ಜಿಲ್ಲಾ ನೌಕರರ ಸಂಘದಿಂದ ಪ್ರತಿಭಾ ಪುರಸ್ಕಾರ

0
7

 

ಹಾವೇರಿ –

  ಪ್ರತಿಭೆ ಎನ್ನುವುದು ಯಾವುದೇ ಜಾತಿಗೆ ಸೀಮಿತವಾದುದಲ್ಲ ಮತ್ತು ಪುರಸ್ಕಾರ ಎನ್ನುವದು ಸಹ ಜಾತಿಗೆ ಸೀಮಿತವಾಗದೇ ಎಲ್ಲವರ್ಗದಲ್ಲಿನ ಪ್ರತಿಭಾನ್ವಿತರನ್ನು ಗುರುತಿಸಿ ಸನ್ಮಾನಿರುತ್ತಿರುವುದು ಬಹಳ ಸಂತೋಷದಾಯಕವಾಗಿದೆ ಎಂದು ಬಾಲೇಹೊಸೂರ ದಿಂಗಾಲೇಶ್ವರ ಸ್ವಾಮಿಜಿ ಹೇಳಿದರು.

  ನಗರದ ಸರ್ಕಾರಿ ನೌಕರರ ಸಂಘದ ಸಭಾಭವನದಲ್ಲಿ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಸಮಾರಂಭದ ಸಾನಿಧ್ಯವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳನ್ನು ಪ್ರತಿಭಾ ಪುರಸ್ಕಾರಗಳು ಜಾತಿಗೆ ಸೀಮಿತವಾಗುವದನ್ನು ಕಾಣುತ್ತಿದ್ದೇವೆ. ಆದರೆ, ಇಲ್ಲಿ ಎಲ್ಲ ಜಾತಿಯ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಗುರುತಿಸಿ ವಿಶೇಷವಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲೀಮ ವಿದ್ಯಾರ್ಥಿಗಳು ಗುರುತಿಸಿ ಸನ್ಮಾನಿಸುತ್ತಿರುವುದು ಗಮನಾರ್ಹವಾದ ಸಂಗತಿ ಎಂದರು.
ಪ್ರಸಕ್ತ ನಗರದ ಪ್ರದೇಶ ವಿದ್ಯಾರ್ಥಿಗಳ ಪ್ರತಿಭೆಗೆ ಸಮಾನಾಂರತವಾಗಿ ಗ್ರಾಮಿಣ ಭಾಗದ ವಿದ್ಯಾರ್ಥಿಗಳು ಪೈಪೋಟಿಯನ್ನು ನೀಡುತ್ತಿದ್ದಾರೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿನಿಯರು ತೇರ್ಗಡೆ ಆಗುತ್ತಿದ್ದಾರಲ್ಲದೆ ಪ್ರಥಮ ಸ್ಥಾನದಲ್ಲಿ ಬರುತ್ತಿದ್ದರೆ ಎಂದರು.

  ಕಳೆದ ಕೆಲ ದಶಕಗಳ ಹಿಂದಿನ ವಿದ್ಯಾರ್ಥಿಗಳಿಗೆ ತರಗತಿಯ ಶುಲ್ಕ ಕಟ್ಟುವದಕ್ಕೆ ಮತ್ತು ಒಂದೆರಡು ಬಟ್ಟೆಗಳನ್ನು ಕೊಳ್ಳುವದಕ್ಕೂ ಸಾಧ್ಯವಾಗುತ್ತಿರಲಿಲ್ಲವಲ್ಲದೆ ಆಹಾರಕ್ಕಾಗಿ ಮಠಮಾನ್ಯಗಳನ್ನು ಅವಲಂಬಿಸಬೇಕಾಗಿತ್ತು. ಇಂತಹ ಸಮಸ್ಯೆಗಳ ನಡೆವೆಯೂ ಉತ್ತಮ ಅಂಕಗಳನ್ನು ಅಂದಿನ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿದ್ದರು. ಆದರೆ, ಇಂದಿನ ಪಾಲಕರು ವಿದ್ಯಾರ್ಥಿಗಳಿಗೆ ಅವಶ್ಯಕತೆಗಿಂದ ಹೆಚ್ಚಿನ ಸೌಲಭ್ಯಗಳನ್ನು ಒದಗಿಸುತ್ತಿರುವದರಿಂದಾಗಿ ಅವರಿಗೆ ಹಸಿವಿನ ಅರಿವು ಮತ್ತು ಶಿಕ್ಷಣದ ಮಹತ್ವ ಅರ್ಥವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಪಾಲಕರು ತಮಗಿದ್ದ ಸೌಲಭ್ಯಗಳು ಮತ್ತು ಕಷ್ಟಗಳನ್ನು ಮೆಲುಕು ಹಾಕಿಕೊಂಡು ಮಕ್ಕಳಿಗೆ ಸೌಲಭ್ಯಗಳನ್ನು ನೀಡುವತ್ತ ಚಿಂತನೆ ಮಾಡುವಂತೆ ಹೇಳಿದರು.

