ಚುನಾವಣೆ-ಕಾಂಗ್ರೆಸ್ ಟಿಕೆಟ್‍ಗೆ ಹೆಚ್ಚು ಬೇಡಿಕೆ

0
58

ಚಿತ್ರದುರ್ಗ: ನಗರಸಭೆ ಚುನಾವಣೆಗೆ ಶುಕ್ರವಾರದಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಸ್ಪರ್ಧಾಕಾಂಕ್ಷಿಗಳು ಕಾಂಗ್ರೆಸ್ ಟಿಕೇಟ್‍ಗಾಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಪಾರ ಅಭಿಮಾನಿಗಳೊಂದಿಗೆ ಅರ್ಜಿಗಳನ್ನು ಸಲ್ಲಿಸಿದರು.

24 ನೇ ವಾರ್ಡ್‍ನಿಂದ ಅಬ್ದುಲ್ ಜಬ್ಬಾರ್, 19 ನೇ ವಾರ್ಡ್‍ನಿಂದ ಓಬಕ್ಕ, ಎಂಟನೇ ವಾರ್ಡ್‍ನಿಂದ ಶಂಷೀರ್, ಇಪ್ಪತ್ತನೇ ವಾರ್ಡ್‍ನಿಂದ ಸಲ್ಮ, 2 ನೇ ವಾರ್ಡ್‍ನಿಂದ ಮೆಹಬೂಬ್ ಖಾತೂನ್ ಇವರುಗಳು ಕಾಂಗ್ರೆಸ್ ಟಿಕೇಟ್ ನೀಡುವಂತೆ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಅಲ್ಲಾಭಕ್ಷ್‍ರವರಿಗೆ ಅರ್ಜಿ ಸಲ್ಲಿಸಿದರು.
ನೂರಾರು ಅಭಿಮಾನಿಗಳೊಂದಿಗೆ ಶುಕ್ರವಾರ ಕಾಂಗ್ರೆಸ್ ಕಚೇರಿಗೆ ಆಗಮಿಸಿದ ಸ್ಪರ್ಧಾಕಾಂಕ್ಷಿಗಳು ರಾಹುಲ್‍ಗಾಂಧಿ, ಸೋನಿಯಾಗಾಂಧಿ ಹಾಗೂ ಸಿದ್ದರಾಮಯ್ಯನವರಿಗೆ ಜೈಕಾರಗಳನ್ನು ಕೂಗುತ್ತ ಟಿಕೇಟ್‍ಗಾಗಿ ಅರ್ಜಿಗಳನ್ನು ನೀಡಿದರು.

ಯೂತ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಮಹಮದ್ ಆಜಾಂ, ವಸೀಂಅಕ್ರಂ, ಪರಿಶಿಷ್ಟ ವರ್ಗಗಳ ವಿಭಾಗದ ಜಿಲ್ಲಾಧ್ಯಕ್ಷ ಹೆಚ್.ಅಂಜಿನಪ್ಪ, ಎನ್.ಎಸ್.ಯು.ಐ.ಜಿಲ್ಲಾಧ್ಯಕ್ಷ ಎಸ್.ರಾಜೇಂದ್ರಪ್ರಸಾದ್, ಫೈಲ್ವಾನ್ ತಿಪ್ಪೇಸ್ವಾಮಿ, ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಕೋಆರ್ಡಿನೇಟರ್ ಹೊನ್ನೂರ್‍ಸಾಬ್, ತಾಲೂಕು ಕೋಆರ್ಡಿನೇಟರ್ ವಸೀರ್‍ಉಲ್ಲಾ, ಇರ್ಫಾನ್, ಜಮೀಲ್, ದಾದಾಪೀರ್, ಗೋಪಿ, ನಟರಾಜ್, ಮಂಜುನಾಥ್, ಮಹಂತೇಶ್, ಅಣ್ಣಪ್ಪ ಸೇರಿದಂತೆ ನೂರಾರು ಅಭಿಮಾನಿಗಳು ಹಾಜರಿದ್ದರು.

LEAVE A REPLY

Please enter your comment!
Please enter your name here