ಜನಾಶೀರ್ವಾದವಿದ್ದರೆ ಮಂತ್ರಿಗಿರಿ ಸಾಧ್ಯ

0
24

ಬೆಂಗಳೂರು:

Image result for d.k.shivakumar

      ಕಾರ್ಯಕರ್ತರ ಹುದ್ದೆ ಪರ್ಮನೆಂಟ್ ಆದರೆ ಮಂತ್ರಿಗಿರಿ ಟೆಂಪರರಿ. ಜನ ಆಶೀರ್ವಾದ ಮಾಡಿದರೆ ಮಾತ್ರ ಮಂತ್ರಿಗಿರಿ ಸಿಗಲು ಸಾಧ್ಯ ಎಂದು ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಹೇಳಿದರು.

      ನಗರದ ಕೆಇಬಿ ಇಂಜಿನಿಯರ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸ್ಫೂರ್ತಿ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಾವೆಲ್ಲಾ ಕಾರ್ಯಕರ್ತರು. ಈ ಕಾರ್ಯಕರ್ತರ ಹುದ್ದೆ ಶಾಶ್ವತವಾದದ್ದು. ಮಂತ್ರಿಗಿರಿ ಕೇವಲ ಜನರ ಕೃಪಾಶೀರ್ವಾದದಿಂದ ದೊರೆತದ್ದು ಎಂದರು.

      ರಾಷ್ಟ್ರದ ತ್ರಿವರ್ಣ ಧ್ವಜವನ್ನು ಕಾಂಗ್ರೆಸ್ ಕಾರ್ಯಕರ್ತರು ಸತ್ತರೆ ಹೊದಿಸಲಾಗುತ್ತದೆ. ಇದು ಕಾಂಗ್ರೆಸ್ ಕಾರ್ಯಕರ್ತರಿಗೆ ಸಿಗುವ ಗೌರವ. ಬೇರೆ ಯಾವುದೇ ಕಾರ್ಯಕರ್ತರಿಗೆ ಈ ಗೌರವ ಸಿಗುವುದಿಲ್ಲ ಎಂದರು. ಕೆಪಿಸಿಸಿ ಇತಿಹಾಸದಲ್ಲೇ ಮೊದಲ ಬಾರಿಗೆ ಯುವ ನಾಯಕರಿಗೆ ಕೆಪಿಸಿಸಿ ಅಧ್ಯಕ್ಷನಾಗುವ ಅವಕಾಶ ಸಿಕ್ಕಿದೆ. ರಾಹುಲ್ ಗಾಂಧಿಯವರು ಆಯ್ಕೆ ಮಾಡುವಾಗ ಎಲ್ಲಾ ದಿಸೆಯಲ್ಲೂ ಅವಲೋಕಿಸಿಯೇ ನಿರ್ಧಾರ ಮಾಡುತ್ತಾರೆ. ಹಾಗಾಗಿಯೇ ದಿನೇಶ್ ಗುಂಡೂರಾವ್ ಅವರನ್ನು ಆ0iÉ್ಕು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ರಿಜ್ವಾನ್ ಅರ್ಷದ್ ಹೇಳಿದರು.

      ಮಂತ್ರಿಗಿರಿಗಾಗಿ ದಿನೇಶ್ ಗುಂಡೂರಾವ್ ಅವರು ಆಸೆ ಪಡಲಿಲ್ಲ. ಅಧಿಕಾರ ಬೇಡ ಎನ್ನುವ ಅವರಿಗೆ ಅಧ್ಯಕ್ಷ ಗಾದಿ ಕೊಟ್ಟಿದ್ದಾರೆ ಎಂದರು. ಕಾಂಗ್ರೆಸ್ ಅಧಿಕಾರಕ್ಕೆ ಬರಲ್ಲ ಎಂದು ಕೇಳವ ಸಂದರ್ಭದಲ್ಲೇ ಕಾಂಗ್ರೆಸ್ ಪಕ್ಷ ಕಟ್ಟಿದ್ದಾರೆ. ಕಷ್ಟದ ಕಾಲದಲ್ಲಿ ನಮಗೆ ಪಕ್ಷದ ಜವಾಬ್ದಾರಿ ಸಿಕ್ಕಿದೆ. ಬಿಜೆಪಿಯ ಸುಳ್ಳಿನ ರಾಜಕಾರಣ ಹಾಗೂ ರಾಜ್ಯ ಒಡೆಯುವ ತಂತ್ರದ ವಿರುದ್ಧ ನಾವು ಹೋರಾಟ ಮಾಡಬೇಕಿದೆ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ರಾಜ್ಯವನ್ನು ನಂ.1 ಮಾಡಿದ್ದರು. 5 ವರ್ಷಗಳ ಕಾಲ ಹಗರಣ ರಹಿತ ಸರ್ಕಾರ ನೀಡಿದ್ದೆವು. ಹಾಗಿದ್ದು ಬಹುಮತ ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

