ಚಿಕಿತ್ಸೆ ಫಲಕೊಡದೆ ಕೊನೆಯುಸಿರೆಳೆದ ಚಂದನ್ ಪತ್ನಿ

0
27

ಬೆಂಗಳೂರು:

ರಸ್ತೆ ಅಪಘಾತದಲ್ಲಿ ಸಾವನಪ್ಪಿದ್ದ ಅಚ್ಚ ಕನ್ನಡದ ನಿರೂಪಕ ಚಂದನ್ ಅವರ ಪತ್ನಿ ಮೀನಾ, ಚಂದನ್ ದೂರವಾದ ಬೇಸರದಲ್ಲಿ ಪುತ್ರ ತುಷಾರ್ ಕತ್ತು ಸೀಳಿ ಹತ್ಯೆಗೈದು, ತಾನು ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮೀನಾ ಅವರನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಸೇರಿಸಲಾಗಿತ್ತು. ಆಸಿಡ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮೀನಾ ಅವರ ಪರಿಸ್ಥಿತಿ ಗಂಭೀರವಾಗಿತ್ತು. ತೀವ್ರ ನಿಗಾಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೀನಾ ನಿನ್ನೆ ತಡರಾತ್ರಿ ಚಿಕಿತ್ಸೆ ಫಲಕಾರಿ ಆಗದೆ ಕೊನೆ ಉಸಿರೆಳೆದಿದ್ದಾರೆ.

       ಮೀನಾ ಹಾಗೂ ಅವರ ಪುತ್ರ ತುಷಾರ್ ಇಬ್ಬರ ಕಣ್ಣನ್ನು ಲಯನ್ಸ್ ಕ್ಲಬ್ ನೇತ್ರಾಲಯಕ್ಕೆ ಚಂದನ್ ಕುಟುಂಬಸ್ಥರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಬೆಳಗ್ಗೆ ಮಗುವಿನ ಕಣ್ಣು ದಾನ ಮಾಡಿ ರಾತ್ರಿ ಮೀನಾ ಅವರ ಕಣ್ಣನ್ನು ನೀಡಿದ್ದಾರೆ. 

      ಚಂದನ್ ಸಾವಿನ ವಿಚಾರ ತಿಳಿದು ಇಡೀ ರಾಜ್ಯದ ಜನರೇ ಬೇಸರ ವ್ಯಕ್ತ ಪಡಿಸಿದ್ದರು. ಆದರೆ ಈಗ ಚಂದನ್ ಕುಟುಂಬದ ಸಾವು ಜನರ ಮನಸ್ಸಿಗೆ ತುಂಬಾನೇ ನೋವು ಉಂಟು ಮಾಡಿದೆ. 

LEAVE A REPLY

Please enter your comment!
Please enter your name here