ಜಾತ್ಯತೀತ ರಾಜಕೀಯ ಪಕ್ಷ ಅಧಿಕಾರಕ್ಕೆ ಬರಲಿ

0
18

ಮಾನ್ಯರೆ,

ತುಮಕೂರು

ಅಧಿಕಾರಕ್ಕೆ ಬರಲು ಬಯಸುವ ಯಾವುದೇ ರಾಜಕೀಯ ಪಕ್ಷವು ತಾನು ಪರಿಶುದ್ಧ ಜಾತ್ಯತೀತ ಪಕ್ಷ ಎನ್ನಿಸಿಕೊಳ್ಳಬೇಕಾದರೆ ಪ್ರಜಾಪ್ರಭುತ್ವ ವಿರೋಧಿ ಜಾತಿ ವ್ಯವಸ್ಥೆಯನ್ನು ಬೇರು ಸಹಿತ ಕಿತ್ತು ಹಾಕಲು ಈ ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಅವುಗಳೆಂದರೆ, ಜಾತಿಗಣತಿಯನ್ನು ನಿಷೇಧಿಸುವುದು, ಸರ್ಕಾರಿ ದಾಖಲೆಗಳಲ್ಲಿ ಜಾತಿಮತ ಅಂಕಣವನ್ನು ಶಾಶ್ವತವಾಗಿ ತೆಗೆದು ಬಿಡುವುದು, ಎಲ್ಲಾ ಜಾತಿ ಮತಗಳ ಕಡುಬಡವ, ದಲಿತ ವಿದ್ಯಾರ್ಥಿಗಳಿಗೆ ಒಟ್ಟಿಗೆ ಆಶ್ರಯ ನೀಡುವ ಜಾತ್ಯತೀತ / ಸಾರ್ವಜನಿಕ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸುವುದು, ಎಲ್ಲಾ ಜಾತಿ ಮತಗಳ ಕಡುಬಡವರಿಗೆ, ದಲಿತರಿಗೆ ಮಾತ್ರ ಮೀಸಲಾತಿ ಸೌಲಭ್ಯ ಇರಬೇಕು. ಮೀಸಲಾತಿಗೆ ಜಾತಿಯಲ್ಲ ಕುಟುಂಬ ಆಧಾರವಾಗಿರಲಿ. ಜಾತಿಯ ಆಧಾರದ ಮೇಲೆ ಮುಂದುವರಿಯುವುದು, ಪ್ರತಿಯೊಂದು ಜಾತಿಯಲ್ಲಿನ ದಲಿತ, ಬಡ ಕುಟುಂಬಗಳ ಸಂಖ್ಯೆ ಅಥವಾ ಪ್ರಮಾಣಕ್ಕನುಗುಣವಾಗಿ ಮೀಸಲಾತಿ ಸೌಲಭ್ಯಗಳು ದೊರಕುವಂತಿರಬೇಕು. ಮೀಸಲಾತಿಗೆ ಕಾಲಾವಧಿ ಇರಲಿ, ದಲಿತ, ಕಡುಬಡವ ವ್ಯಕ್ತಿಗೆ ಆರ್ಥಿಕವಾಗಿ ಬಲಿತನಾದ ಮೇಲೆ ಅನ್ಯ ದಲಿತರಿಗೆ ನೆರವು ನೀಡುವಂತೆ ನಿರ್ಬಂಧವನ್ನು ವಿಧಿಸಬೇಕು. ಇದಕ್ಕೆ ಸಮ್ಮತಿಸುವ ರಾಜಕೀಯ ಪಕ್ಷವನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿ ಶಾಸನ ಸಭೆಗೆ ಕಳುಹಿಸಬೇಕೆಂದು ವಿನಂತಿ.
                                                                                -ಕೆ.ಎನ್. ಮಲ್ಲಿಕಾರ್ಜುನ, ಮಾರುತಿನಗರ, ತುಮಕೂರು.

LEAVE A REPLY

Please enter your comment!
Please enter your name here