      ಆದರೆ ಬಿಜೆಪಿಯವರು ಮಾತ್ರ ಜನರ ಮುಂದೆ ಸುಳ್ಳು ಹೇಳಿದರು. ಹಿಂದೂ ಕಾರ್ಯಕರ್ತರ ಹತ್ಯೆ ಬಗ್ಗೆ ಮಾತನಾಡುತ್ತಿದ್ದ ಬಿಜೆಪಿಯವರು ಇದೀಗ ಆ ಬಗ್ಗೆ ಚಕಾರವೆತ್ತುತ್ತಿಲ್ಲ. ಅಧಿಕಾರಕ್ಕೋಸ್ಕರವೇ ಬಿಜೆಪಿಯವರು ಸಮಾಜ ಒಡೆಯುವ ಮತ್ತು ಬೆಂಕಿ ಹಚ್ಚುವ ರಾಜಕಾರಣ ಮಾಡುತ್ತಾರೆ ಎಂದು ಕಿಡಿಕಾರಿದರು. ಇಂತಹ ಬಿಜೆಪಿಯನ್ನು ತಡೆಯದಿದ್ದರೆ ದೇಶವನ್ನೇ ನಾವು ನಮ್ಮ ಕೈಯಿಂದ ಕಳೆದುಕೊಳ್ಳುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು. ಬಿಜೆಪಿಯನ್ನು ಬೈದರೆ ಏನಾಗಿ ಬಿಡುತ್ತದೋ ಎನ್ನುವಂತಹ ಮಹಾನ್ ನಾಯಕರು ನಮ್ಮಲ್ಲಿದ್ದಾರೆ. ಆದರೆ ಬಿಜೆಪಿ ಮತ್ತು ಆರ್‍ಎಸ್‍ಎಸ್ನವರ ತಪ್ಪುಗಳನ್ನು ಬಹಿರಂಗವಾಗಿ ದಿನೇಶ್ ಗುಂಡೂರಾವ್ ಟೀಕಿಸುತ್ತಾರೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಮೆಚ್ಚುಗೆ ವ್ಯಕ್ತಪಡಿಸಿದರು. ಮಂತ್ರಿಯಾದ ಬಳಿಕ ಶಾಸಕರನ್ನು ಕಡೆಗಣಿಸುವವರನ್ನು ನೋಡಿದ್ದೇನೆ. ಆದರೆ ದಿನೇಶ್ ಗುಂಡೂರಾವ್ ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುತ್ತಾರೆ. ಎಲ್ಲರೊಂದಿಗೂ ನಗು ನಗುತ್ತಾ ಮಾತನಾಡುತ್ತಾರೆ ಎಂದರು.

      ಲೋಕಸಭಾ ಚುನಾವಣೆಯಲ್ಲಿ ಭ್ರಷ್ಟ, ಕೋಮುವಾದಿ, ಜಾತಿವಾದಿ ಬಿಜೆಪಿ ವಿರುದ್ಧ ಹೋರಾಡಿ ಕೇಂದ್ರದಲ್ಲಿ ಮತ್ತೆ ಕಾಂಗ್ರೆಸ್ ಅನ್ನು ಆಡಳಿತಕ್ಕೆ ತಂದು ರಾಹುಲ್ ಗಾಂಧಿಯವರನ್ನು ಪ್ರಧಾನಿ ಮಾಡಬೇಕಿದೆ. ಯುವಕರ ಶಕ್ತಿ ಕಾಂಗ್ರೆಸ್ಗೆ ಬೇಕಿದೆ ಎಂದು ಕಾಂಗ್ರೆಸ್ ಮುಖಂಡ ಸಲೀಂ ಅಹಮದ್ ತಿಳಿಸಿದರು.

      ತಳಮಟ್ಟದ ಕಾರ್ಯಕರ್ತರನ್ನು ಗುರುತಿಸುವ ಕೆಲಸ ಆಗಿಲ್ಲ. ಅವರನ್ನು ಗುರುತಿಸಿ ಎಂದು ಬೆಂಗಳೂರು ನಗರ ಕಾಂಗ್ರೆಸ್ ಮುಖಂಡ ಮನೋಹರ್ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮತ್ತಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here