ಜಾನಪದ ಸಾಹಿತ್ಯ ಎಲ್ಲಾ ಬಗೆಯ ಸಾಹಿತ್ಯಕ್ಕೆ ತಾಯಿ ಬೇರು – ತಹಶೀಲ್ದಾರ ಮಂಜುನಾಥ.ಕೆ

0
38

 ಕೊಟ್ಟೂರು:

      ಸಾಹಿತ್ಯ ಸಂಸ್ಕತಿಯ ತಾಯಿ ಬೇರು ಜಾನಪದ ಸಾಹಿತ್ಯವಾಗಿದ್ದು ಇದರಲ್ಲಿನ ಅಗಾಧತೆಯನ್ನು ಇತರ ಯಾವುದೇ ಸಾಹಿತ್ಯದಿಂದಲೂ ಅಳೆಯಲಾಗದು. ಇಂತಹ ಜಾನಪದ ಕಲೆ ಸಂಸ್ಕøತಿ ಸಾಹಿತ್ಯವನ್ನು ಪ್ರತಿಯೊಬ್ಬರು ಪೋಷಿಸಿಕೊಂಡು ಹೋಗಬೇಕು ಎಂದು ತಹಶೀಲ್ದಾರ ಮಂಜುನಾಥ.ಕೆ ಹೇಳಿದರು.

      ಭಾನುವಾರ ಪಟ್ಟಣದ ಕೊಟ್ಟೂರೇಶ್ವರ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ಜಾನಪದ ಪರಿಷತ್‍ನ ಕೊಟ್ಟೂರು ತಾಲೂಕು ಘಟಕವನ್ನು ಸಮಾಳ ವಾದ್ಯವನ್ನು ಬಾರಿಸುವುದೊರೊಂದಿಗೆ ಉದ್ಘಾಟಿಸಿದ ಅವರು ರಾಜ್ಯದ ಜಾನಪದ ಪರಿಷತ್‍ನ 70ರ ದಶಕದಲ್ಲಿ ಹೆಚ್.ಎಲ್.ನಾಗೇಗೌಡ ಹುಟ್ಟು ಹಾಕುವ ಮೂಲಕ ಜಾನಪದ ಕಲೆ ಸಾಹಿತ್ಯವನ್ನು ಪ್ರೇರೇಪಿಸುವ ಕೆಲಸ ಮಾಡಿದರು. ಇದಕ್ಕಾಗಿ ಚನ್ನಪಟ್ಟಣದ ಬಳಿ ಕಲಾ ಗ್ರಾಮವನ್ನೆ ಅವರು ಹುಟ್ಟು ಹಾಕಿ ಜಾನಪದಕ್ಕಿರುವ ಅಂತಃಸತ್ವದ ಪರಿಚಯವನ್ನು ಯುವ ಜನಾಂಗಕ್ಕೆ ಮತ್ತು ಇತರರಿಗೆ ಮಾಡುವತ್ತ ತೊಡಗಿಸಿಕೊಂಡರು ನಿಜಕ್ಕೂ ಜಾನಪದ ಸೊಗಡು ಕೇವಲ ಹಿಂದಿನ ಕಾಲದ ಸಾಹಿತ್ಯ ಶ್ರೀಮಂತಿಕೆಯನ್ನು ಬಿಂಬಿಸದೆ ಪ್ರಸ್ತುತ ವಿದ್ಯಮಾನದಲ್ಲೂ ಸಹ ಅದರ ಅಗತ್ಯತೆಯನ್ನು ಮನ ಗಾಣಿಸಲು ಶ್ರಮಿಸಿದರು ಎಂದು ಹೇಳಿದರು.

      ವಿಶೇಷ ಉಪನ್ಯಾಸ ನೀಡಿದ ಹಂಪಿ ವಿಶ್ವ ವಿದ್ಯಾಲಯದ ಪ್ರಾಧ್ಯಾಪಾಕ ಡಾ|| ಅರುಣ ಜೋಳದಕೂಡ್ಲಿಗಿ ಜಾನಪದ ಸಂಸ್ಕತಿ ಎಂದು ಮಾಸಲಾಗದ ಸಾಹಿತ್ಯವಾಗಿದೆ ಯಾವುದೇ. ಹಂತದಲ್ಲಿ ಈ ಜಾನಪದ ಸಾಹಿತ್ಯಕ್ಕೆ ಎಂದೆಂದೆ ಅವಸಾನ ಬಾರದು. ಆಕಾಶದೆತ್ತರ ಪ್ರಮಾಣದ ಸತ್ವವನ್ನು ಇದು ಹೊಂದಿದ್ದು ಇದರ ಸಾಹಿತ್ಯವನ್ನು ಎಲ್ಲಾ ಬಗೆಯಲ್ಲಿ ಬಳಸಿಕೊಳ್ಳಬಹುದಾಗಿದೆ ಆದರೆ ನೈಜ ಜಾನಪದ ಸಾಹಿತ್ಯ ಮತ್ತು ಕಲೆಗೆ ಎಂದು ಕುಂದುಂಟು ಆಗದಂತೆ ಗಮನಹರಿಸಬೇಕು ಎಂದು ಹೇಳಿದರು