   ಶಾಸಕ ನೆಕರು ಓಲೇಕಾರ ನೋಡುವದಕ್ಕೆ ಸ್ವಲ್ಪ ಕಠಿಣದಂತೆ ಕಂಡರು ಕೆಲಸ ಕಾರ್ಯಗಳನ್ನು ಮಾಡುವಲ್ಲಿ ಯಾವುದೇ ರಾಜಿ ಇರುವದಿಲ್ಲ. ಹಿಂದಿನ ಅವಧಿಯಲ್ಲಿ ಶಾಸಕರಿದ್ದಾಗಲೂ ಉತ್ತಮ ಕೆಲಸಗಳನ್ನು ಮಾಡಿದ್ದರು. ಈ ಅವಧಿಯಲ್ಲಿ ಕೆಲಸ ಕಾರ್ಯಗಳನ್ನು ಮಡಿಸಿಕೊಳ್ಳುವಂತೆ ಜನತೆಗೆ ಕರೆನೀಡಿದರು.
ಸರ್ಕಾರಿ ನೌಕರರ ಸಂಘ ಪ್ರತಿಭಾನ್ವಿರನ್ನು ಗುರುತಿಸಿ ಪರಸ್ಕಾರವನ್ನು ಮಾಡುತ್ತಿರುವುದು ಒಳ್ಳೆಯದು. ಸಂಘದಿಂದ ಇಂತಹ ಕಾರ್ಯಗಳು ಮೇಲಿಂದ ಮೇಲೆ ಜರುಗುತ್ತಿರಲಿ. ಸಮಾಜ ಮುಖು ಕಾರ್ಯಕ್ರಮಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಆಯೋಜನೆ ಮಾಡುವಂತೆ ಸಂಘದ ಅಧ್ಯಕ್ಷರಿಗೆ ಹೇಳಿದರು.

  ಹುಕ್ಕೇರಿಮಠದ ಸದಾಶಿವ ಸ್ವಾಮಿಜಿ ಶನಿವಾರ ಮೌನಾನುಷ್ಠಾನವನ್ನು ಮಾಡುವದರಿಂದ ಅವರು ಮಾತನಾಡಲಿಲ್ಲ. ವೇದಿಕೆಯಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಹಾಲಪ್ಪನವರಮಠ, ಕಾರ್ಯದರ್ಶಿ ಸಿ.ವಿ.ಹಿರೇಮಠ, ಎಂ.ಎ.ಎಣ್ಣಿ, ಎಸ್.ಬಿ.ಕಿನ್ನಾಳ, ಆರ್.ಡಿ.ಹೊಂಬರಡಿ, ಕೆ.ಪಿ.ಬ್ಯಾಡಗಿ, ಎನ್.ಎಂ. ಪಾಟೀಲ, ಜೆ.ಎನ್.ಜಾವೂರ, ಸುರೇಶ ಕಲ್ಮನಿ ಹಾಗೂ ಇತರರು ಇದ್ದರು.
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಹಾಲಪ್ಪನವರಮಠ ಸ್ವಾಗತಿಸಿದರು, ಸಿ.ವಿ.ಹಿರೇಮಠ ಪ್ರಾಸ್ತಾವಿಕ ಮಾತನಾಡಿದರು, ಎಫ್.ಬಿ.ಮರಡೂರ ವಂದಿಸಿದರು.

LEAVE A REPLY

Please enter your comment!
Please enter your name here