ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಿ:-ವಿಜಯಕುಮಾರ್ ಜಟ್ಲಾ

0
58

ಗರಿಬೊಮ್ಮನಹಳ್ಳಿ:

 

     ಮನುಷ್ಯನ ಜೀನವದಲ್ಲಿ ಎರಡು ಬಹುಮುಖ್ಯವಾದ ಪ್ರಮಾಣ ಪತ್ರಗಳನ್ನು ಕಡ್ಡಾಯವಾಗಿ ಪಡೆದುಕೊಳ್ಳಲೇಬೇಕು. ಅವು ಜನನ ಮತ್ತು ಮರಣ ಪ್ರಮಾಣ ಪತ್ರಗಳಾಗಿರುತ್ತವೆ ಎಂದು ನ್ಯಾಯಾದೀಶ ವಿಜಯಕುಮಾರ್ ಜಟ್ಲಾ ಹೇಳಿದರು. ತಾಲೂಕಿನ ಕೋಗಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ವಿದ್ಯಾರ್ಥಿ ಸ್ನೇಹಿ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿ ವಿದ್ಯಾರ್ಥಿಗಳು ಎಲ್ಲರೂ ತಮ್ಮ ಜನನ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆದುಕೊಳ್ಳಲೇಬೇಕು ತಮ್ಮ ಮನೆಯಲ್ಲಿ ಹಾಗೂ ನೆರೆ ಹೊರೆಯವರಿಗೆ ಮರಣ ಪ್ರಮಾಣ ಪತ್ರದ ಬಗ್ಗೆ ತಿಳುವಳಿಕೆ ನೀಡಬೇಕು. ಇವು ಎರಡು ಜೀವನದಲ್ಲಿ ಅತಿ ಮುಖ್ಯವಾದ ದಾಖಲೆಗಳಾಗಿರುತ್ತವೆ.

      ಕೆಳ ಹಂತದ ಶಿಕ್ಷಣ ಪಡೆಯುವಾಗ ತಮ್ಮ ಜನ್ಮದಿನಾಂಕ, ಹೆಸರುಗಳು ಸರಿ ಇಲ್ಲದಿದ್ದರೆ ಕೂಡಲೇ ತಿದ್ದುಪಡಿ ಮಾಡಿಸಿಕೊಳ್ಳಿ ಅದಕ್ಕೆ ಬೇಕಾದ ಕಾನೂನಿನ ಸಲಹೆಗಳನ್ನು ಎಲ್ಲಾ ವಕೀಲರು ಉಚಿತವಾಗಿ ನೀಡುತ್ತಾರೆ. ಅದೇರೀತಿ ವಿದ್ಯಾರ್ಥಿಗಳು ರಸ್ತೆ ನಿಯಮಗಳನ್ನು ಪಾಲನೆ ಮಾಡಬೇಕು ಏಕೆಂದರೆ ಇತ್ತೀಚಿನ ದಿನಗಳಲ್ಲಿ ರಸ್ತೆ ಅಪಘಾತಗಳಲ್ಲಿ ದುರ್ಮರಣ ಹೊಂದುವರಲ್ಲಿ ಯುವಕರೇ ಹೆಚ್ಚಾಗಿದ್ದಾರೆ.

      ಆದ್ದರಿಂದ ವಿದ್ಯಾರ್ಥಿಗಳು ಈಗಿನಿಂದಲೇ ರಸ್ತೆ ನಿಯಮಗಳನ್ನು ಪಾಲನೆ ಮಾಡುವುದನ್ನು ಕಲಿತುಕೊಳ್ಳಿ ಎಂದರು. ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಗೌರವ ಅಧ್ಯಕ್ಷ ಬಿ.ವಿ.ಶಿವಯೋಗಿ, ಪ್ರಧಾನ ಕಾರ್ಯದರ್ಶಿ ಟಿ.ಜಿ.ಎಂ.ಕೊಟ್ರೇಶ್, ಉಪಾಧ್ಯಕ್ಷ ಲಿಂಗನಗೌಡ, ವಕೀಲರಾದ ಗಂಗಾಧರ, ಬಿ.ಎಂ.ಆಂಜನೇಯ ಹಾಗೂ ಶಾಲಾ ಶಿಕ್ಷಕ, ಶಿಕ್ಷಕಿಯರು ಮತ್ತು ಸಿಬ್ಬಂದಿವರ್ಗದವರು ಉಪಸ್ಥಿರಿದ್ದರು.

LEAVE A REPLY

Please enter your comment!
Please enter your name here