ಜಗದಜಡ ಮಲೀನತೆ ತೊಳೆದ ಮಡವಾಳ ಮಾಚಿತಂದೆ

0
23

ತುಮಕೂರು

              ಧೀರೋದ್ಧಾತ ನಿಲುವಿನಿಂದ ಶರಣ ಶ್ರೇಷ್ಠ ಚಿಂತನೆಗಳ ಹರಿಕಾರ ಮಡಿವಾಳ ಮಾಚಿದೇವಜಗದಜಡ ಮಾಲಿನ್ಯವನ್ನುತೊಡೆದ ಹಾಗೆ ಪ್ರಕೃತಿ ಶಕ್ತಿಯನ್ನು ಮಾನವನಕತ್ತಲೆ ಅಳಿಸಿ ಬೆಳಗಾಗಿಸಿದವರು ಸರ್. ಎಂ. ವಿಶ್ವೇಶ್ವರಯ್ಯನವರು ಮನುಕುಲದ ಉಳಿವಿಗಾಗಿ ತಮ್ಮಇಡೀಜೀವನವನ್ನೇಗಂಧದಂತೆತೇದ ಮಹನೀಯರು. ತುಮಕೂರು ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಗೋಕುಲ ಬಡಾವಣೆ ಮತ್ತು ಶ್ರೀ ಶಿವ ಶೈಕ್ಷಣಿಕ ಸೇವಾಶ್ರಮ, ಮೈದಾಳ ಇವರುಗಳ ಸಂಯುಕ್ತಾಶ್ರಯದಲ್ಲಿ ಶಾಲೆಗೊಂದು ಮನೆಗೊಂದು ವಚನ ದಾಸೋಹ ಸಾಪ್ತಾಹಿಕ ಕಾರ್ಯಕ್ರಮದಲ್ಲಿ ಶರಣ ಶ್ರೇಷ್ಠ ಮಡಿವಾಳ ಮಾಚಿದೇವ ಮತ್ತುಉತ್ತಮ ಆಡಳಿತಗಾರರು, ದಿವಾನರು ಮತ್ತುತಂತ್ರಜ್ಞರುಆಗಿದ್ದ ಶತಾಯಷಿ ಸರ್. ಎಂ. ವಿಶ್ವೇಶ್ವರಯ್ಯನವರಜಯಂತಿಯಾದ ‘ಇಂಜಿನಿಯರ್ಸ್‍ಡೇ’ ಕಾರ್ಯಕ್ರಮಗಳಲ್ಲಿ ಉಪನ್ಯಾಸ ನೀಡುತ್ತಾ ಶ್ರೀ ಸಿ. ಮಂಜುನಾಥರವರು ತಿಳಿಸಿದರು. ಉಚ್ಚ ನೀಚ ಮೇಲು ಕೀಳು ಕಾಯಕವೆನ್ನದೆ, ತನ್ನಖಚಿತ ನಿಲುವಿನ ಮೂಲಕ ಖಂಡೀತವಾದಿಯಾಗಿ, ಒಳಿತಿಗಾಗಿ ಹಂಬಲಿಸುತ್ತಾಜನ-ಮನ ಮೈಲಿಗೆ ತೊಳೆಯುತ್ತಿದ್ದ ಮಾಡಿವಾಳ ಮಾಚಿದೇವ, ಶಿಸ್ತಿನ ಸಿಪಾಯಿಯಾಗಿ ಜೀವಮಾನದ ಪ್ರತಿ ಘಳಿಗೆಯನ್ನು ಸಾರ್ವಜನಿಕ ಸೇವೆಗಾಗಿ ಮೀಸಲಿಟ್ಟುತನಗಾಗಿ ಏನೂ ಮಾಡಿಕೊಳ್ಳದೆ ಬೀದಿ ದೀಪದಡಿಯಲ್ಲಿ ಓದಿ ಶ್ರೇಷ್ಠ ವ್ಯಕ್ತಿಯಾದ ವಿಶ್ವೇಶ್ವರಯ್ಯನವರು, ಬರಡಾದ ಬದುಕಿಗೆ ಹಸಿರು ಹೊನ್ನ ಹರಿಸಿ ಕತ್ತಲಾದಜಗತ್ತಿಗೆ ಬೆಳಕನರಿಸಿ ಯಾವತ್ ಪ್ರಾತಃ ಸ್ವರಣೀಯರೆನಿಸಿದ್ದಾರೆ. ಇಂತಹ ಶರಣ ಶ್ರೇಷ್ಠರಆದರ್ಶ ಗುಣಗಳು ಮಕ್ಕಳಿಗೆ ಇಂದಿನ ಯುವ ಪೀಳಿಗೆಗೆ ಆದರ್ಶ.

