ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸುವಂತೆ ಹೋರಾಟಮಾಡಲು ತಾಲ್ಲೂಕಿನ ನಾಗರೀಕರು ಕೈಜೋಡಿಸಿ-ಸಿ.ಲಕ್ಷ್ಮಣ

0
30

ಜಗಳೂರು :

      ಜಗಳೂರು ತಾಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರಿಸುವಂತೆ ಹೋರಾಟಮಾಡಲು ತಾಲ್ಲೂಕಿನ ನಾಗರೀಕರು ಕೈಜೋಡಿಸುವಂತೆ ತಾಲ್ಲೂಕಿನ ಸಮಾನ ಮನಸ್ಕರ ವೇದಿಕೆಯಿಂದ ಮನವಿ ಮಾಡಿದೆ ಎಂದು ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಲಕ್ಷ್ಮಣ ಹೇಳಿದರು.

      ಪಟ್ಟಣದ ವಿದ್ಯಾನಗರದಲ್ಲಿರುವ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ರಾಜ್ಯದಲ್ಲಿ ಅತ್ಯಂತ ಬರಪೀಡಿತ ತಾಲ್ಲೂಕು ಎಂದೆನಿಸಿದ ಜಗಳೂರು ಹಿಂದುಳಿದ ಪ್ರದೇಶ ಅಭಿವೃದ್ಧಿಯ ಡಾ.ಡಿ.ಎಂ.ನಂಜುಡಪ್ಪ ಅವರ ವರಧಿಯಂತೆ ತಾಲ್ಲೂಕಿಗೆ ಸಲ್ಲಬೇಕಾಗದ ಶಾಶ್ವತ ಅನುದಾನ ಭದ್ರಾ ಮೇಲ್ದಂಡೆ ಯೋಜನೆ, ರೈಲುಮಾರ್ಗ ಸೇರಿದಂತೆ ಯಾವುದೇ ಯೋಜನೆಗಳು ಇದುವರೆಗೂ ಕಾರ್ಯಗತವಾಗಿಲ್ಲ. ನೀರಾವರಿ ಜಿಲ್ಲಾ ವ್ಯಾಪ್ತಿಗೆ ನಮ್ಮ ತಾಲ್ಲೂಕು ಸೇರ್ಪಡೆಯಾಗಿರುವುದರಿಂದ ಸೌಲಭ್ಯಗಳು ವಂಚಿತವಾಗಿವೆ ಎಂದರು.

      ಮುಖಂಡರಾದ ವಾಲಿಬಾಲ್ ತಿಮ್ಮಾರೆಡ್ಡಿ ಮಾತನಾಡಿ ಜಗಳೂರು ತಾಲ್ಲೂಕನ್ನು ಚಿತ್ರದುರ್ಗ ಜಿಲ್ಲೆಗೆ ಸೇರ್ಪಡೆಗೊಳಿಸಲು ಹೋರಾಟದ ರೂಪುರೇಷೆಗಳನ್ನು ತಯಾರಿಸಲು ಇದೇ ಶನಿವಾರ ಪ್ರವಾಸಿ ಮಂದಿರದಲ್ಲಿ ಪೂರ್ವಭಾವಿ ಸಭೆಯನ್ನು ಕರೆಯಲಾಗಿದ್ದು ತಾಲ್ಲೂಕಿನ ಸಮಸ್ತ ಬಾಂಧವರು ಆಗಮಿಸಿ ಸಲಹೆ ಸೂಚನೆಗಳನ್ನು ನೀಡಬೇಕು ಎಂದವರು ತಿಳಿಸಿದರು.

      ಈ ಸಂದರ್ಭದಲ್ಲಿ ಪ್ರಕಾಶ್‍ರೆಡ್ಡಿ, ಜೆ.ವಿ.ಬಸವರಾಜ್, ಮಾಳಮ್ಮನಹಟ್ಟಿ ವೆಂಕಟೇಶ್, ರಮೇಶ್ ಗೌಡ, ರಂಗನಾಥ್, ದಲಿತ ಮುಖಂಡ ಶಂಭುಲಿಂಗಪ್ಪ, ನಾಗಲಿಂಗಪ್ಪ ಸೇರಿದಂತೆ ಇತರರು ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here