ಜಾತಿವಾರು ಹಾಸ್ಟೆಲ್ ಗಳು ಜನರಲ್ ಹಾಸ್ಟೆಲ್ ಗಳಾಗಲಿ

0
34

ಬೆಂಗಳೂರು:

      ಜಾತಿರಹಿತವಾಗಿ ಮಕ್ಕಳು ಕಲಿಯಿವಂತಾಗಲು ಜಾತಿ ಆಧಾರಿತವಾಗಿರುವ ಹಾಸ್ಟೆಲ್ ಗಳು ಜನರಲ್ ಹಾಸ್ಟೆಲ್‍ಗಳೆಂದು ಪರಿಗಣಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

      ಎಸ್‍.ಸಿ., ಎಸ್.ಟಿ. ಹಾಸ್ಟೆಲ್ ವಿಚಾರದ ಚರ್ಚೆ ವೇಳೆ ಜಾತಿ ವ್ಯವಸ್ಥೆ ತೆಗೆಯಲು ಸಲಹೆ ನೀಡಿರುವ ಡಿಸಿಎಂ, ಇತ್ತೀಚೆಗೆ ಎಲ್ಲೆಡಯೂ ಜಾತಿ ವ್ಯವಸ್ಥೆ ಹೆಚ್ಚಾಗಿದೆ. ಅದನ್ನು ಹೋಗಲಾಡಿಸಬೇಕು. ಅದಕ್ಕೆ, ಎಸ್‍.ಸಿ. ಎಸ್.ಟಿ. ಹಾಸ್ಟೆಲ್‍ಗಳೆಲ್ಲವನ್ನೂ ಜನರಲ್ ಹಾಸ್ಟೆಲ್ ಎಂದು ಪರಿಗಣಿಸಿ ಜಾತಿ ಪದ್ಧತಿಯನ್ನು ಹೋಗಲಾಡಿಸಿ, ಪ್ರತಿ ಜಿಲ್ಲೆಗೂ ಒಂದು ಜನರಲ್ ಹಾಸ್ಟಲ್ ನಿರ್ಮಾಣ ಮಾಡಿ, ಅದರಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಬೇಕು. ಯಶಸ್ವಿಯಾದರೆ ಎಲ್ಲೆಡೆಯೂ ಅದೇ ವ್ಯವಸ್ಥೆ ಮಾಡೋಣ ಎಂದು ತಿಳಿಸಿದರು.

      ಸಾಮಾನ್ಯ ಹಾಸ್ಟೆಲ್‍ನಲ್ಲಿ ಶೇ.25% ಒಬಿಸಿ ಶೇ.10% ಅಂತೆಲ್ಲಾ ಅಧಿಕಾರಿಗಳೇ ವಿಭಾಗಿಸಿದರೆ, ಮಕ್ಕಳಲ್ಲಿ ಈ ಮನಸ್ಥಿತಿ ಹೇಗೆ ಹೋಗುತ್ತದೆ. ಹೀಗೆ ಶೇಕಡವಾರು ಬೇರೆ ಬೇರೆ ಮಾಡೋದು ಬೇಡ. ಜಾತಿ ವ್ಯವಸ್ಥೆ ಹೋಗಬೇಕು. ಎಲ್ಲರೂ ಒಂದೇ ಅನ್ನೋ ಭಾವನೆ ಮಕ್ಕಳಲ್ಲಿ ಬರುವಂತೆ ನಾವು ಮಾಡಬೇಕು. ಅದಕ್ಕೆ ಜನರಲ್ ಹಾಸ್ಟೆಲ್(ಸಾರ್ವಜನಿಕ ವಿದ್ಯಾರ್ಥಿ ನಿಲಯ) ಎಂದು ಕರೆಯಿರಿ ಎಂದು ಸಲಹೆ ನೀಡಿದರು.

LEAVE A REPLY

Please enter your comment!
Please enter your name here