           ಈ ದಿಸೆಯಲ್ಲಿ ಅವರುಗಳನ್ನು ಸ್ಮರಿಸುತ್ತಾಅವರ ಹಾದಿಯಲ್ಲಿ ನಡೆಯೋಣಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಅಧ್ಯಕ್ಷತೆವಹಿಸಿದ್ದ ಶ್ರೀ ಲೇಪಾಕ್ಷಯ್ಯನವರು ಬಡತನ ಮತ್ತು ತುಂಬಿದ ಕುಟುಂಬದಿಂದ ಬಂದ ವಿಶ್ವೇಶ್ವರಯ್ಯನವರು ತಮ್ಮ ಜ್ಞಾನಾರ್ಜನೆಗೆ ಎಂದೂ ಬಡತನದ ಕಾರಣಕೊಡಲಿಲ್ಲ, ಬದಲಿಗೆ ವಿವಿಧ ಸ್ತರದಜ್ಞಾನ ಪಡೆದುಜಗತ್ ಪ್ರಸಿದ್ಧ ವ್ಯಕ್ತಿ ಎನಿಸಿದರು. ದಿವಾನರಾಗಿ ದಿವ್ಯಜ್ಞಾನ ಹರಿಸಿದರು. ರಾಷ್ಟ್ರಾದ್ಯಂತ ಅನೇಕ ಜಲಾಶಯಗಳನ್ನು ಕಟ್ಟಿರೈತರ ಬಾಳಿಗೆ ಬೆಳಕಾದರು. ಬ್ಯಾಂಕ್‍ಗಳನ್ನು ಸ್ಥಾಪಿಸಿ ಉದ್ಯೋಗ ಜನಕರೆನಿಸಿದರು. ದೇಹವಳಿದರೂ ವ್ಯಕ್ತಿತ್ವ ಶಾಶ್ವತ, ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ ಎಂಬುದಕ್ಕೆ ಮಡಿವಾಳ ಮಾಚಿದೇವ ಮತ್ತು ವಿಶ್ವೇಶ್ವರಯ್ಯನವರುಜೀವಂತ ಸಾಕ್ಷಿಎಂದರು. ಕಾರ್ಯಕ್ರಮದಲ್ಲಿ ಕು|| ಮಹಾಕಾಳಿ ವಚನ ಪ್ರಾರ್ಥನೆ ಮಾಡಿದರು. ಶ್ರೀ ಮಾದಪ್ಪ ಮಂಡ್ಯರವರುಯೋಗ ಶಿಕ್ಷಣ ನೀಡಿ ನಿರ್ವಹಿಸಿದರು. ಶಿಕ್ಷಕರಾದ ಶ್ರೀ ಹೆಚ್.ವಿ. ಮಂಜುನಾಥ ವಂದಿಸಿದರು. ಕಾರ್ಯಕ್ರಮದಲ್ಲಿ ಮುಖ್ಯೋಪಾಧ್ಯಾಯರಾದಓ.ಎನ್. ಮಂಜುನಾಥ, ಶಿಕ್ಷಕರಾದ ರಾಮಾಂಜಿನಪ್ಪ, ನಂದಕಿಶೋರ್, ಪಿ. ಹರಿಪ್ರಸಾದ್‍ತಿಪ್ಪೇಸ್ವಾಮಿ ಶಿಕ್ಷಕಿಯರಾದ ಪುಷ್ಪಲತಾ, ವತ್ಸಲಾ, ಲತಾ, ವಿಜಯಲಕ್ಷ್ಮಿ, ಮಂಜುಳ, ಶ್ವೇತ ಮತ್ತು ಶಾಲೆಯ ಸುಮಾರು ನೂರೆಂಭತ್ತು ಮಕ್ಕಳು ಇತರರು ಭಾಗವಹಿಸಿದ್ದರು. ಕಾರ್ಯಕ್ರಮದ ನಂತರಎಲ್ಲರಿಗೂ ಲಘು ಪ್ರಸಾದ ವಿತರಿಸಲಾಯಿತು.

LEAVE A REPLY

Please enter your comment!
Please enter your name here