಸದಸ್ಯರನ್ನುಳ್ಳ ಗ್ರಾಮಪಂಚಾಯ್ತಿಯಲ್ಲಿ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಈ.ಜಿ.ಶಿವರಾಜ್ ಅಮಾನತ್ತುಗೊಂಡು ಒಂದು ವಾರ ಕಳೆದರೂ ಬೇರೆ ಪಿ.ಡಿ.ಓ ನೇಮಕ ಮಾಡಿಲ್ಲ.

      ಗ್ರಾಮ ಪಂಚಾಯ್ತಿ ಬಿಲ್ ಕಲೆಕ್ಟರ್, ಕಾರ್ಯದರ್ಶಿ, ಹುದ್ದೆ ಸಹ ಖಾಲಿ ಇದ್ದು, ಪಂಚಾಯ್ತಿಯಲ್ಲಿ ಯಾವುದೇ ಕೆಲಸ ಕಾರ್ಯ ನಡೆಯುತ್ತಿಲ್ಲ. ಅಮಾನತ್ತುಗೊಂಡ ಪಿ.ಡಿ.ಓ ಶಿವರಾಜ್ ಪಂಚಾಯ್ತಿ ಚೇಂಬರ್ ಬೇರೆಯವರಿಗೆ ನೀಡಿಲ್ಲ.

      ಅಮಾನತ್ತುಗೊಂಡಿದ್ದರೂ ಇ-ಖಾತೆ ಮಾಡಲಾಗಿದೆ. ಪಿ.ಡಿ.ಓ ಶಿವರಾಜ್ ಜೊತೆ ಈ.ಓ ಡಾ.ಷಡಕ್ಷರಿ ಶಾಮೀಲಾಗಿದ್ದಾರೆ ಎಂದು ಶಿವರಾಜ್ ಮೇಲೆ ಗಂಭೀರ ಆರೋಪಗಳಿವೆ. ಅವುಗಳ ಸಮಗ್ರ ತನಿಖೆಯಾಗಬೇಕೆಂದು ಧರಣಿ ನಡೆಸಲಾಗುತ್ತಿದೆ ಎಂದು ತಾಲ್ಲೂಕು ಪಂಚಾಯ್ತಿಗೆ ಬೀಗ ಹಾಕಲು ಬಿಡದೆ ಧರಣಿ ನಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here