ಜಾಗತಿಕ ಸ್ತನ್ಯಪಾನ ಸಪ್ತಾಹ

0
19

 ಚಿತ್ರದುರ್ಗ :


      ನಗರದ ಬಸವೇಶ್ವರ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದಲ್ಲಿ ರೋಟರಿ ಕ್ಲಬ್ ಚಿನ್ಮೂಲಾದ್ರಿ ಸಹಯೋಗದೊಂದಿಗೆ ಜಾಗತಿಕ ಸ್ತನ್ಯಪಾನ ಸಪ್ತಾಹ ಹಮ್ಮಿಕೊಳ್ಳಲಾಗಿತ್ತು.

      ಆರೋಗ್ಯಪೂರ್ಣ ತಾಯಿ, ಆರೋಗ್ಯಪೂರ್ಣ ಮಗು. ಶಿಶುವಿನ ಸುಸ್ಥಿರ ಬೆಳವಣಿಗೆಗಾಗಿ ಎದೆಹಾಲನ್ನು ಕುಡಿಸಿ, ಎಂಬ ಶೀರ್ಷಿಕೆಯಡಿ ಅಂಟಿನುಂಡೆಯನ್ನು ಬಾಣಂತಿಯರಿಗೆ ವಿತರಿಸುವ ಮೂಲಕ ಆಚರಿಸಲಾಯಿತು.

      ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ. ಈ. ಚಿತ್ರಶೇಖರ್ ಮಾತನಾಡಿ, ಹುಟ್ಟಿದ ಮಗುವಿಗೆ ತಾಯಿಯ ಹಾಲು ಸರ್ವಶ್ರೇಷ್ಠ ದೀರ್ಘಕಾಲದ ರೋಗಗಳಿಂದ ಮತ್ತು ಬಾಲ್ಯದ ಅಸ್ವಸ್ತತೆಯನ್ನು ತಡೆಗಟ್ಟುತ್ತದೆ. ಹಾಲು ರೋಗನಿರೋಧಕ ಶಕ್ತಿಯನ್ನು ಕೊಡುತ್ತದೆ. ಸರಿಯಾದ ತೂಕವನ್ನು ಪಡೆಯಲು ತಾಯಿಯ ಎದೆಹಾಲು ಸಹಾಯ ಮಾಡುತ್ತದೆ. ತಾಯಿ ಮತ್ತು ಮಗುವಿನ ನಡುವೆ ಸ್ಪರ್ಶ ಸಂವೇದನೆ ಮತ್ತು ಕಣ್ಣಿನ ಸಂಪರ್ಕದಿಂದ ಬಾಂಧವ್ಯವನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದರು.

      ಇದೇ ಸಂದರ್ಭದಲ್ಲಿ ಹೆರಿಗೆ ಸ್ತ್ರೀರೋಗ ತಜ್ಞರಾದ ಡಾ. ರಾಘವೇಂದ್ರ, ಡಾ. ಬಸವಂತಪ್ಪ, ಡಾ. ಶ್ರೀನಿವಾಸ್, ಡಾ|| ಪಾಲಾಕ್ಷಪ್ಪ, ಡಾ|| ಶಶೀಲ್, ಡಾ|| ಸುಧಾ, ಡಾ|| ನಾರಾಯಣಮೂರ್ತಿ, ಡಾ|| ಅಶ್ವಿನಿ, ಡಾ|| ನಾಗೇಂದ್ರಗೌಡ, ಡಾ|| ಗೌರಮ್ಮ, ಶ್ರೀಮತಿ ಪವಿತ್ರ ಸುರೇಶ್‍ಬಾಬು, ಡಾ|| ದಿನೇಶ್, ಶ್ರೀಮತಿ ಸುಧಾನಾಗರಾಜ್, ಡಾ|| ಶಕೀಲ್ ಹಾಗು ವೈದ್ಯಕೀಯ ವಿದ್ಯಾರ್ಥಿಗಳು ಇದ್ದರು.

LEAVE A REPLY

Please enter your comment!
Please enter your name here