ಚೀನಾದ ಕ್ವಿಂಗ್ಡಾವೊದಲ್ಲಿ ಎಸ್ ಸಿ ಓ ಶೃಂಗಸಭೆ: ಪ್ರಧಾನಿ ನರೇಂದ್ರ ಮೋದಿ ಆಗಮನ

0
35

ಕ್ವಿಂಗ್ಡಾವೊ:

ಎರಡು ದಿನಗಳ 18 ನೇ ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ಚೀನಾದ ಕ್ವಿಂಗ್ಡಾವೊಗೆ ಆಗಮಿಸಿದ್ದಾರೆ.

ಶೃಂಗಸಭೆಯ ಭಾಗವಾಗಿ ನರೇಂದ್ರ ಮೋದಿ ಚೀನಾದ ಅಧ್ಯಕ್ಷ ಕ್ಸಿ- ಜಿನ್ ಪಿಂಗ್ ಅವರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಕುರಿತಂತೆ ಮಾತುಕತೆ ನಡೆಸಲಿದ್ದಾರೆ. ವುಹಾನ್ ನಲ್ಲಿ ಕಳೆದ ತಿಂಗಳ ನಡೆದ ಅನೌಪಚಾರಿಕ ಸಭೆಯಲ್ಲಿ ತೆಗೆದುಕೊಂಡು ನಿರ್ಧಾರಗಳ ಅನುಷ್ಠಾನದ ಬಗ್ಗೆಯೂ ಚರ್ಚಿಸಲಿದ್ದಾರೆ.

ಭಯೋತ್ಪಾದನೆ ನಿಯಂತ್ರಣ, ಪ್ರಾದೇಶಿಕ ಮಟ್ಟದಲ್ಲಿ ವ್ಯಾಪಾರ ಮತ್ತು ಹೂಡಿಕೆಯಲ್ಲಿ ಪ್ರಗತಿ ಸೇರಿದಂತೆ  ವಿಶ್ವವೂ ಎದುರಿಸುತ್ತಿರುವ ಪ್ರಮುಖ ಸವಾಲುಗಳನ್ನು ನಿಭಾಯಿಸುವಲ್ಲಿ ಭಾರತ ವಹಿಸುತ್ತಿರುವ ಪಾತ್ರದ ಬಗ್ಗೆ ಎಸ್ ಸಿ ಒ ಶೃಂಗಸಭೆಯಲ್ಲಿ  ನರೇಂದ್ರ ಮೋದಿ ಮಾತನಾಡುವ ಸಾಧ್ಯತೆ ಇದೆ.

ಇರಾನ್ ಅಣು ಒಪ್ಪಂದದಿಂದ ವಾಷಿಂಗ್ ಟನ್ ಹೊರ ಬಂದ ನಂತರ ವ್ಯಾಪಾರ ಸುಂಕದ ಮೇಲೆ ಚಿನ್ನಾದ ಭಿನ್ನಾಭಿಪ್ರಾಯ ಹಾಗೂ ರಷ್ಯಾದ ನಿರ್ಬಂಧದ ನಡುವೆಯೂ ಪೂರ್ವ ಚೈನಾದ ಕೋಟೆ ನಗರಿಯಲ್ಲಿ  ಈ ಶೃಂಗಸಭೆ ನಡೆಯುತ್ತಿದ್ದು, ಸಂಘಟನೆಯ ಪೂರ್ಣವಧಿಯ ಸದಸ್ಯನಾಗಿ ಭಾರತ ಮೊದಲ ಬಾರಿಗೆ ಪಾಲ್ಗೊಳ್ಳುತ್ತಿದೆ.

2017 ಜೂನ್ ತಿಂಗಳಲ್ಲಿ ನಡೆದ ಅಸ್ತಾನ ಶೃಂಗಸಭೆ ವೇಳೆಯಲ್ಲಿ ಭಾರತ ಹಾಗೂ ಪಾಕಿಸ್ತಾನ, ಎಸ್ ಸಿ ಒ ಶೃಂಗಸಭೆಯ ಪೂರ್ಣವಧಿಯ ಸದಸ್ಯತ್ವ ಪಡೆದುಕೊಂಡಿದ್ದವು.

 

LEAVE A REPLY

Please enter your comment!
Please enter your name here