“ ಜಾಗತಿಕ ಸವಾಲುಗಳನ್ನು ಎದುರಿಸುವಲ್ಲಿ ವಾಣಿಜ್ಯ ಶಿಕ್ಷಣವು ಒಂದು ಪ್ರಬಲ ಅಸ್ತ್ರ ”

ತುಮಕೂರು

               ಜಾಗತೀಕರಣದ ಪ್ರಸ್ತುತ ಸಂಧರ್ಭದಲ್ಲಿ ವಾಣಿಜ್ಯ ವಿಭಾಗದಅಧ್ಯ್ಯಾಪಕರ ಮತ್ತು ವಿದ್ಯಾರ್ಥಿಗಳ ಪಾತ್ರ ಮಹತ್ತರವಾದದ್ದು, ಜಾಗತೀಕರಣದ ಸವಾಲುಗಳನ್ನು ಧೈರ್ಯದಿಂದಎದುರಿಸಲುಅಧ್ಯಾಪಕರು ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ಜಗತ್ತಿನ ಅನೇಕ ಸವಾಲುಗಳಿಗೆ ವಾಣಿಜ್ಯ ಶಿಕ್ಷಣವು ಅತ್ಯುತ್ತಮವಾದ ಪರಿಹಾರವನ್ನುಕೊಡುವ ಮೂಲಕ ಒಂದುಅಸ್ತ್ರವಾಗಿತನ್ನದೇಆದ ವಿಶೇಷ ಛಾಪು ಮೂಡಿಸಿದೆ ಎಂದುತುಮಕೂರು ವಿಶ್ವವಿದ್ಯಾಲಯದಕುಲಪತಿಗಳಾದ ಪ್ರೊ.ವೈ.ಎಸ್.ಸಿದ್ಧೇಗೌಡರವರು ತಿಳಿಸಿದರು.
                ತುಮಕೂರು ವಿಶ್ವವಿದ್ಯಾಲಯದ ವಾಣಿಜ್ಯ ಶಾಸ್ತ್ರಅಧ್ಯಯನ ಮತ್ತು ಸಂಶೋಧನ ವಿಭಾಗದ ಪ್ರಥಮ ವರ್ಷದಎಂ.ಕಾಂ. ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ‘ಸ್ನೇಹೋದಯ ಸ್ವಾಗತಕಾರ್ಯಕ್ರಮ’ವನ್ನು ಉದ್ಘಾಟಿಸಿ ಮಾತನಾಡಿದರು. ಮುಂದುವರೆದು ಮಾತನಾಡುತ್ತಾಪ್ರಸ್ತುತಇಡೀ ಶಿಕ್ಷಣ ವ್ಯವಸ್ಥೆಯಲ್ಲೇ ವಾಣಿಜ್ಯಶಾಸ್ತ್ರದ ಶಿಕ್ಷಣವು ಸಮಗ್ರದೃಷ್ಟಿಕೋನದಿಂದ ವಿಶ್ಲೇಷಣೆ ಮಾಡಿದಾಗಅತ್ಯಂತ ಮಹತ್ವದ ಸ್ಥಾನವಿದೆ. ಕಾರ್ಪೊರೇಟ್ ವಲಯ, ಸರ್ಕಾರಿಉದ್ಯೋಗ, ಸ್ವಯಂಉದ್ಯೋಗ ಮುಂತಾದ ಕ್ಷೇತ್ರಗಳಲ್ಲಿ ವಿಫುಲ ಅವಕಾಶಗಳಿದ್ದು ವಿದ್ಯಾರ್ಥಿಗಳು ಸಮರ್ಪಕವಾಗಿ ಉಪಯೋಗಿಸಿಕೊಂಡು ಯಶಸ್ವಿಯಾಗಬೇಕೆಂದರು. ವಿದ್ಯಾರ್ಥಿಜೀವನವು ಕೇವಲ ಉತ್ಕøಷ್ಟಜೀವನವೆಂದು ತಿಳಿದು ಸಮಯ ವ್ಯರ್ಥಮಾಡದೆ ಸರ್ವತೋಮುಖಅಭಿವೃದ್ಧಿಗಾಗಿ ಶ್ರಮಿಸಬೇಕೆಂದು ತಿಳಿಸಿದರು.

                ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಶೇಖರ್‍ರವರುವಿದ್ಯಾರ್ಥಿಗಳು ಜೀವನದಎಲ್ಲಾ ಸಮಸ್ಯೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕುಎಂತಹ ಸವಾಲುಗಳೇ ಎದುರಾದರೂ ಯಶಸ್ವಿಯಾಗಿ ನಿಭಾಯಿಸುವಧೈರ್ಯ, ಆತ್ಮವಿಶ್ವಾಸ, ದೃಢನಂಬಿಕೆ ಮತ್ತು ಕೌಶಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ತಿಳಿಸಿದರು.ಇಂದು ನಾವು ಸ್ವಾಮಿ ವಿವೇಕಾನಂದರಚಿಕಾಗೋ ಭಾಷಣದ 125ನೇ ವರ್ಷದ ಸಂಭ್ರಮಾಚರಣೆಯಲ್ಲಿದ್ದುಯುವಜನರು ಸ್ವಾಮಿ ವಿವೇಕಾನಂದರು ನೀಡಿದ ಸಂದೇಶಗಳನ್ನು ಅಳವಡಿಸಿಕೊಂಡು ವ್ಯಕ್ತಿಗತವಾಗಿ, ಕೌಟುಂಬಿಕವಾಗಿ ಮತ್ತು ಸಾಮಾಜಿಕವಾಗಿಜೀವನದಲ್ಲಿಉನ್ನತಮಟ್ಟಕ್ಕೇರಬೇಕೆಂದು ತಿಳಿಸಿದರು. ವಾಣಿಜ್ಯ ವಿಭಾಗವುತುಮಕೂರು ವಿವಿಯಲ್ಲಿತನ್ನದೇಆದ ವಿಶೇಷತೆಯನ್ನು ಉಳಿಸಿಕೊಂಡು ಬಂದಿದ್ದು, ಕರ್ನಾಟಕದಲ್ಲೇಒಂದುಉತ್ತಮವಾದಂತಹ ವಿಭಾಗವೆಂದು ಗುರುತಿಸಿಕೊಂಡಿದೆಎಂದು ತಿಳಿಸಿದರು.

                  ಪ್ರೊ.ಪಿ.ಪರಮಶಿವಯ್ಯನವರು ಮಾತನಾಡುತ್ತಾ ವಿದ್ಯಾರ್ಥಿಗಳು ಕೇವಲ ಉದ್ಯೋಗಕ್ಕಲ್ಲದೆದೇಶದ ಹಿತದೃಷ್ಟಿಯಿಂದ ಸ್ಪರ್ಧಾತ್ಮಕ ಪ್ರಪಂಚದಲ್ಲಿ ಯಶಸ್ವಿಯಾಗಬೇಕೆಂದು ಕಿವಿಮಾತು ಹೇಳಿದರು. ಪ್ರೊ.ಜಿ. ಸುದರ್ಶನರೆಡ್ಡಿಯವರು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳೆಂದರೆ ಲಾಭಗಳಿಸುವುದಷ್ಟೇ ಅಲ್ಲ, ಜವಾಬ್ದಾರಿಯುತ ನಾಗರಿಕನಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಹೇಳಿದರು.
ಕಾರ್ಯಕ್ರಮದಲ್ಲಿ ಪ್ರೊ.ಪಿ.ಪರಮಶಿವಯ್ಯನವರು, ಪ್ರೊ.ಜಿ. ಸುದರ್ಶನರೆಡ್ಡಿಯವರು, ವಿಜಯ್‍ಎನ್, ಉಮೇಶ್, ಜಮೈಮ ಬ್ಲೆಸ್ಸಿ ಮುಂತಾದವರು ಉಪಸ್ಥಿತರಿದ್ದರು. ಕು. ಲಕ್ಷ್ಮೀ ಪ್ರಾರ್ಥಿಸಿದರೆ, ಗೀತಲಕ್ಷ್ಮೀ ಸ್ವಾಗತಿಸಿದರು, ರಾಜಣ್ಣ ವಂದಿಸಿದರು, ವೈಷ್ಣವಿ ಕಾರ್ಯಕ್ರಮ ನಿರೂಪಿಸಿದರು,.

Recent Articles

spot_img

Related Stories

Share via
Copy link
Powered by Social Snap