      ಜಾನಪದ ಸಾಹಿತ್ಯದಲ್ಲೂ ಸಹ ಹೆಣ್ಣನ್ನು ಕೇವಲ ಬಲಿ ಪಶು ಮಾಡುವ ಪ್ರಸಂಗಗಳು ಪ್ರಚಲಿತ ಪಡೆದುಕೊಂಡಿವೆ. ಇದನ್ನೆ ಮೇಲ್ಪಂಕ್ತಿ ಎಂದು ಹೆಸರಿಸಿ ಹೆಣ್ಣನ್ನು ಶೋಷಣೆ ಮಾಡಲಾಗಿದೆ ಆದರೆ. ಈ ಪ್ರಸಂಗವನ್ನೆ ಎತ್ತಿಹಿಡಿಯುವ ಕೆಲಸ ಆಗಬಾರದು ಜಾನಪದ ಸಂಸ್ಕøತಿ ಕಲೆಗೆ ಯಾವುದೇ ಕಲೆ ಸಾಟಿ ಇಲ್ಲ ಎಲ್ಲಾ ಸ್ತರದಲ್ಲಿ ಇದಕ್ಕೆ ಸಲ್ಲಬೇಕಾದ ನ್ಯಾಯವನ್ನು ಪ್ರತಿಯೊಬ್ಬರು ಅದರಲ್ಲೂ ಕನ್ನಡದವರು ಸಲ್ಲಿಸಬೇಕು ಎಂದರು.

      ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಜಾನಪದ ಪರಿಷತ್ ಅಧ್ಯಕ್ಷ ಟಿ.ಎಂ.ಬಸವರಾಜಯ್ಯ ಮಾತನಾಡಿ ಜಾನಪದ ಪರಿಷತ್‍ನ್ನು ಜಿಲ್ಲೆಯಲ್ಲಿ ಸದೃಡವಾಗಿ ಸಂಘಟಿಸುವ ಕೆಲಸವನ್ನು ಮಾಡಲಾಗುತ್ತಿದೆ ಈಗಾಗಲೇ ಜಿಲ್ಲೆಯ ಎಲ್ಲಾ ತಾಲೂಕು ಘಟಕಗಳನ್ನು ರಚಿಸಲಾಗಿದೆ ಕೊಟ್ಟೂರಿನ ತಾಲೂಕನ್ನು ಮಹಿಳೆಯರಿಗೆ ಮೀಸಲಿರಿಸಿ ರಚಿಸಲಾಗಿದೆ ಇದೊಂದು ಜಾನಪದ ಸಂಸ್ಕøತಿಯನ್ನು ಎತ್ತಿಹಿಡಿಯುವ ಕೆಲಸ ಎಂದರು.

      ಕೊಟ್ಟೂರು ತಾಲೂಕು ಘಟಕದ ಅಧ್ಯಕ್ಷೆ ನಿರ್ಮಲ ಶಿವನಗುತ್ತಿ, ಜಾನಪದ ಪರಿಷತ್‍ನ ಬಳ್ಳಾರಿ ಕೋಶ ಅಧ್ಯಕ್ಷೆ ಇಂದ್ರಾಣಿ, ಅಧ್ಯಕ್ಷೆ ಡಾ|| ಸಿದ್ದೇಶ್ವರಿ, ಕೂಡ್ಲಿಗಿ ಘಟಕದ ಅಧ್ಯಕ್ಷ ಕೆ.ಎಂ.ವೀರೇಶ್, ಜಿಲ್ಲಾ ಪರಿಷತ್ ಕಾರ್ಯದರ್ಶಿ ಪ್ರಕಾಶ್ ವಸ್ರದ, ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕೊಟ್ಟೂರು ತಾಲೂಕು ಘಟಕದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಅಧಿಕಾರ ಪದಗ್ರಹಣ ಸ್ವೀಕರಿಸಿದರು.

      ಜಾನಪದ ಪರಿಷತ್‍ನ ಕೊಟ್ಟೂರು ಘಟಕದ ಡಾ|| ಅನುಪಮ ಸ್ವಾಗತಿಸಿದರು, ನಿರ್ಮಲಮ್ಮ ಪ್ರಸ್ತಾವಿಕವಾಗಿ ಮಾತನಾಡಿದರು, ಸರೋಜಮ್ಮ, ಅನಿತ, ನಿರೂಪಿಸಿದರು. ನಂತರ ಜಾನಪದ ಕಲೆಗಳಾದ ಸಮಾಳ ವಾದ್ಯ, ನಂದಿಕೋಲು ಕುಣಿತ, ಭರತನಾಟ್ಯ, ಮುಂತಾದವುಗಳನ್ನು ಸಮಾರಂಭದಲ್ಲಿ ಪ್ರದರ್ಶಿಸಲಾಯಿತು.

 

LEAVE A REPLY

Please enter your comment!
Please enter your name here